ಚಿತ್ರದುರ್ಗ : ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮಗಳ ವತಿಯಿಂದ 2025-26ನೇ ಸಾಲಿನಲ್ಲಿ ಭೂ ಒಡೆತನ ಯೋಜನೆಯಡಿ ಜಮೀನು ಕೋರಿ ಆನ್-ಲೈನ್‍ನಲ್ಲಿ ಅರ್ಜಿ ಸಲ್ಲಿಸಿರುವ ಮಹಿಳಾ ಅರ್ಜಿದಾರರು ಹಾಗೂ ಜಮೀನು ಮಾಲೀಕರು 2026ರ ಜನವರಿ 31ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಫಲಾಪೇಕ್ಷಿಯು ಸಲ್ಲಿಸಬೇಕಾಗಿರುವ ದಾಖಲಾತಿಗಳು: ಅರ್ಜಿ ಮತ್ತು ಭಾವಚಿತ್ರ-02, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ, ತಹಶೀಲ್ದಾರ್‍ರಿಂದ ಪqದÉ ವಂಶವೃಕ್ಷ, ಫಲಾನುಭವಿಯಿಂದ ನೋಟರಿಯೊಂದಿಗೆ ನಮೂನೆ-1ರಲ್ಲಿ 100/-ರೂ ಛಾಪಾಕಾಗದದಲ್ಲಿ ಮುಚ್ಚಳಿಕೆ ಪತ್ರ ಹಾಗೂ ಅರ್ಜಿದಾರರು ಭೂ ರಹಿತ ಕೃಷಿ ಕಾರ್ಮಿಕ ಪತ್ರ ಸಲ್ಲಿಸಬೇಕು.
ಭೂ ಮಾಲೀಕರು ಸಲ್ಲಿಸಬೇಕಾಗಿರುವ ದಾಖಲಾತಿಗಳು: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪ್ರಸಕ್ತ ಸಾಲಿನ ಕಂಪ್ಯೂಟರ್ ಪಹಣಿ, ಮುಟೇಶನ್ ಪ್ರತಿ, 13 ವರ್ಷದ ಇ.ಸಿ., ಭೂ ನಕಾಶೆ ಅಥವಾ ಚೆಕ್ಕುಬಂದಿ, ಸಾಗುವಳಿ ಚೀಟಿ/ವಿಭಾಗಪತ್ರ/ಕ್ರಯಪತ್ರ ಅಥವಾ ಧಾನ ಪತ್ರ ಹಾಗೂ ಪಟ್ಟಾಪುಸ್ತಕ ಮತ್ತು ಕಂದಾಯ ರಸೀದಿ, ತಹಶೀಲ್ದಾರ್‍ರಿಂದ ಪಡೆದ ವಂಶವೃಕ್ಷ, 100/-ರೂ ಛಾಪಾ ಕಾಗದದಲ್ಲಿ ಭೂ ಮಾರಾಟ ಮಾಡಲು ನೋಟರಿಯೊಂದಿಗೆ ಒಪ್ಪಿಗೆ/ಮುಚ್ಚಳಿಕೆ ಪತ್ರ, 100/-ರೂ ಛಾಪಾ ಕಾಗದದಲ್ಲಿ ಕುಟುಂಬ ಸದಸ್ಯರಿಂದ ನೋಟರಿಯೊಂದಿಗೆ ನಿರಾಪೇಕ್ಷಣಾ ಪತ್ರ ಸಲ್ಲಿಸಬೇಕು.
ಮಹಿಳಾ ಅರ್ಜಿದಾರರು ಹಾಗೂ ಭೂ ಮಾಲೀಕರು ಅಗತ್ಯ ದಾಖಲೆಗಳನ್ನು ಚಿತ್ರದುರ್ಗ ನಗರದ ಚಳ್ಳಕೆರೆ ರಸ್ತೆಯ ಶ್ರೀ ಸಾಯಿ ನಾರಾಯಣ ಆಸ್ಪತ್ರೆ ಎದುರಿನ ಆದಿಶಕ್ತಿ ನಗರದ ವಾರ್ಡ್ ನಂ.29, 3ನೇ ಕ್ರಾಸ್‍ನಲ್ಲಿರುವ ಬುದ್ಧ ಬಸವ ಅಂಬೇಡ್ಕರ್ ನಿಲಯದ ಜಿಲ್ಲಾ ಕಚೇರಿ ವಿಳಾಸಕ್ಕೆ ಸಲ್ಲಿಸಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲು ಸಾಧ್ಯವಿರುವುದಿಲ್ಲ.
ನಿಗದಿತ ದಿನಾಂಕದೊಳಗೆ ಸಲ್ಲಿಸಿದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಕೇಂದ್ರ ಕಛೇರಿ ಮಂಜೂರಾತಿ ಪಡೆದು ಜಿಲ್ಲಾಧಿಕಾರಿಗಳ ದರ ನಿಗಧಿ ಸಮಿತಿಯಲ್ಲಿ ಮಂಡಿಸಲು ಕ್ರಮವಹಿಸಲಾಗುವುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
































