ಸಕಲೇಶಪುರ: ಕೆಲಸಕ್ಕೆಂದು ಕರೆದುಕೊಂಡು ಹೋಗಿ ಗುಂಡು ಹೊಡೆದು ಕೊಲೆಮಾಡಲು ಯತ್ನಿಸಿದ ಘಟನೆ ದಿನಾಂಕ ನ.16 ರಂದು ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
47 ವರ್ಷದ ಗಾಯಲು ದಿನೇಶ್ ಕುಲಾಲ್ ರವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮೃತ ದಿನೇಶ್ ಕುಲಾಲ್ ರವರ ಮಗ ಜೀವನ್ ಬಣಕಲ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇಬ್ಬರನ್ನು ಪೋಲಿಸರು ಬಂಧಿಸಿದ್ದಾರೆ.
ಘಟನೆ ವಿವರ
ಸೃಜನ್ ಶುಂಟಿಕೊಪ್ಪ ಎಂಬುವವರು ದಿನಾಂಕ ನ.16ರಂದು ಸಬ್ಟೇನಹಳ್ಳಿ ಎಸ್ಟೇಟ್ ಗೆ ದಿನೇಶ್ ಕುಲಾಲ್ ರವರನ್ನು ಮಹೇಂದ್ರ ಬೊಲೆರೋ ವಾಹನದಲ್ಲಿ ಕರೆದುಕೊಂಡು ಬಂದು, ದಿನಾಂಕ ನ.22ರಂದು ಸಂಜೆ 6ರಿಂದ 7ಗಂಟೆ ಸುಮಾರಿಗೆ ಮೃತ ದಿನೇಶ್ ರವರ ಮಗಳ ದೂರವಾಣಿ ಸಂಖ್ಯೆ ಗೆ ಕರೆ ಮಾಡಿ ಇವತ್ತು ಮಧ್ಯಾಹ್ನ 12:30 ಸುಮಾರಿಗೆ ನಿಮ್ಮ ತಂದೆಗೆ ಸ್ಟ್ರೋಕ್ ಆಗಿದೆ ಎಂದು ಸುಳ್ಳು ಮಾಹಿತಿ ನೀಡಿ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆಸಿಕೊಂಡಿರುತ್ತಾರೆ.
ಅಲ್ಲಿ ನಮ್ಮ ತಂದೆಯನ್ನು ನೋಡಿದಾಗ ಅವರ ಕುತ್ತಿಗೆಯಿಂದ ಭಾರೀ ರಕ್ತ ಸ್ರಾವ ಆಗಿದ್ದನ್ನು ಕಂಡು ನಾನು(ಮೃತ ದಿನೇಶ್ ಕುಲಾಲ್ ರವರ ಮಗ ಜೀವನ್) ಸೃಜನ್ ರವರಿಗೆ ಹೇಳಿದಾಗ ಸೃಜನ್ ರವರು ಕೆ ಎಂ ಸಿ ಆಸ್ಪತ್ರೆಗೆ ತಂದೆಯನ್ನು ದಾಖಲಿಸಿದೆವು. ನಂತರ ಆರೋಗ್ಯದಲ್ಲಿ ಏರುಪೇರಾದ ಕಾರಣ ವೈದ್ಯರನ್ನು ಕೇಳಿದಾಗ ಅವರಿಗೆ ಏರ್ ಗನ್ ನಿಂದ ಶೂಟ್ ಮಾಡಿರುವುದಾಗಿ ಹಾಗೂ ಗಂಟಲಿನಲ್ಲಿ ಬುಲೆಟ್ ಇರುವುದು ಧೃಡಪಡಿಸಿದರು.
ನಂತರ ಸೃಜನ್ ರವರನ್ನು ಏನಾಯಿತೆಂದು ಪ್ರಶ್ನಿಸಿದಾಗ ನಾನಾತರಹ ಸುಳ್ಳು, ಮಾಹಿತಿ ನೀಡಿ ನಮ್ಮನ್ನು ದಾರಿತಪ್ಪಿಸಲು ಪ್ರಯತ್ನಿಸಿದರು. ಅವರ ನಡೆಯಲ್ಲಿ ಉದ್ದೇಶಪೂರ್ವಕವಾಗಿ ಕೊಲೆ ಪ್ರಯತ್ನ ಮಾಡಿರುತ್ತಾರೆಂದು ನನಗೆ ಅನುಮಾನವಿದೆ. ಈ ಘಟನೆಗೆ ಸಂಬಂಧಿಸಿದಂತೆ ನನ್ನ ತಂದೆಯನ್ನು ಕೆಲಸಕ್ಕೆ ಕರೆದುಕೊಮಡು ಹೋದ ಸೃಜನ್ ಹಾಗೂ ಅವರ ಸ್ನೇಹಿತ ವಿಘ್ನೇಶ್ ಮತ್ತು ಅವರ ಸ್ನೇಹಿತರು ಹಾಗೂ ತೋಟದ ಮಾಲಿಕರು ಈ ಕೃತ್ಯದಲ್ಲಿ ಭಾಗಿ ಆಗಿರುವುದು ನಮಗೆ ಅನುಮಾನವಿದೆ, ಆದುದರಿಂದ ಅದರ ಮೇಲೆ ಸೂಕ್ತ ಕಾನೂನು ಕ್ರಮ ಕೋಗೊಳ್ಳಬೇಕಾಗಿ ಕೋರಿ ಪೋಲಿಸ್ ದೂರನ್ನು ಮೃತ ದಿನೇಶ್ ಕುಲಾಲ್ ರವರ ಮಗ ನೀಡಿದರು. ಈ ಹಿನ್ನೆಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.































