ಹರಿಯಾಣ : ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಬೇಕೆಂಬ ಅಭ್ಯರ್ಥಿಗಳಿಗೆ ದೃಢ ಸಂಕಲ್ಪ, ಸಾಧಿಸುವ ಛಲ ಮುಖ್ಯ. ಯುಪಿಎಸ್ಸಿಯಲ್ಲಿ ಅಖಿಲ ಭಾರತ 29ನೇ ರ್ಯಾಂಕ್ ಪಡೆದು ಟಾಪರ್ ಆಗಿರುವ ಐಎಎಸ್ ಅಧಿಕಾರಿ ಸಲೋನಿ ಛಾಬ್ರಾ ಅವರ ಯಶೋಗಾಥೆ ಇದು.
ಸಲೋನಿ ಛಾಬ್ರಾ ಅವರು ಹರಿಯಾಣದ ಗುರುಗ್ರಾಮದಲ್ಲಿ ಜನಿಸಿ ಬೆಳೆದವರು. ಸಲೋನಿಯವರ ಪೋಷಕರು ವೃತ್ತಿಯಲ್ಲಿ ಉದ್ಯಮಿಗಳು ಆಗಿದ್ದಾರೆ.
ಸಲೋನಿ ಅವರು ತಮ್ಮ ಶಾಲಾ ಶಿಕ್ಷಣ ಮತ್ತು ಪಿಯುಸಿ ಯನ್ನು ಹರಿಯಾಣದ ಗುರುಗ್ರಾಮದಲ್ಲಿರುವ ಬ್ಲೂ ಬೆಲ್ಸ್ ಸ್ಕೂಲ್ನಲ್ಲಿ ಪೂರ್ಣಗೊಳಿಸಿದರು. ಅವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ನಿಂದ ಅರ್ಥಶಾಸ್ತ್ರದಲ್ಲಿ ಬಿ.ಎ. ಪದವಿಯನ್ನು ಪಡೆದರು.
2021ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಸಲೋನಿ ಅವರು ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ಬಳಿಕ 2022ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ದೃತಿಗೆಡದೆ 2023ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ಅಖಿಲ ಭಾರತ 29ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುತ್ತಾರೆ. ಈ ಮೂಲಕ ಐಎಎಸ್ ಅಧಿಕಾರಿಯಾಗಿ ತಮ್ಮ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ.































