ಚಿತ್ರದುರ್ಗ: ಯಾವುದೇ ಒಂದು ಸಾಧನೆಯನ್ನು ಮಾಡಿದವರನ್ನು ಒಂದು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ, ಅವರು ಮಾಡಿದ ಸಾಧನೆ, ತ್ಯಾಗ, ಅದರ್ಶಗಳು ಎಲ್ಲರಿಗೂ ಸಹಾ ಮಾರ್ಗದರ್ಶನವಾಗಬೇಕಿದೆ ಆಗ ಮಾತ್ರ ಅವರಿಗೆ ನಿಜವಾದ ಅರ್ಥದಲ್ಲಿ ಸ್ಮರಣೆಯಾಗುತ್ತದೆ ಎಂದು ಲಂಬಾಣಿ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ನಗರದ ಬಂಜಾರ ಭವನದಲ್ಲಿ ಸೋಮವಾರ ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ಕ್ರಾಂತಿ ಸೇನೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನ್ನ ಪ್ರಾಂತ್ಯಕ್ಕೆ ಆಪತ್ತು ಬಂದಾಗ ಧೈರ್ಯದಿಂದ ಗಂಡನಿಗೂ ಸಹಾ ಹೇಳದೆ ಶತೃಗಳನ್ನು ಸದೆ ಬಡಿದ ವೀರ ವನಿತೆ ಓಬವ್ವಳನ್ನು ಒಂದು ಜಾತಿ, ಜನಾಂಗಕ್ಕೆ ಸೀಮಿತ ಮಾಡುವುದು ಸರಿಯಲ್ಲ ಆಕೆ ಆ ಸಮಯದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಅಂದು ಮದಕರಿನಾಯಕರ ಪ್ರಾಂತ್ಯ ಶತೃಗಳಿಂದ ಉಳಿಯಿತು, ಇಂತಹ ಮಹಾನ್ ನಾಯಕಿಯ ಆದರ್ಶಗಳನ್ನು ಎಲ್ಲರೂ ಸಹಾ ಪಾಲಿಸಬೇಕಿದೆ ಇಂದಿನ ಮಹಿಳೆಯರಿಗೆ ಈಕೆ ಮಾರ್ಗದರ್ಶಕಿಯಾಗಿದ್ದಾಳೆ ಎಂದು ತಿಳಿಸಿದರು.
ದೇಶದಲ್ಲಿ ಸಾಧನೆಯನ್ನು ಮಾಡಿದ ಯಾವುದೇ ವ್ಯಕ್ತಿಯಾದರೂ ಸಹಾ ನಾವುಗಳು ಅತನ ಸಾಧನೆಯನ್ನು ನೋಡಬೇಕೆ ಹೊರೆತು ಆತನ ಜಾತಿ, ಧರ್ಮ, ಜನಾಂಗವನ್ನು ನೋಡಬಾರದು, ಆತ ಪಾಲಿಸಿದ ತತ್ವದಾರ್ಶಗಳು, ಸಾಧನೆಯನ್ನು ಪರಿಗಣಿಸಬೇಕಿದೆ. ಒನಕೆ ಓಬವ್ವ ಛಲವಾದಿ ಸಮುದಾಯದವರಾದರೂ ಸಹಾ ಆಕೆ ಮಾಡಿದ ಸಾಧನೆಯನ್ನು ಎಲ್ಲರು ಸಹಾ ಕೊಂಡಾಡಬೇಕಿದೆ. ಮಹಿಳೆಯಾದರೂ ಸಹಾ ದೈರ್ಯದಿಂದ ಶತೃಗಳನ್ನು ಸದೆ ಬಡಿಯುವುದರ ಮೂಲಕ ತನ್ನ ರಾಜನಿಗೆ ರಾಜ್ಯವನ್ನು ಉಳಿಸಿಕೊಟ್ಟಿದ್ದಾಳೆ, ಶಿವಾಜಿ ಮಹಾರಾಜರಿಗೆ ಅವರ ತಾಯಿ ಜೀಜಬಾಯಿ ಚಿಕ್ಕ ವಯಸ್ಸಿನಲ್ಲಿ ಉತ್ತಮವಾದ ಮಾರ್ಗದರ್ಶನವನ್ನು ನೀಡಿದ್ದರ ಫಲವಾಗಿ ಆತ ಮುಂದೆ ಉತ್ತಮ ರಾಜನಾಗಿ ರಾಜ್ಯಭಾರವನ್ನು ಮಾಡಿದನು ಈ ಹಿನ್ನಲೆಯಲ್ಲಿ ಮಹಿಳೆಯರು ಶಿಕ್ಷಣವನ್ನು ಪಡೆಯುವುದರ ಮೂಲಕ ತಮ್ಮ ಮಕ್ಕಳಿಗೆ ಉತ್ತಮವಾದ ಸಂಸ್ಕಾರವನ್ನು ಕಲಿಸಬೇಕಿದೆ ಎಂದರು.
