ಚಿತ್ರದುರ್ಗ: ರೈತರು ಬೆಳೆದ ಮೆಕ್ಕೆಜೋಳ ಖರೀದಿಗೆ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ.ರಾಜ್ಯದಲ್ಲಿ 74 ಲಕ್ಷ ಟನ್ನಷ್ಟು ಮೆಕ್ಕಜೋಳ ಬೆಳೆದಿದ್ದಾರೆ. ಆದರೆ ಸರ್ಕಾರ 5ಲಕ್ಷ ಮೆಟ್ರಿಕ್ಟನ್ ಮಾತ್ರ ಖರೀದಿ ಮಾಡುತ್ತೇವೆ ಅಂತಾ ಹೇಳಿದ್ದಾರೆ. ಹಾಗಾದ್ರೆ ರೈತರು ಇನ್ನುಳಿದ ಮೆಕ್ಕೆಜೋಳ ಏನು ಮಾಡಬೇಕು.? ಈಗಾಗಲೇ ರೈತರು ಕೈಗೆ ಬಂದ ಬೆಲೆಯಂತೆ ಮಾರಾಟ ಮಾಡಿದ್ದಾರೆ. ಕೇಂದ್ರ ಸರ್ಕಾರ ಪ್ರತೀ ಕ್ವಿಂಟಾಲ್ಗೆ 2400/- ರೂ ದರ ನಿಗದಿ ಮಾಡಿದೆ.. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ಖರೀದಿ ಮಾಡುತ್ತಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್ ರವಿಕುಮಾರ್ ಹೇಳಿದರು.
ನಡೆಯಲಿರುವ ಸರ್ಕಾರದ ವಿರುದ್ದದ ರೈತರ ಹೋರಾಟದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಚಿತ್ರದುರ್ಗದಲ್ಲಿ ಭೇಟಿಯಾದ ಮಾದ್ಯಮದವರೊಂದಿಗೆ ಮಾತನಾಡಿ ಅವರು ಹಾಗಾಗಿ ರೈತರ ವಿರೋಧಿ ಸರ್ಕಾರ ಹಿನ್ನಲೆಯಲ್ಲಿ 9 ನೇ ತಾರೀಕಿನಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತರು ಬೃಹತ್ ಪ್ರತಿಭಟನೆ ಆಯೋಜನೆ ಮಾಡಲಾಗಿದೆ ಎಂದರು.
ತುಂಗಭದ್ರಾ ಡ್ಯಾಮ್ ಎರಡು ಬಾರಿ ಭರ್ತಿಯಾಗಿದೆ.ಅಲ್ಲಿನ ರೈತರಿಗೆ 2ನೇ ಬೆಳೆ ಬೆಳೆಯಲು ನೀರು ಬಿಡುತ್ತಿಲ್ಲ. ಸರ್ಕಾರ ಗೇಟ್ ರಿಪೇರಿ ಕಾರಣ ಹೇಳಿ ವಿಳಂಬ ಮಾಡುತ್ತಿದೆ.ಗೇಟ್ ರಿಪೇರಿ ಮಾಡಿದ 12 ಕೋಟಿ ಹಣ ಕೂಡ ಬಾಕಿ ಇದೆ.. ಹಾಗಾಗಿ ಬೆಳೆ ಪರಿಹಾರಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಪ್ರತೀ ಎಕರೆಗೆ ರೈತನಿಗೆ 25 ಸಾವಿರ ಪತಿಹಾರ ಕೊಡಬೇಕು.ಕಲ್ಯಾಣ ಕರ್ನಾಟಕದಲ್ಲಿ ತೊಗರಿ ಬೆಳೆ 80% ಹಾಳಾಗಿದೆ.ಅದಕ್ಕೂ ಸರ್ಕಾರ ಪರಿಹಾರ ಕೊಟ್ಟಿಲ್ಲ ಎಂದು ಸರ್ಕಾರದ ವಿರುದ್ದ ಕಿಡಿ ಕಾರಿದರು.
