ಮುಂಬೈ: ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದ ಮಹಾರಾಷ್ಟ್ರದ ಮಹಾಯುತಿ ಸರ್ಕಾರ ರಾಜ್ಯದಲ್ಲಿನ 1800 ಭಜನಾ ಮಂಡಳಿಗಳ ಅಭಿವೃದ್ಧಿಗೆ 4.5 ಕೋಟಿ ರೂ. ಅನುದಾನ ಘೋಷಿಸಿದೆ.
ಅರ್ಹ ಭಜನಾ ತಂಡಗಳಿಗೆ ತಲಾ 25 ಸಾವಿರ ರೂಪಾಯಿ ಅನುದಾನ ನೀಡಲಾಗುವುದು. ಸರ್ಕಾರದ ಆದೇಶದ ಅನ್ವಯ ಹಾರ್ಮೋನಿಯಂ, ಮೃದಂಗ, ವೀಣೆ, ಪಖಾವಾಜ್ ಸೇರಿದಂತೆ ಇನ್ನಿತರ ಸಂಗೀತ ಉಪಕರಣಗಳ ಖರೀದಿಗೆ ಈ ಅನುದಾನ ಬಳಸಿಕೊಳ್ಳಬೇಕು. ಅನುದಾನ ಪಡೆದುಕೊಳ್ಳಲು ಭಜನಾ ಮಂಡಳಿಗಳಲ್ಲಿ ಕನಿಷ್ಠ 20 ಮಂದಿ ಸದಸ್ಯರು ಇರಬೇಕು. 50 ಪ್ರದರ್ಶನ ನೀಡಿರಬೇಕು ಎಂದು ಮಾನದಂಡ ರೂಪಿಸಲಾಗಿದೆ.






