ಕರ್ನಾಟಕ ಕ್ರಾಂತಿ ಸೇನೆಯ ಮತ್ತು ಬಂಜಾರ ಸಮಾಜದ ಜಿಲ್ಲಾಧ್ಯಕ್ಷರಾದ ಸತೀಶ್ ಕುಮಾರ್ ಮಾತನಾಡಿ, ಇಂದಿನ ದಿನಮಾನದಲ್ಲಿ ಮಹಿಳೆಯರ ಮೇಲೆ,ದೌರ್ಜನ್ಯ ದಬ್ಬಾಳಿಗೆ ಅತ್ಯಾಚಾರಗಳು ಹೆಚ್ಚುತ್ತಿವೆ ಇವುಗಳನ್ನು ಎದುರಿಸುವ ಮನೋಭಾವವನ್ನು ನೀವುಗಳು ಒನಕೆ ಓಬವ್ವಳ ರೀತಿಯಲ್ಲಿ ಬೆಳಸಿಕೊಳ್ಳಬೇಕಿದೆ, ಒನಕೆ ಓಬವ್ವ ಕಷ್ಟದ ಸಮಯದಲ್ಲಿ ಯಾವ ರೀತಿಯಲ್ಲಿ ದಿಟ್ಟವಾದ ನಿರ್ಧಾರವನ್ನು ತೆಗೆದುಕೊಂಡಳೋ ಅದೇ ರೀತಿಯಲ್ಲಿ ನಿಮ್ಮ ಕಷ್ಠದ ಸಮಯದಲ್ಲಿ ಧೀಡಿರನೆ ನಿರ್ಧಾರವನ್ನು ತೆಗೆದುಕೊಳ್ಳುವುದರ ಮೂಲಕ ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕಿದೆ ಎಂದು ಸಭೆಯಲ್ಲಿ ನೆರದಿದ್ದ ಬಾಲಕಿಯರಿಗೆ ಕಿವಿ ಮಾತು ಹೇಳಿದರು.
ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಶ್ರೀಮತಿ ತುಳಸಿ ರಮೇಶ್ ಮಾತನಾಡಿ, ಹಿಂದಿನ ಕಾಲದಲ್ಲಿ ಮಹಿಳೆಯರು ಅಂದರೆ ಸಬಲೆಯರು ಎನ್ನುವಂತಿದ್ದ ಕಾಲ ಇತ್ತು ಆದರೆ ಈಗ ಮಹಿಳೆಯರು ಅಂದರೆ ಸಬಲೆಯರು ಎನ್ನುವಂತಾಗಿದೆ, ಇಂದಿನ ಕಾಲದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಸಹಾ ಸಾಧನೆಯನ್ನು ಮಾಡುವುದರ ಮೂಲಕ ಪುರುಷನಷ್ಟೇ ನಾವು ಸಮಾನರು ಎಂದು ತೋರಿಸಿದ್ದಾರೆ. ಮಹಿಳೆಯೊಬ್ಬರು ಕಲಿತರೆ ಶಾಲೆಯೊಂದು ತೆರದಂತೆ ಎನ್ನುವಂತೆ ಮನೆಯಲ್ಲಿ ಮಹಿಳೆ ಬುದ್ದಿವಂತರಾದರೆ ಆ ಸಂಸಾರ ಸುಖಿಯಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭ್ರಷ್ಠಾಚಾರ ವಿರೋಧಿ ಆಂದೋಲನ ಸಮಿತಿಯ ರಾಜ್ಯಾಧ್ಯಕ್ಷರಾದ ಹನುಮಂತಪ್ಪ ದುರ್ಗ, ಪ್ರಿಂಟ್ ಮೀಡಿಯಾ ಮತ್ತು ಸೋಶೀಯಲ್ ಮೀಡಿಯಾ ಪತ್ರಕರ್ತರ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಆನಂತಮೂರ್ತಿ ನಾಯ್ಕ್, ಕರ್ನಾಟಕ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀಮತಿ ಭಾರತಿ, ಜಿಲ್ಲಾ ಗೌರವಾಧ್ಯಕ್ಷರಾಧ ದೇವರಾಜ್, ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆಯ ಉಪ ನಿರ್ದೆಶಕರಾದ ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೆಶಕರಾದ ಮಲ್ಲಿಕಾರ್ಜನ್, ಸಾಹಿತಿಗಳಾದ ಆನಂದಕುಮಾರ್, ಸೋಮಣ್ಣ, ನಾಗೇಂದ್ರಪ್ಪ, ಶ್ರೀಮತಿ ಪವಿತ್ರ, ಜಿ.ಪ< ಮಾಜಿ ಸದಸ್ಯ ರಾಜನಾಯ್ಕ್, ಸಾಹಿತಿ ಮಂಜುನಾಥ್ ನಾಯ್ಕ್, ಶಿವಲಿಂಗಪ್ಪ, ವಕೀಲರ ಸಂಘದ ಅಧ್ಯಕ್ಷರಾದ ಮಹೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಜಗದೀಶ್ ಸುವರ್ಣಮ್ಮ. ನೂರುಲ್ಲಾ, ಶಂಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.

































