ಉಡುಪಿ: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪ್ರಧಾನಿ ಮೋದಿ, ಭಗವದ್ಗೀತೆಯ 15ನೇ ಅಧ್ಯಾಯವನ್ನು ಪಠಣ ಮಾಡಿ, ಭಾಷಣದಲ್ಲಿ ಆತ್ಮತತ್ವದ ಬಗ್ಗೆ ವಿವರಿಸಿದರು. ಪರಮಾತ್ಮನ ಸ್ವರೂಪ, ಮೋಕ್ಷದ ಬಗ್ಗೆ ಸೂಚ್ಯವಾಗಿ ವಿವರಿಸಿದರಲ್ಲದೆ, ತನ್ನ ಭಾಷಣದುದ್ದಕ್ಕೂ ಭಗವದ್ಗೀತೆಯ ಸಂದೇಶವನ್ನು ಸಾರುತ್ತಾ, ಪ್ರಸ್ತುತ ಕಾಲಘಟ್ಟದಲ್ಲಿ ಅದರ ಪ್ರಸ್ತುತತೆಯ ಬಗ್ಗೆ ವಿವರಿಸುತ್ತಾ ಸಾಗಿದರು. ತನ್ನ ಭಾಷಣದ ಕೊನೆಯಲ್ಲಿ ಶ್ರೀಕೃಷ್ಣನು ಗೀತೆಯ ಸಂದೇಶವನ್ನು ಯುದ್ಧಭೂಮಿಯಲ್ಲಿ ನೀಡಿದ ಎಂದು ನೆನಪಿಸಿ ವೈರಿ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದರು.
ಭಗವದ್ಗೀತೆ ನಮಗೆ ಶಾಂತಿ ಹಾಗೂ ಸತ್ಯ(ಧರ್ಮ)ದ ಸ್ಥಾಪನೆಯ ಬಗ್ಗೆ ವಿವರಿಸುವುದಲ್ಲದೆ, ಅತ್ಯಾಚಾರಿಗಳ ಅಂತ್ಯ ಅವಶ್ಯಕ ಎಂದು ಶ್ರೀಕೃಷ್ಣನು ಸಾರಿದ್ದಾನೆ. ವಸುಧೈವ ಕುಟುಂಬಕಂ ಅನ್ನೂ ಪಾಲಿಸುಸುವ ನಾವು ರಾಷ್ಟ್ರ ರಕ್ಷಣೆಗಾಗಿ ʻನಾವು ಧರ್ಮೋ ರಕ್ಷತಿ ರಕ್ಷಿತಃʼ ಎಂಬ ಮಂತ್ರವನ್ನೂ ಕಲಿತಿದ್ದೇವೆ ಎಂದು ಮೋದಿ ತಿಳಿಸಿದರು. ಭಗವಾನ್ ಶ್ರೀಕೃಷ್ಣನ ದರ್ಶನ ಪಡೆದಿರುವುದು ನನ್ನ ಜೀವನದ ಮಹಾಪುಣ್ಯ. ಮೂರು ದಿನಗಳ ಹಿಂದೆ ಕುರುಕ್ಷೇತ್ರದಲ್ಲಿ ಇದ್ದೆ. ಇಂದು ಶ್ರೀಕೃಷ್ಣನ ದಿವ್ಯ ದರ್ಶನವಾಗಿದೆ. ಗುರುಸಂತರ ಉಪಸ್ಥಿತಿಯಲ್ಲಿ ಮಾತನಾಡುವ ಅವಕಾಶ ನನಗೆ ಸೌಭಾಗ್ಯ ಸಿಕ್ಕಿತು. ಜನ್ಮಭೂಮಿ ಗುಜರಾತ್ ಹಾಗೂ ಉಡುಪಿ ನಡುವೆ ಅನಾದಿ ಕಾಲದ ಸಂಬಂಧವಿದೆ. ಕೃಷ್ಣ ಆರಾಧನೆಯಷ್ಟೇ, ಮಾತಾ ರುಕ್ಷ್ಮಿಣಿ ಆರಾಧನೆಯಲ್ಲಿ ಕೂಡ ನಮ್ಮ ನಂಟು ಗಾಢ, ಎಂದಿದ್ದಾರೆ. ಉಡುಪಿಯ ಆಧ್ಯಾತ್ಮಿಕ ಶಕ್ತಿಯ ಬಗ್ಗೆ ವಿವರಿಸುತ್ತಾ ಅವರು, ಈ ಹಿಂದೆ ಸಮುದ್ರಾಳದಲ್ಲಿ ನೋಡಿದ್ದ ದೃಶ್ಯವು ಇಂದು ಇಲ್ಲಿ ಮತ್ತೆ ಕಾಣಿಸುತ್ತಿದೆ. ರಾಮಚರಿತಮಾನಸದಲ್ಲಿ ಕಲಿಯುಗದಲ್ಲಿ ಗೀತೆಯೇ ಪರಮ ಸಾಧನ ಎಂದು ಹೇಳಿದೆ. ಗೀತಾ ಪಠಣ ಶತಕ, ಮಂತ್ರೋಚ್ಚಾರಣೆ—ಇವೆಲ್ಲ ನಮ್ಮ ಆತ್ಮಬಲವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಉಡುಪಿ ಜನಸಂಘ–ಬಿಜೆಪಿಯ ಮಾದರಿ ದೇಶದಲ್ಲೇ ವಿಶಿಷ್ಟವಾಗಿದೆ. ಐದು ದಶಕಗಳ ಹಿಂದೆ ನಡೆದ ಅಭಿಯಾನದಲ್ಲಿ ಜನಸಂಘದ ವಿ.