ಬೆಂಗಳೂರು : ಕುಡಿದು ಶಾಲಾ ಬಸ್‌ಗಳನ್ನು ಓಡಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದುಪಡಿಸುವುದಾಗಿ ಸಾರಿಗೆ ಇಲಾಖೆ ಆದೇಶಿಸಿದೆ.
ಪೊಲೀಸ್ ಇಲಾಖೆಯಿಂದ ಶಿಫಾರಸು ಮಾಡಲ್ಪಟ್ಟ ಡಿಎಲ್‌ಗಳನ್ನು ಆರ್‌ಟಿಒ ಅಧಿಕಾರಿಗಳು ಅಮಾನತು ಮಾಡಲಿದ್ದಾರೆ. ಅಲ್ಲದೆ, ಶಾಲಾ/ಕಾಲೇಜು ವಾಹನಗಳ ಅರ್ಹತಾ ಪತ್ರ ನವೀಕರಣ ಮಾಡೋದು ಕಡ್ಡಾಯ. ನವೆಂಬರ್ 30ರ ಒಳಗೆ ಎಫ್‌ಸಿ ಮಾಡಿಸಿಕೊಳ್ಳಲು ಡೆಡ್‌ಲೈನ್ ವಿಧಿಸಲಾಗಿದೆ. ಹೊರರಾಜ್ಯದ ಬಸ್‌ಗಳಲ್ಲಿ ಅನಧಿಕೃತ ಲಗೇಜ್ ಕಂಡುಬಂದರೆ ವಾಹನಗಳ ಸೀಜ್ ಮಾಡಲಾಗುತ್ತದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಹೊರರಾಜ್ಯಗಳಲ್ಲಿ ನೋಂದಣಿಗೊಂಡು ರಾಜ್ಯದಲ್ಲಿ ಸಂಚರಿಸುವ ವಾಹನಗಳಿಗೆ ರಾಜ್ಯದ ತೆರಿಗೆ ವಸೂಲಿಗೆ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರ್‌ಟಿಒ ಕಚೇರಿ ಒಳಗೆ ಬ್ರೋಕರ್‌ಗಳು ಬರಬಾರದು. ಏಜೆಂಟ್ ಮುಖಾಂತರ ಡಿಎಲ್ ಸೇರಿದಂತೆ ಹಲವು ದಾಖಲೆಗಳನ್ನು ಕೊಟ್ಟರೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಆಗಲಿದೆ ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಜೊತೆಗೆ, ಕರ್ನೂಲ್ ಬಸ್ ದುರಂತದಿಂದಾಗಿ ರಾಜ್ಯದಲ್ಲಿ ಸಂಚರಿಸೋ ಎಲ್ಲಾ ಬಸ್‌ಗಳ ಹಿಂಭಾಗದಲ್ಲಿ ಎಮರ್ಜೆನ್ಸಿ ಡೋರ್ ಕಡ್ಡಾಯವಾಗಿರಬೇಕು ಎಂದು ಆದೇಶಿಸಲಾಗಿದೆ. ಪ್ರಯಾಣಿಕರು ಹತ್ತಿ ಇಳಿಯುವ ಹಾಗೆಯೇ ಇರಬೇಕು. ಇಲ್ಲದಿದ್ದರೇ ಬಸ್‌ಗಳ ಎಫ್‌ಸಿ ರದ್ದು ಮಾಡಲಾಗುತ್ತದೆ ಎಂದು ಹೇಳಲಾಗಿದೆ.































