ಚಿತ್ರದುರ್ಗ : ಚಿತ್ರದುರ್ಗ ನಗರದ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ 5 ವರ್ಷದ ಆಡಳಿತ ಮಂಡಳಿ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಶಿವಕುಮಾರ್ ಪಟೇಲ್ ಗುಂಪಿನ ಎಲ್ಲಾ 11 ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಈ ಸೊಸೈಟಿಯಲ್ಲಿ 373 ಜನ ಮತದಾರರಿದ್ದು ಇದರಲ್ಲಿ 345 ಜನ ಇಂದು ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತದಾನ ಮಾಡಿದ್ದಾರೆ. ಇದರಲ್ಲಿ ಸಾಮಾನ್ಯ ಕ್ಷೇತ್ರದಿಂದ ಶಿವಕುಮಾರ್ ಪಟೇಲ್(253) ಬಿ.ಎಂ. ಕರಿಬಸಯ್ಯ(205) ಜೆ.ಎಸ್.ಪ್ರಸಾದ್ (190) ಜಿ.ಟಿ.ಸುರೇಶ್(187) ಸಿ.ಚಂದ್ರಪ್ಪ(182) ಕೆ.ಹೆಚ್. ಮುರುಗೇಂದ್ರಪ್ಪ(180) ಡಿ.ಎಸ್.ರಾಜೇಶ್ (163) ಆಯ್ಕೆಯಾಗಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರದಿಂದ ಜಿ.ಆರ್.ನಿವೇದಿತಾ (222) ಶೈಲಜ ಎಂ.(194) ಹಿಂದುಳಿದ ವರ್ಗ ಬಿ ನಿಂದ ರೀನಾ ಕೆ.ಜಿ. (217) ಹಿಂದುಳಿದ ವರ್ಗ ಎ ನಿಂದ ನೀಲಕಂಠೇಶ್ವರಪ್ಪ ಡಿ.ಎಸ್. (198) ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾದಿಸಿದ ನಂತರ ಪಕ್ಕದಲ್ಲಿನ ಶ್ರೀ ನೀಲಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ವಿಜಯಿ ಅಭ್ಯರ್ಥಿಗಳು ತಮ್ಮ ಗೆಲುವಿಗೆ ಸಹಾಯ ಮಾಡಿದ ಭಗವಂತನಿಗೆ ಕೃತಘ್ನತೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಶಿವಕುಮಾರ್ ಪಟೇಲ್ ನಮ್ಮ ತಂಡ ಈ ಚುನಾವಣೆಯಲ್ಲಿ ಅಭೂತಪೂರ್ವವಾದ ಗೆಲುವನ್ನು ಸಾಧಿಸಲಾಗಿದೆ ನಮ್ಮ ಗೆಲುವಿಗೆ ಸಹಕಾರ ನೀಡಿದ ಎಲ್ಲರಿಗೂ ಸಹಾ ಕೃತಘ್ನತೆಯನ್ನು ಸಲ್ಲಿಸುತ್ತೇನೆ ಇದಕ್ಕೆ ನೀವೆಲ್ಲಾ ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಕಾರಣವಾಗಿದೆ. ಇದನ್ನು ಮುಂದಿನ ದಿನಗಳಲ್ಲಿಯೂ ಸಹಾ ನಡೆಸಿಕೊಂಡು ಸಹಾ ಸೊಸೈಟಿ ಹಾಗೂ ಸಮಾಜಕ್ಕೆ ಸಹಾ ಕೈಜೋಡಿಸಿ, ಎಲ್ಲರೂ ಒಗ್ಗಟಾಗಿ ಮುಂದಿನ ಕೆಲಸವನ್ನು ಮಾಡೋಣ ಮುಂದಿನ ದಿನದಲ್ಲಿ ನನ್ನಿಂದ ಅತಿ ಹೆಚ್ಚಿನ ಸೇವೆಯನ್ನು ನಿರೀಕ್ಷೆ ಮಾಡಲಾಗುತ್ತದೆ. ಇದರಲ್ಲಿ ನಿಮ್ಮ ಸಲಹೆ ಸಹಕಾರ ಅತಿ ಮುಖ್ಯವಾಗಿದೆ, ತಪ್ಪುಗಳನ್ನು ಮಾಡಿದರೆ ಅದನ್ನು ತಿದ್ದಿಕೊಂಡು ನಡೆಯಲಾಗುವುದು. ನಾನು ತಪ್ಪು ಮಾಡಲು ಯಾವುದೇ ಕಾರಣಕ್ಕೂ ಅಸ್ಪದವನ್ನು ನೀಡುವುದಿಲ್ಲ ಕಳೆದ ಐದು ವರ್ಷದಲ್ಲಿ ಸೊಸೈಟಿಯನ್ನು ಉತ್ತಮವಾಗಿ ತೆಗೆದುಕೊಂಡು ಹೋಗಲಾಗಿದೆ. ಹಲವಾರು ಅಭೀವೃದ್ದಿ ಕಾರ್ಯವನ್ನು ಕೈಗ್ಗೊಳ್ಳಲಾಗಿದೆ ಮುಂದಿನ ದಿನದಲ್ಲಿಯೂ ಸಹಾ ಸೊಸೈಟಿ ಹಾಗೂ ಸಮಾಜಕ್ಕೆ ನನ್ನ ಕೈಲಾದ ಸಹಾಯವನ್ನು ಮಾಡುವುದರ ಮೂಲಕ ಸೊಸೈಟಿ ಮತ್ತು ಸಮಾಜದ ಬೆಳವಣಿಗೆಗೆ ನೆರವಾಗುವುದಾಗಿ ತಿಳಿಸಿದರು.































