ಚಿತ್ರದುರ್ಗ : ಹಿರಿಯೂರು ಉಪವಿಭಾಗದ ವ್ಯಾಪ್ತಿಯ ಹರಿಯಬ್ಬೆ ಮತ್ತು ಪಿ.ಡಿ.ಕೋಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಇದೇ ನ.28ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಹರಿಯಬ್ಬೆ ಮತ್ತು ಪಿ.ಡಿ.ಕೋಟೆ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 3ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ವಿದ್ಯುತ್ ವಿತರಣಾ ಕೇಂದ್ರದ ಎಲ್ಲಾ ಕೆ.ವಿ ಮಾರ್ಗಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: ಹರಿಯಬ್ಬೆ, ಧರ್ಮಪುರ, ಶ್ರವಣಗೆರೆ, ಬೆನಕನಹಳ್ಳಿ, ಸಕ್ಕರ, ಕೃಷ್ಣಪುರ, ಸೂಗೂರು, ಬುರುಡುಕುಂಟೆ, ಚಿಲ್ಲಹಳ್ಳಿ, ಈಶ್ವರಗೆರೆ, ಹೂವಿನಹೊಳೆ, ಅಬ್ಬಿನಹೊಳೆ, ಕಣಜನಹಳ್ಳಿ, ಬೇತೂರು, ಬೇತೂರು ಪಾಳ್ಯ, ವಿ.ಕೆ.ಗುಡ್ಡ, ಪಿ.ಡಿ.ಕೋಟೆ, ಖಂಡೇನಹಳ್ಳಿ, ಹಲಗಲದ್ದಿ, ಮದ್ದಿಹಳ್ಳಿ, ಹೊಸಕೆರೆ, ಅರಳಿಕರೆ, ಬಿ.ಕೆ.ಹಟ್ಟಿ ಹಾಗೂ ಸುತ್ತ ಮುತ್ತಲಿನ ಗ್ರಾಮದ ಗ್ರಾಹಕರು, ರೈತರು, ಸಾರ್ವಜನಿಕರು ಸಹಕರಿಸಬೇಕಾಗಿ ಬೆಸ್ಕಾಂ ಹಿರಿಯೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.































