ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಾದ್ಯಂತ ಮೆಕ್ಕಜೋಳ ಖರೀದಿ ಕೇಂದ್ರಗಳನ್ನು ಅತಿ ಜರೂರಾಗಿ ಪಾರಂಭಿಸಬೇಕು.,ಶೇಂಗಾ ಬೆಳೆಯು ಜಿಲ್ಲೆಯಾದ್ಯಂತ 60% ಗಿಂತ ಹೆಚ್ಚು ಮಳೆ ಇಲ್ಲದೆ ಬೆಳೆ ಹಾನಿಯಾಗಿದೆ. ಹಾಗಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದು ಪ್ರತಿ ಹೆಕ್ಟೇರ್ಗೆ 50,000/ ಗಳಂತೆ ಪರಿಹಾರವನ್ನು ಘೋಷಿಸುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾ ಆಗ್ರಹಿಸಿದೆ.
ಭಾರತೀಯ ಜನತಾ ಪಾರ್ಟಿ ಜಿಲ್ಲಾ ರೈತ ಮೋರ್ಚಾವತಿಯಿಂದ ಚಿತ್ರದುರ್ಗದಲ್ಲಿ ರೈತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲಾಡಳಿತಕ್ಕೆ ವವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಿದ ಬಿಜೆಪಿ ಮುಖಂಡರು, ಜಿಲ್ಲೆಯಲ್ಲಿ ಬೆಳೆಯುವ ತೊಗರಿಗೆ ನಷ್ಟ ಪರಿಹಾರವನ್ನು ಘೋಷಿಸಬೇಕು. ಜಿಲ್ಲೆಯಲ್ಲಿ ಬೆಳೆಯುವ ಹತ್ತು ಹಲವಾರು ಮಳೆ ಆಶ್ರಿತ ಬೆಳೆಗಳು ಮಳೆ ಇಲ್ಲದೆ ಬೆಳೆ ಬಂದಿರುವುದಿಲ್ಲ. ಹಾಗಾಗಿ ನಿಮ್ಮ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರವನ್ನು ಘೋಷಿಸಬೇಕು ಎಂದರು.
ಹಿಂದಿನ ಬಿಜೆಪಿ ಸರ್ಕಾರ ರೈತನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಘೋಷಿಸಿದ್ದ ರೈತ ವಿದ್ಯಾನಿಧಿಯನ್ನು ಕೂಡಲೇ ಜಾರಿಗೊಳಿಸಬೇಕು ರಾಗಿ ಖರೀದಿ ಕೇಂದ್ರಗಳನ್ನು ಜಿಲ್ಲೆಯಾದ್ಯಂತ ತೆರೆಯಬೇಕು. ತೋಟಗಾರಿಕೆ ಬೆಳೆಗಳಿಗೆ ವಿಶೇಷವಾದ ಪ್ಯಾಕೇಜ್ ಘೋಷಣೆ ಮಾಡಬೇಕು ರೈತರಿಗೆ ಸಬ್ಸಿಡಿ ದರದಲ್ಲಿ ನೀಡುವಂತಹ ಟ್ರಾನ್ಸ್ಫರ್ಮ್ ಗಳನ್ನು ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ ರೂ. 25,000/-ಗಳ ದರಗಳಂತೆ ರೈತರಿಗೆ ನೀಡಿ ರೈತರನ್ನು ರಕ್ಷಿಸಬೇಕು. ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದಂತಹ ರೈತಪರ ಯೋಜನೆಗಳನ್ನು ತತಕ್ಷಣ ಜಾರಿಗೊಳಿ ಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡರು, ಮಾಜಿ ಸಚಿವರಾದ ಶ್ರೀರಾಮುಲು, ಶಾಸಕರಾದ ಡಾ.ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಕ.ಎಸ್.ನವೀನ್, ಜಿಲ್ಲಾ ರೈತ ಮೋರ್ಚಾದ ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಯಾದವ್ ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿ, ಮಾಜಿ ಅಧ್ಯಕ್ಷರಾದ ಎ.ಮುರಳಿ, ಮುಖಂಡರಾದ ಅನಿತ್ ಕುಮಾರ್, ಲಿಂಗಮೂರ್ತಿ, ಎನ್.ಆರ್.ಲಕ್ಷ್ಮೀಕಾಂತ್. ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜನ್, ರಾಜೇಶ್ ಬುರುಡೇಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಬಾಳೆಕಾಯಿ ರಾಮದಾಸ್, ಖಂಜಾಚಿ ಮಾಧುರಿ ಗೀರಿಶ್, ವಕ್ತರಾರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಮಂಡಲ ಅಧ್ಯಕ್ಷರಾದ ಲೋಕೇಶ್ ನಾಗರಾಜ್, ಸುರೇಶ್ ಮಲ್ಲೇಶ್, ಅಣ್ಣಪ್ಪ, ಬೋಸೇರಂಗಪ್ಪ, ಓಬಳೇಶ್, ಕೊಲ್ಲಿಲಕ್ಷ್ಮೀ, ರೈತ ಮುಖಂಡರಾದ ಶಿವಲಿಂಗಪ್ಪ, ಪಾಪೇಶ್ ನಾಯಕ, ರಾಮರೆಡ್ಡಿ, ಸಿಂಧುತನಯ ದೊಡ್ಡಯ್ಯ, ರಂಗಸ್ವಾಮಿ, ಎಂಐಟಿ ಸ್ವಾಮಿ, ವಿಜಯಂದ್ರ, ಜೆ,ಬಿ,ರಾಜು, ಢಾ,ಮಂಜುನಾಥ್, ಬಸಮ್ಮ, ಜಗದಾಂಬ, ಲಕ್ಷ್ಮೀ, ರೇಖಾ, ವೀಣಾ, ಲೀಲಾವತಿ, ಸಿದ್ದಮ್ಮ, ರಜನಿ ಶಾಂತಮ್ಮ, ಸಿಂಧು ಯಶವಂತ, ಕಿರಣ ಕವಿತಾ ಸುಮಾ ಸೇರಿದಂತೆ ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳು, ಭಾಗವಹಿಸಿದ್ದರು.
































