ಚಿತ್ರದುರ್ಗ: ಸ್ಥಳೀಯ ಗೊಂದಲ ಸ್ಥಳೀಯವಾಗಿ ಇತ್ಯರ್ಥಕ್ಕೆ ಖರ್ಗೆಯವರ ಸೂಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅನವಶ್ಯಕ ಗೊಂದಲ ಪಕ್ಷ ಕಾರ್ಯಕರ್ತರಿಗೆ ಒಳ್ಳೆಯದಲ್ಲ.ಯಾರೇ ನಮ್ಮ ನಾಯಕರು ಆಗಿರಬಹುದು.ಖರ್ಗೆ ಸಾಹೇಬರು ಹೇಳಿದಂತೆ ನಡೆದುಕೊಳ್ಳಬೇಕು. ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ಒಂದು ವಿಷಯದ ಬಗ್ಗೆ ಮಾತ್ರ ಅನಗತ್ಯ ಚರ್ಚೆ ಆಗುತ್ತಿದೆ..ನಾವು ಯಾರೂ ಸಹ ಹೇಳಿಕೆ ಕೊಡುವ ಅಗತ್ಯ ಇಲ್ಲ. ಮುಂದೆ ಹೈಕಮಾಂಡ್ ತೀರ್ಮಾನ ಇದ್ದೇ ಇರುತ್ತದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಸಚಿವರು, ಮಾಧ್ಯಮ ಪ್ರತಿಕ್ರಿಯೆ ವೇಳೆ ಶಾಸಕರು ಹೇಳಿದ್ದಾರೆ. ಯಾರೂ ಸಹ ಪತ್ರಿಕಾಗೋಷ್ಠಿ ಕರೆದು ಏನೂ ಹೇಳಿಲ್ಲ.ಸ್ನೇಹಿತರಿದ್ದವರು ಡಿನ್ನರ್ ಪಾರ್ಟಿಗೆ ಸೇರುತ್ತೇವೆ ಸಹಜ. ನಾನುಬೆಳಗಾವಿಯಲ್ಲಿಡಿನ್ನರ್ಕರೆದಿದ್ದೆನು. 50-60 ಶಾಸಕರು ಡಿನ್ನರ್ ಪಾರ್ಟಿಯಲ್ಲಿದ್ದರು.
ಕೇಂದ್ರ ಸರ್ಕಾರ ಘೋಷಿಸಿದ ಯೋಜನೆಗೂ ಸ್ಪಂದಿಸಿಲ್ಲ.ಭದ್ರಾ ಮೇಲ್ದಂಡೆ ಯೋಜನೆಗೂ ಕೇಂದ್ರ ಹಣ ನೀಡಿಲ್ಲ.ಹೆಚ್. ಡಿ ಕುಮಾರಸ್ವಾಮಿಗೆ ಸುಮ್ಮನೆ ಸಚಿವರಾಗಿ ಮಾಡಿ ಕೂಡಿಸಿದ್ದಾರೆ ಅಷ್ಟೇ.ಹೆಚ್.ಡಿ ಕುಮಾರ ಸ್ವಾಮಿಯವರಿಗೆ ಅಮಿತ್ ಶಾ, ಮೋದಿ ಮುಂದೆ ಮಾತಾಡುವ ಧೈರ್ಯ ಇಲ್ಲ.ಅವರು ಇಲ್ಲ ಅಂದ ಬಳಿಕ ಮುಗೀತು. ಯಾಕೆಂದರೆ ಅವರೇ ಸರ್ವಾಧಿಕಾರಿ.ಮೋದಿ ಜತೆ ಇವರು ಜಗಳ.ಫೈಟ್ ಮಾಡೋಕೆ ಆಗಲ್ಲ.ಬಿಜೆಪಿ ಸಂಸದರು, ಕೇಂದ್ರ ಸಚಿವರು ಪ್ರಯೋಜನೆ ಇಲ್ಲದಂತವರು.ಕೇಂದ್ರಕ್ಕೆ ಕರ್ನಾಟಕದ ಬಗ್ಗೆ ತಾತ್ಸಾರ ಮನೋಭಾವ ಇದೆ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಎಲ್ಲರೂ ರಬ್ಬರ್ ಸ್ಟಾಂಪ್ಗಳು ಎಂದರು.
ಮಹಾರಾಷ್ಟ್ರದಿಂದ ಬೆಳಗಾವಿ ಡಿಸಿಗೆ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮಹಾರಾಷ್ಟ್ರದಲ್ಲಿ ರಾಜಕಾರಣಕ್ಕಾಗಿ ಈ ರೀತಿ ಮಾಡುತ್ತಾರೆ. ಬೆಳಗಾವಿ ಜಿಲ್ಲೆ ಎಂದಿಗೂ ನಮ್ಮದೆ. ಮಂಗಳೂರಲ್ಲಿ ವೈದ್ಯಾಧಿಕಾರಿಗಳು ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರೂ ರಾಜೀನಾಮೆ ಕೊಟ್ಟಿಲ್ಲ. ಒಬ್ಬರು ರಾಜೀನಾಮೆ ಬಗ್ಗೆ ಪತ್ರಿಕೆಯಲ್ಲಿ ನೋಡಿದೆ.. ಈ ಬಗ್ಗೆ ಪರಿಶೀಲಿಸುತ್ತೇನೆ. ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

































