ದಾವಣಗೆರೆ: ಒಂದು ವಾರದಲ್ಲಿ ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ಹೇಳಿ ಆಮಿಷವೊಡ್ಡಿದ್ದ ದಂಪತಿ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಅನಂತಪುರ ನಿವಾಸಿಗಳಾದ ಬೊಗ್ಗು ಶ್ರೀರಾಮುಲು ಹಾಗೂ ಪುಷ್ಪಾ ದಂಪತಿ ಕೋಟ್ಯಂತರ ರೂಪಾಯಿ ಮೋಸ ಮಾಡಿ ಪರಾರಿಯಾಗಿದ್ದಾರೆ. ದಾವಣಗೆರೆಯಲ್ಲಿ ವಿವಿಧ ಗ್ರಾಮಗಳ ಮಹಿಳೆಯರಿಗೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ ಹಣ ಪಡೆದಿದ್ದರು. ಹಣ ಡಬ್ಲಿಂಗ್ ಆಸೆಗೆ ರೇಣುಕಮ್ಮ ಎಂಬುವವರು 33 ಲಕ್ಷ ನೀಡಿದ್ದರು. ಮೀನಾ ಎಂಬುವವರು 40 ಲಕ್ಷ, ಪ್ರಿಯಾಂಕ 50 ಲಕ್ಷ, ತಿರುಮಲೇಶ್ 17 ಲಕ್ಷ ಹೀಗೆ ಹಲವರು ಲಕ್ಷ ಲಕ್ಷ ಹಣ ಕೊಟ್ಟಿದ್ದರು.
ರಿಯಲ್ ಎಸ್ಟೇಟ್ ವ್ಯವಹರದಲ್ಲಿ ಹಣ ಹಾಕಿ ಡಬಲ್ ಮಾಡಿಕೊಡುವುದಾಇ ಹೇಳಿ ಹಣ ಪಡೆದ ದಂಪತಿ ಈಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಹಣ ಕಳೆದುಕೊಂಡವರು ಜಗಳೂರು ಠಾಣೆಯಲ್ಲಿ ದೂರು ನೀಡಿದ್ದಾರೆ.
































