ನವದೆಹಲಿ: ಅಂಕಿತ ಪನ್ವಾರ್, ಐಐಟಿಯಲ್ಲಿ ವ್ಯಾಸಂಗ ಮಾಡಿ, ತಿಂಗಳಿಗೆ 22 ಲಕ್ಷ ಹಣ ಸಂಪಾದಿಸುತ್ತಿದ್ದರು. ಆದರೆ ಇಂತಹ ದೊಡ್ಡ ಉದ್ಯೋಗಕ್ಕೆ ಗುಡ್ ಬೈ ಹೇಳಿ ಸದ್ಯ ಬೇರೆಯವರಿಗೆ ಸ್ಫೂರ್ತಿಯಾಗಿದ್ದಾರೆ.
ಜಿಂದ್ ಜಿಲ್ಲೆಯ ಗೋಸೈನ್ ಗ್ರಾಮದ ಅಂಕಿತಾ ಪನ್ವಾರ್, ಚಂಡೀಗಢದಲ್ಲಿದ್ವಿತೀಯ ಪಿಯುಸಿ ಯನ್ನು ಶೇಕಡಾ 97.6ರಷ್ಟು ಅಂಕ ಪಡೆದು ತೇರ್ಗಡೆಯಾದರು. ಪಿಯುಸಿ ಪೂರ್ಣಗೊಳಿಸಿದ ನಂತರ ನಾಗರಿಕ ಸೇವೆಗಳಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು. ಶೈಕ್ಷಣಿಕ ಕೌಶಲ್ಯದೊಂದಿಗೆ, ಜೆಇಇ ತೇರ್ಗಡೆಯಾದ ನಂತರ ಐಐಟಿ ರೂರ್ಕಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದರು.
ತಮ್ಮ ವಿದ್ಯಾಭ್ಯಾಸ, ಜ್ಞಾನಕ್ಕೆ ತಕ್ಕಂತೆ ರೂ 22 ಲಕ್ಷ ಪ್ಯಾಕೇಜ್ನೊಂದಿಗೆ ಕ್ಯಾಂಪಸ್ ಪ್ಲೇಸ್ಮೆಂಟ್ಗೆ ಬಂದರು. ಎರಡು ವರ್ಷಗಳು ಕಾರ್ಪೊರೇಟ್ ವಲಯದಲ್ಲಿ ಕೆಲಸ ಮಾಡಿದರು. 2 ವರ್ಷಗಳ ನಂತರ ಅಂಕಿತಾ ಅವರು ನಾಗರಿಕ ಸೇವೆಗಳ ಮೇಲಿನ ಉತ್ಸಾಹವನ್ನು ಅನುಸರಿಸಲು ನಿರ್ಧರಿಸಿದರು.
2020ರಲ್ಲಿ ಅಂಕಿತಾ ಅವರು ಎರಡನೇ ಬಾರಿಗೆ UPSC ಪರೀಕ್ಷೆಯನ್ನು ಬರೆದರು. ಫಲಿತಾಂಶದಲ್ಲಿ 321ನೇ ಅಂಕ ಪಡೆದರು. ಆದರೆ ಅದು ಅವರಿಗೆ ತೃಪ್ತಿ ನೀಡಲಿಲ್ಲ. 2022ರಲ್ಲಿ 4ನೇ ಬಾರಿ UPSC ಪರೀಕ್ಷೆಯನ್ನು ಎದುರಿಸಿದ ಅಂಕಿತಾ ಅವರು 28 ನೇ ಅಖಿಲ ಭಾರತ ಶ್ರೇಣಿಯನ್ನು ಪಡೆದುಕೊಂಡು, ಅಸ್ಕರ್ IAS ಹುದ್ದೆಯನ್ನು ಪಡೆದುಕೊಂಡರು.

































