ಬೆಂಗಳೂರು : ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಿಪಕ್ಷ ಬಿಜೆಪಿ ಜಯಗಳಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ, ಕಿನ್ನಿಗೋಳಿ, ಉತ್ತರ ಕನ್ನಡ ಜಿಲ್ಲೆಯ ಮಂಕಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಾಧಿಸಿದೆ.
ದೊಡ್ಡಬಳ್ಳಾಪುರ ನಗರಸಭೆಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಯಚೂರು ಜಿಲ್ಲೆಯ ತುರ್ವಿಹಾಳದ ಪಟ್ಟಣ ಪಂಚಾಯಿತ್‌ನ 4ನೇ ವಾರ್ಡ್‍ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ ಸಾಧಿಸಿದ್ದಾರೆ.
ಬಜಪೆ ದಕ್ಷಿಣ ಕನ್ನಡದ ಬಜಪೆಯಲ್ಲಿ ಒಟ್ಟು ಸ್ಥಾನ – 19, ಬಿಜೆಪಿ 11, ಕಾಂಗ್ರೆಸ್ 4, ಎಸ್‌ಡಿಪಿಐ 3, ಪಕ್ಷೇತರ 1. ಕಿನ್ನಿಗೋಳಿ ಯಲ್ಲಿ ಒಟ್ಟು ಸ್ಥಾನ – 18, ಬಿಜೆಪಿ 10, ಕಾಂಗ್ರೆಸ್ 8. ಉತ್ತರ ಕನ್ನಡದ ಮಂಕಿಯಲ್ಲಿ ಒಟ್ಟು ಸ್ಥಾನ – 20, ಬಿಜೆಪಿ 12, ಕಾಂಗ್ರೆಸ್ 8. ಬೆಂಗಳೂರು ಗ್ರಾಮಾಂತರ ಬಾಶೆಟ್ಟಿಹಳ್ಳಿಯಲ್ಲಿ ಒಟ್ಟು ಸ್ಥಾನ – 19, ಬಿಜೆಪಿ – 15, ಕಾಂಗ್ರೆಸ್ – 3 ಸ್ಥಾನ ಪಡೆದಿದೆ.

































