ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಶೀತಚಳಿ ಹೆಚ್ಚಾಗಿದ್ದು ಮೈನಡುಗುವ ಚಳಿಗೆ ಜನರು ತತ್ತರಿಸಿದ್ದಾರೆ.
ರಾಜ್ಯದಲ್ಲಿ ಸಂಜೆ 6ರ ನಂತರ ಚಳಿಯ ಕೊರೆತ ಆರಂಭವಾಗುತ್ತದೆ. ನಂತರ ಬೆಳಗಿನವರೆಗೆ ಕೊರೆಯುವ ಚಳಿ ಮುಂದುವರಿಯುತ್ತದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಅವಧಿಗೆ ಮುಂಚೆಯೇ ಈ ಬಾರಿ ಹೆಚ್ಚು ಚಳಿಯ ಅನುಭವವಾಗತೊಡಗಿದೆ. ಸಾಮಾನ್ಯವಾಗಿ ಡಿಸೆಂಬರ್ ನಲ್ಲಿ ಮೈ ಕೊರೆಯುವ ಚಳಿಗೆ ಗಡಗಡ ನಡುಗುತ್ತಿದ್ದ ಜನ ಇದೀಗ ನವೆಂಬರ್ ಮಧ್ಯ ಭಾಗದಲ್ಲೇ ಚಳಿ ಹೆಚ್ಚಾಗಿದೆ.
ಬೆಳಗಾವಿಯಲ್ಲಿ 11.2 ಡಿ.ಸೆ, ವಿಜಯಪುರ 11 ಡಿ.ಸೆ, ಧಾರವಾಡ 11.6 ಡಿ.ಸೆ, ಗದಗ 13.2ಡಿ.ಸೆ, ಕಲಬುರಗಿ 15.1 ಡಿ.ಸೆ., ಹಾವೇರಿ 14.2ಡಿ.ಸೆ ಕೊಪ್ಪಳ 13.8 ಡಿ.ಸೆ, ಬೀದರ್ನಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ನ.17ರಂದು 9.5 ಡಿ.ಸೆ ದಾಖಲಾಗಿತ್ತು.
