ತೆಂಗು, ಅಡಿಕೆಗೆ ರೋಗ ಬಿದ್ದಾಗ ಪರಿಹಾರ ನೀಡಿಲ್ಲ.. ಒಟ್ಟಾರೆ ರಾಜ್ಯ ಸರ್ಕಾರ ರೈತ ವಿರೋಧಿ ಸರ್ಕಾರ.ರೈತರ ಸಮಸ್ಯೆಗಳ ಚರ್ಚೆ ಬದಲಿಗೆ ಸರ್ಕಾರ ಸಿಎಂ ಖುರ್ಚಿ ಬಗ್ಗೆ ಚರ್ಚೆ ಮಾಡುತ್ತಿದೆ.ಬ್ರೇಕ್ ಪಾಸ್ಟ್, ನಾಟಿಕೋಳಿ ತಿನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.ರಾಜ್ಯದಲ್ಲಿ ನಯಾಪೈಸೆ ಅಭಿವೃದ್ಧಿ ಆಗಿಲ್ಲ. ಒಂದು ಕಿಮಿ ರಸ್ತೆ ಮಾಡದೇ ಸರ್ಕಾರ ಅಭಿವೃದ್ಧಿ ವಿರೋಧಿ ಸರ್ಕಾರ.ರಾಜ್ಯದ ಶಾಲಾ ಕಾಲೇಜಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ.. ಶಾಲಾ ಮಕ್ಕಳಿಗೆ ಯೂನಿಫಾರ್ಮ್ ಕೊಟ್ಟಿಲ್ಲ ಎಂದರು,
ಯೂನಿವರ್ಸಿಟಿಗಳಲ್ಲಿ 80% ರಷ್ಟು ಪ್ರೊಫೆಸರ್ ಗಳಿಲ್ಲ.35 ರಿಂದ 33% ಗೆ ಪಾಸಿಂಗ್ ಪರ್ಸಂಟೇಜ್ ಇಳಿಕೆ ಮಾಡಿದ್ದಾರೆ.ಶಿಕ್ಷಕಣದ ಗುಣಮಟ್ಟ ಬಗ್ಗೆ ಇವರ ನಿಲುವೆನು.?ಶಿಕ್ಷಣದ ಬಗ್ಗೆ ಸದನದಲ್ಲಿ ಒಂದು ದಿನ ಚರ್ಚೆ ಆಗಬೇಕು… ಉತ್ತರ ಕರ್ನಾಟಕದ ಬಗ್ಗೆ 4 ದಿನ ಚರ್ಚೆ ಆಗಬೇಕು.ಈ ಕುರಿತು ರಾಜ್ಯದ 180 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೋರಾಟ ಮಾಡಲಿದೆ.. ಸಮಸ್ಯೆ ಇಲ್ಲದಿದ್ರೆ ರೈತರು ಯಾಕೆ ಹೋರಾಟ ಮಾಡುತ್ತಿದ್ದರು.ಸರ್ಕಾರ ನಾಟಿಕೋಳಿ, ಬ್ರೇಕ್ ಪಾಸ್ಟ ಬಿಟ್ಟು ರೈತರು, ವಿದ್ಯಾರ್ಥಿಗಳ ಬಗ್ಗೆ ಯೋಚನೆ ಮಾಡಲಿ ಎಂದು ಸರ್ಕಾರಕ್ಕೆ ಕಿವಿ ಮಾತು ಹೇಳಿದರು.
ಬಿ.ಕೆ. ಹರಿಪ್ರಸಾದ್ ದೆಹಲಿ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ಸರ್ಕಾರವೇ ದೆಹಲಿ ಪ್ರವಾಸದಲ್ಲಿದೆ.ನಾಟಿಕೋಳಿ ತಿನ್ನೋದ್ರಲ್ಲಿ, ಬ್ರೇಕ್ ಪಾಸ್ಟ್ ಮಾಡೋದ್ರಲ್ಲಿ ಬ್ಯೂಸಿ ಇದೆ.ಯಾವ ಮಂತ್ರಿನೂ ಯಾವ ಜಿಲ್ಲೆಗೂ ಪ್ರವಾಸ ಮಾಡುತ್ತಿಲ್ಲ.ಕಾಂಗ್ರೆಸ್ ಸರ್ಕಾರ ಆಲ್ ಮೋಸ್ಟ ಡೆಡ್ ಗೌರ್ನಮೆಂಟ್.ಜನ 138 ಜನ ಶಾಸಕರನ್ನು ಕಾಂಗ್ರೆಸ್ ಸರ್ಕಾರಕ್ಕೆ ಗೆಲ್ಲಿಸಿಕೊಟ್ಟರು.ರಾಜ್ಯದಲ್ಲಿ ಒಂದು ಸ್ವಲ್ಪವೂ ಅಭಿವೃದ್ಧಿ ಇಲ್ಲ.ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಬೇಸರ ಹಾಕುತ್ತಿರುವುದು.. ಅಭಿವೃದ್ಧಿಗೆ ಒಂದು ರೂಪಾಯಿ ಕೊಟ್ಟಿಲ್ಲ ಅಂತಾ ಶಾಸಕ ರಾಜು ಕಾಗೆ ಹೇಳಿದ್ದಾರೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ ಅಂತಾ ಹೇಳಿದ್ದಾರೆ.. ಆದರೆ ಸಿಎಂ ಡಿಸಿಎಂ ಮಾತ್ರ ಅಧಿಕಾರ ಹಂಚಿಕೆ ಬಗ್ಗೆ ಹೇಳುತ್ತಿದ್ದಾರೆ.ಅದೇನು ಮಾತಾಗಿತ್ತು ಹೇಳಿ, ಅಧಿಕಾರ ಹಂಚಿಕೊಂಡು ಆಡಳಿತ ನಡೆಸಿ.ಇಲ್ಲಂದ್ರೆ ರಾಜಿನಾಮೆ ಕೊಟ್ಟು ಹೋಗಿ, ಸಮರ್ಥರು ಆಡಳಿತ ಮಾಡಲಿ ಎಂದ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ರಾಷ್ಟೀಯ ಅಧ್ಯಕ್ಷರು, ಪ್ರಧಾನಿಗಳು, ಅಮಿತ್ಶಾ ನಿರ್ಧಾರ ತೆಗೆದುಕೊಳ್ಳುತ್ತಾರೆ..ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಕುಮಾರ್ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜನ್ ಜಿಲ್ಲಾ ರೈತ ಮೋಚಾದ ಅಧ್ಯಕ್ಷ ವೆಂಕಟೇಶ್ ಯಾದವ್ ವಕ್ತಾರ ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು.

































