ಚಿತ್ರದುರ್ಗ: ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯ ಮಾತು ಚರ್ಚೆಯಲ್ಲಿದೆ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ರವರನ್ನು ಬದಲಾವಣೆ ಮಾಡುವುದಾದರೆ ನಮ್ಮ ಛಲವಾದಿ ಸಮುದಾಯದ ಮುಖಂಡರಾದ ಡಾ.ಜಿ.ಪರಮೇಶ್ವರವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ಚಿತ್ರದುರ್ಗದ ಛಲವಾದಿ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಛಲವಾದಿ ಸಮುದಾಯದ ಮುಖಂಡರು ನಗರಸಭೆಯ ಮಾಜಿ ಅಧ್ಯಕ್ಷರಾದ ಹೆಚ್.ಸಿ.ನಿರಂಜನಮೂರ್ತಿ ಮಾತನಾಡಿ, ಪರಮೇಶ್ವರ ರವರು ಕಾಂಗ್ರೆಸ್ ಪಕ್ಷಕ್ಕಾಗಿ ಪರಿಶ್ರಮವನ್ನು ಹಾಕಿದ್ದಾರೆ, ಕಳೆದ ಸಾರಿ ರಾಜ್ಯದಲ್ಲಿ ಪಕ್ಷ ಆಧಿಕಾರಕ್ಕೆ ಬರಲು ಅವರ ಶ್ರಮವೂ ಸಹಾ ಇದೆ. ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ವಿವಿಧ ರೀತಿಯ ಸಚಿವ ಸ್ಥಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವ ಅವರಿಗೆ ಇದೆ, ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲಾ ಬೇರೆ ಸಮುದಾಯದವರು ಮುಖ್ಯಮಂತ್ರಿಯಾಗಿದ್ದಾರೆ ಇದುವರೆವಿಗೂ ದಲಿತ ಸಿಎಂ ಆಗಿಲ್ಲ ದಲಿತ ಸಿಎಂ ಅಗಬೇಕೆಂದು ಕೂಗು ಮಾತ್ರ ಇದೆ ಆದರೆ ಇದುವರೆವಿಗೂ ಆಗಿಲ್ಲ ಎಂದರು.
ನಮ್ಮ ಛಲವಾದಿ ಸಮುದಾಯ ಎಂದಿದ್ದರೂ ಸಹಾ ಕಾಂಗ್ರೆಸ್ ಪರವಾಗಿ ಇದೆ ನಮ್ಮ ಮತಗಳು ಯಾವೋತ್ತು ಸಹಾ ಕಾಂಗ್ರೆಸ್ಗೆ ಕಳೆದ ಬಾರಿ ನಮ್ಮ ಸಮುದಾಯ ಕಾಂಗ್ರೆಸ್ ಪರವಾಗಿ ಮತವನ್ನು ಚಲಾವಣೆ ಮಾಡಿದೆ ಇದರಿಂದ ಕಾಂಗ್ರೆಸ್ ಪಕ್ಷದ ಮೇಲೆ ನಮ್ಮ ಸಮುದಾಯದ ಋಣ ಇದೆ ಇದನ್ನು ತೀರಿಸಬೇಕಾದರೆ ಸಿದ್ದರಾಮಯ್ಯರವರ ಬದಲಾವಣೆಯಾಗುವುದಾದರೆ ನಮ್ಮ ಸಮುದಾಯದ ಮುಖಂಡರಾದ ಡಾ.ಜಿ.ಪರಮೇಶ್ವರರವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಪಕ್ಷದ ಹೈಕಮಾಂಡನ್ನು ಒತ್ತಾಯಿಸಿದ್ದು ಇದರ ಬಗ್ಗೆ ರಾಜ್ಯದ ಛಲವಾದಿ ಮುಖಂಡರು ಸೇರಿ ಪಕ್ಷದ ಹೈಕಮಾಂಡನ್ನು ಬೇಟಿ ಮಾಡಿ ಮನವಿ ಮಾಡಲಾಗುವುದೆಂದು ನಿರಂಜನ ಮೂರ್ತಿ ತಿಳಿಸಿದರು.
ಮುಖಂಡರಾದ ರವಿಕುಮಾರ್ ಮಾತನಾಡಿ ಕಳೆದ ಕೆಲವು ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ನಡೆದ ಎಸ್.ಟಿ.ಎಸ್.ಸಿ. ಸಮಾವೇಶವನ್ನು ಯಶಸ್ವಿ ಮಾಡಿದ ಕೀರ್ತಿ ಪರಮೇಶ್ವರವರಿಗೆ ಸಲ್ಲುತ್ತದೆ. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯರವರು ಬದಲಾವಣೆಯಾಗುವುದಾದರೆ ಅವರಿಗೆ ಹೈಕಮಾಂಡ್ ಒಂದು ಅವಕಾಶವನ್ನು ನೀಡಬೇಕಿದೆ. ಅವರು ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ, ಇದನ್ನು ಪರಿಗಣಿಸಿ ಹೈಕಮಾಂಡ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಒತ್ತಾಯಿಸಿದ್ದಾರೆ.
ಗೋಷ್ಟಿಯಲ್ಲಿ ಛಲವಾದಿ ಸಮುದಾಯದ ಮುಖಂಡರಾದ ಗುರುಮೂರ್ತಿ, ರಾಮಲಿಂಗಪ್ಪ, ಶಶಾಂಕ್ ಎನ್, ದಯಾನಂದ ಅಪ್ಪಣ್ಣ ಭಾಗವಹಿಸಿದ್ದರು.

































