ನವದೆಹಲಿ : ಧೂಮಪಾನ ಮಾಡುವವರಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಸಿಗರೇಟುಗಳ ಬೆಲೆಗಳು 18 ರೂಪಾಯಿ ಇದ್ದ ಸಿಗರೇಟ್ ಬೆಲೆ 72 ರೂಪಾಯಿ ಆಗಲಿದೆ. ಧೂಮಪಾನಿಗಳಿಗೆ ಈ ವಿಚಾರ ದೊಡ್ಡ ಶಾಕ್ ಕೊಟ್ಟಿದೆ. ಸಂಸತ್ತು ಕೇಂದ್ರ ಅಬಕಾರಿ (ತಿದ್ದುಪಡಿ) ಮಸೂದೆ, 2025 ಅನ್ನು ಅಂಗೀಕರಿಸಿದೆ.
ಹೀಗಾಗಿ ತಂಬಾಕು ಉತ್ಪನ್ನಗಳ ಬೆಲೆ ಏರಿಕೆ ಆಗಲಿದೆ. ಇದೀಗ ಸಾಮಾಜಿಕ ಮಾಧ್ಯಮಗಳ ವರದಿಯಲ್ಲಿ ಒಂದು ಸಿಗರೇಟ್ ಬೆಲೆ ಬರೋಬ್ಬರಿ ₹18 ರಿಂದ ₹72 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಇದು ಆಯಾ ಬ್ರ್ಯಾಂಡ್ಗಳ ಮೇಲೆ ಹೆಚ್ಚಾಗಲಿದೆ.
ಆದರೆ ಇದು ನಿರ್ಧಿಷ್ಟ ಬೆಲೆ ಎಂದು ಕೇಂದ್ರ ಸರ್ಕಾರ ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲವಾಗಿದೆ. ಡಿಸೆಂಬರ್ 2025ರಲ್ಲಿ ಅಂಗೀಕರಿಸಲಾದ ಪ್ರಮುಖ ತೆರಿಗೆ ಬದಲಾವಣೆಗಳ ನಂತರ ಭಾರತದಾದ್ಯಂತ ಸಿಗರೇಟ್ ಬೆಲೆಗಳು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕೇಂದ್ರ ಅಬಕಾರಿ (ತಿದ್ದುಪಡಿ) ಕಾಯ್ದೆ, 2025ರ ಅಡಿಯಲ್ಲಿ, ಹೊಸ ಅಬಕಾರಿ ರಚನೆಯನ್ನು ಪರಿಚಯಿಸಲಾಗಿದೆ. ಇದು ಅಸ್ತಿತ್ವದಲ್ಲಿರುವ GST ಪರಿಹಾರ ಸೆಸ್ ಅನ್ನು ಬದಲಿಸಿ 1,000 ಸ್ಟಿಕ್ಗಳಿಗೆ ₹11,000 ರಿಂದ ₹82,700 ರವರೆಗೆ ಸುಂಕಗಳನ್ನು ವಿಧಿಸುತ್ತದೆ.
ದೀರ್ಘ ಮತ್ತು ಪ್ರೀಮಿಯಂ ಸಿಗರೇಟ್ ಸ್ವರೂಪಗಳು ಅತ್ಯಂತ ದೊಡ್ಡ ಮೊತ್ತದ ಸುಂಕಗಳನ್ನು ಎದುರಿಸಬೇಕಾಗಬಹುದು ಎನ್ನಲಾಗುತ್ತಿದೆ.
