ಎಸ್. ಆಚಾರ್ಯರು ಗೆದ್ದಿದ್ದರು. ಇಂದೂ ಆ ಪರಂಪರೆ ಉಡುಪಿಯಲ್ಲಿ ಜೀವಂತವಾಗಿದೆ. ಅವರ ಕೊಡುಗೆ ಅಪಾರ ಎಂದು ಡಾ. ವಿ.ಎಸ್. ಆಚಾರ್ಯರನ್ನು ಪ್ರಧಾನಿ ನೆನಪಿಸಿಕೊಂಡರು. ಅಯೋಧ್ಯೆಯಿಂದ ಉಡುಪಿಯವರೆಗಿನ ರಾಮಭಕ್ತರು ಈ ನಾಡಿನ ವೈಶಿಷ್ಯ. ಉಡುಪಿ ಮಠ ವರ್ಷಗಳಿಂದ ಸಾವಿರಾರು ಜನರಿಗೆ ಆಶ್ರಯ, ಶಿಕ್ಷಣ, ಸಂಸ್ಕಾರ ನೀಡಿದೆ. ಸಮಾಜ ನಿರ್ಮಾಣದಲ್ಲಿ ಮಠದ ಪಾತ್ರ ಅಸಾಧಾರಣ. ಪುರಂದರ ದಾಸ, ಕನಕದಾಸರು ಸರಳ ಭಾಷೆಯಲ್ಲಿ ಧಾರ್ಮಿಕ ತತ್ತ್ವ ಸಾರಿದರು. ಇಂದಿನ ಯುವಕರಲ್ಲೂ ಅದೇ ಜಾಗೃತಿ ಕಾಣುತ್ತಿದೆ. ನಾನು ಇಂದು ಸಣ್ಣ ಕಿಟಕಿಯಿಂದ ಶ್ರೀ ಕೃಷ್ಣನ ದರ್ಶನ ಮಾಡಿದರೇ ಅದು ಕನಕನ ಭಕ್ತಿಯ ಜೋಡಣೆಯನ್ನು ನೆನಪಿಸುತ್ತದೆ ಎಂದರು.
ಸೋಲಾರ್ ಉದ್ಯಮ, ನಾರಿಶಕ್ತಿ ಕಇವೆಲ್ಲ ಯೋಜನೆಗಳಲ್ಲೂ ಶ್ರೀಕೃಷ್ಣನ ಪ್ರೇರಣೆ ಇದೆ. ಕೃಷ್ಣನ ಕರುಣೆಯ ಸಂದೇಶದೊಂದಿಗೆ, ರಾಷ್ಟ್ರ ರಕ್ಷಣೆಯ ಭಾಗವಾಗಿ ʻಮಿಶನ್ ಸುದರ್ಶನ್ ಚಕ್ರʼವನ್ನು ಉದ್ಘೋಷಿಸಿದೆವು. ಇಂದು ಇದು ನಮ್ಮ ದೇಶವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದರು. ಭಗವದ್ಗೀತೆಯ ನ್ಯಾಯಬೋಧನೆಯ ಕುರಿತು ಮಾತನಾಡಿದ ಅವರು, ಶಾಂತಿ ಬೇಕೆನ್ನುವುದು ನಮಗೆ ಗೊತ್ತು. ಆದರೆ ಅತ್ಯಾಚಾರಿಗಳ ಅಂತ್ಯವಾಗಲೇಬೇಕು. ಅದೇ ಗೀತೆಯ ಸಂದೇಶ, ಎಂದು ಕಠಿಣ ನಿಲುವು ವ್ಯಕ್ತಪಡಿಸಿದರು. ಆಪರೇಶನ್ ಸಿಂಧೂರದ ಯಶಸ್ಸು ಭಾರತದ ಸಂಕಲ್ಪವನ್ನು ಜಗತ್ತಿಗೆ ತೋರಿಸಿದೆ ಎಂದರು. ಕೊನೆಗೆ, ವಿಕಸಿತ ಕರ್ನಾಟಕ–ವಿಕಸಿತ ಭಾರತ ಸಂಕಲ್ಪದೊಂದಿಗೆ ಮುಂದೆ ಸಾಗೋಣ. ಜೈ ಶ್ರೀಕೃಷ್ಣ! ಎಂದು ಮೋದಿ ಉದ್ಗರಿಸಿದರು.
































