ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ರೆಪೊ ಆಧಾರಿತ ಸಾಲದ ಮೇಲಿನ ಬಡ್ಡಿ ದರವನ್ನು ಶೇಕಡ 0.25ರಷ್ಟು ಕಡಿಮೆ ಮಾಡಿದೆ. ಆರ್.ಬಿ.ಐ.ನ ಹಣಕಾಸು ನೀತಿ ಸಮಿತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿಮೆ ಮಾಡಿ ಶೇಕಡ 5.50 ರಿಂದ ಶೇಕಡ 5.25ಕ್ಕೆ ಇಳಿಸಿದೆ.
ಕೆನರಾ ಬ್ಯಾಂಕ್ ತನ್ನ ಸಾಲಗಳ ರೆಪೋ ಲಿಂಕ್ಡ್ ಲೆಂಡಿಂಗ್ ರೇಟ್ ಅನ್ನು ಶೇಕಡ 8.25 ರಿಂದ ಶೇಕಡ 8ಕ್ಕೆ ಕಡಿತಗೊಳಿಸಿದೆ. ಡಿಸೆಂಬರ್ 12 ರಿಂದಲೇ ಅನ್ವಯವಾಗುವಂತೆ ಬಡ್ಡಿ ದರ ಕಡಿತಗೊಳಿಸಲಾಗಿದೆ.
ಕೆನರಾ ಬ್ಯಾಂಕ್ ನ ಗ್ರಾಹಕರ ಸಾಲದ ಒಪ್ಪಂದದ ಆಧಾರದಲ್ಲಿ ಮೊತ್ತ ಕಡಿಮೆ ಆಗುವುದರ ಜೊತೆಗೆ ಸಾಲ ಮರುಪಾವತಿ ಅವಧಿ ಇಳಿಕೆಯಾಗಲಿದೆ. ಕೆನರಾ ಬ್ಯಾಂಕ್ ನ ತನ್ನ ಗ್ರಾಹಕರ ಕುರಿತಾದ ಬದ್ಧತೆ ಮತ್ತು ಪಾರದರ್ಶಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇದು ತೋರಿಸುತ್ತದೆ ಎಂದು ತಿಳಿಸಲಾಗಿದೆ.
































