ನವದೆಹಲಿ : ಐಎಎಸ್ ಅಧಿಕಾರಿ ಅನುಪಮಾ ಅಂಜಲಿ. ಇವರ ತಂದೆ ಐಪಿಎಸ್ ಅಧಿಕಾರಿಯಾಗಿದ್ದು, ಪತಿ ಕೂಡ ಐಎಎಸ್ ಆಫೀಸರ್ ಆಗಿದ್ದಾರೆ. ಅನುಪಮಾ ಅವರ ಜರ್ನಿಯ ಬಗ್ಗೆ ತಿಳಿಯೋಣ ಬನ್ನಿ.
ಅನುಪಮಾ ಅಂಜಲಿ ದೆಹಲಿ ನಿವಾಸಿ. ಅಲ್ಲೇ ಪ್ರಾಥಮಿಕ ಶಿಕ್ಷಣವನ್ನು ಮಾಡಿದ ನಂತರ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದರು. 2018ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಅನುಪಮಾ ಅಂಜಲಿ ಎಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ಅನುಪಮಾ ಎರಡು ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದಿದ್ದರು. ಆಕೆ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾಗಿದ್ದರು. ಆದರೆ ಛಲ ಬಿಡದೆ ನಂತರ ಎರಡನೆ ಪ್ರಯತ್ನಕ್ಕೆ ಸಿದ್ಧರಾದರು.
ಅನುಪಮಾ ಅಂಜಲಿ ಅವರ ತಂದೆ ಐಪಿಎಸ್ ಅಧಿಕಾರಿ. ಅವರು ಸರ್ಕಾರಿ ನೌಕರಿಯಲ್ಲಿ 37 ವರ್ಷಗಳನ್ನು ಪೂರೈಸಿದ್ದಾರೆ. ಅನುಪಮಾ ಅವರ ತಾತ ಕೂಡ ಸರ್ಕಾರಿ ಅಧಿಕಾರಿಯಾಗಿದ್ದರು. ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಯಶಸ್ವಿಯಾಗಲು, ಅನುಪಮಾ ಅವರು ಮೊದಲು UPSC ಪಠ್ಯಕ್ರಮವನ್ನು ಅರ್ಥಮಾಡಿಕೊಂಡರು. ನಂತರ ಅಗತ್ಯವಿರುವ ಪುಸ್ತಕಗಳ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸಿದರು. ಅನುಪಮಾ ಅಂಜಲಿ 2017 ರ UPSC ಪರೀಕ್ಷೆಯಲ್ಲಿ 386 ನೇ ರ್ಯಾಂಕ್ ನೊಂದಿಗೆ IAS ಅಧಿಕಾರಿಯಾದರು.
LBSNAA ನಲ್ಲಿ ತರಬೇತಿ ಪಡೆದ ನಂತರ, ಅವರಿಗೆ ಆಂಧ್ರ ಪ್ರದೇಶ ಕೇಡರ್ ನೀಡಲಾಯಿತು. ಅವರ ಮೊದಲ ಪೋಸ್ಟಿಂಗ್ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜಂಟಿ ಕಲೆಕ್ಟರ್ ಆಗಿತ್ತು. ಅನುಪಮಾ ಅಂಜಲಿ 2020 ರ ಬ್ಯಾಚ್ ನ ಐಎಎಸ್ ಅಧಿಕಾರಿ ಹರ್ಷಿತ್ ಕುಮಾರ್ ಅವರನ್ನು 2023 ರ ಆರಂಭದಲ್ಲಿ ಮದುವೆಯಾಗಿದ್ದಾರೆ. ಐಎಎಸ್ ಹರ್ಷಿತ್ ಮತ್ತು ಅನುಪಮಾ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಎರಡೂ ಪದ್ಧತಿಗಳ ಪ್ರಕಾರ ವಿವಾಹವಾದರು.

































