ಪುದುಚೇರಿ: ಪುದುಚೇರಿಯ 14 ವರ್ಷದ ಬಾಲಕಿಯೊಬ್ಬಳು ಸಮುದ್ರದ ಒಳಗೆ ಭರತನಾಟ್ಯ ಪ್ರದರ್ಶನ ಮಾಡಿದ ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ. 20 ಅಡಿ ನೀರಿನ ಒಳಗೆ ನೃತ್ಯ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ಬಾಲಕಿಯ ಪ್ರತಿಭೆಗೆ ನಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಭರತನಾಟ್ಯ, ಭಾರತೀಯ ಸಂಸ್ಕೃತಿಯ ಪ್ರಮುಖ ಕಲೆ. ಇತ್ತೀಚೆಗೆ ಅನೇಕರು ಭರತನಾಟ್ಯ ಪ್ರದರ್ಶನ ಮಾಡಿ ಗಿನ್ನಿಸ್ ದಾಖಲೆ ಕೂಡಾ ಪಡೆದುಕೊಂಡಿದ್ದಾರೆ. ಇದೀಗ ಮತ್ತೊಂದು ಬಾಲಕಿ ನೀರಿನೊಳಗಡೆ ನೃತ್ಯ ಪ್ರದರ್ಶನ ಮಾಡಿದ ವೀಡಿಯೋ ರಿಪೋಸ್ಟ್ ಮಾಡಿ ನಾಟ್ಯ ಪ್ರೇಮಿಗಳ ಮನಗೆದ್ದಿದ್ದಾರೆ. ನೀರಿನ ಒಳಗೆ ಇಂತಹ ಅಪೂರ್ವ ನೃತ್ಯ ಪ್ರದರ್ಶನ ನೀಡಿದ ಈ ಹುಡುಗಿ, ಎಲ್ಲೆಡೆ ಗಮನ ಸೆಳೆದಿದ್ದಾಳೆ.
ಅಶ್ವಿನ್ ಬಾಲಾಳು ಎಂಬ 14 ವರ್ಷದ ಹುಡುಗಿ, 2025 ರ ಇಂಟರ್ನ್ಯಾಷನಲ್ ಡಾನ್ಸ್ ಡೇಯಂದು ಸಮುದ್ರದ ಒಳಗೆ ಭರತನಾಟ್ಯ ಪ್ರದರ್ಶನ ನೀಡಿದಳು. ಈ ಮೂಲಕ ಅಶ್ವಿನ್, ಫ್ಲಾಸ್ಟಿಕ್ ತ್ಯಜಿಸಿ, ಸಮುದ್ರದ ಮಾಲಿನ್ಯ ತಡೆಗಟ್ಟುವ ಜಾಗೃತಿ ಮೂಡಿಸಲು ಪ್ರಯತ್ನಿಸಿದಳು. ಈ ಸಾಹಸ, ಬಾಲಿಕೆಗೆ ಪ್ರಪಂಚಾದ್ಯಾಂತ ಮೆಚ್ಚುಗೆ ತಂದುಕೊಟ್ಟಿದೆ.
2025 ಏಪ್ರಿಲ್‌ನಲ್ಲಿ ನಡೆದ ಈ ಪ್ರದರ್ಶನವನ್ನು 51 ವೀಡಿಯೊ ಕ್ಲಿಪ್‌ಗಳಲ್ಲಿ ಸೆರೆಹಿಡಿದಿದ್ದು, ಡಿಸೆಂಬರ್ 19ರಂದು ಸಾಮಾಜಿಕ ಮಾಧ್ಯಮಗಳಲ್ಲಿ ರಿಪೋಸ್ಟ್ ಮಾಡಲಾಗಿದ್ದು, ತಕ್ಷಣವೇ ವೈರಲ್ ಆಗಿದೆ. ಈ ವಿಶಿಷ್ಟ ನೃತ್ಯ ಪ್ರದರ್ಶನವು ಏಕೈಕ ಭರತನಾಟ್ಯ ಕಲೆಯನ್ನು ಪಶ್ಚಿಮ ತೀರದ ಸಮುದ್ರದ ಒಳಗೆ ಮಾಡಿ, ಪರಿಸರದ ಸೂಕ್ಷ್ಮತೆಯನ್ನು ಮತ್ತು ಸಮುದ್ರ ಮಾಲಿನ್ಯ ತಡೆಗಟ್ಟಲು ಪ್ರೇರಣೆಯನ್ನು ನೀಡಿದೆ.

































