ಚಿತ್ರದುರ್ಗ: ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಕೇಂದ್ರ ಪುರಸ್ಕೃತ ಯೋಜನೆಯಾದ ಸಿಲ್ಕ್ ಸಮಗ್ರ-2 ಯೋಜನೆಯಡಿ ರೇಷ್ಮೆ ಕೈಮಗ್ಗ ನೇಕಾರರನ್ನು ಉತ್ತೇಜಿಸಲು ಶೇಕಡ 75% ರಷ್ಟು ರಿಯಾಯಿತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಉತ್ತಮ ಗುಣಮಟ್ಟವುಳ್ಳ ಕುಣಿ ರೇಷ್ಮೆ ಕೈಮಗ್ಗ ಕಾಂಪೋನೆAಟ್‌ನಡಿ 40 ಗುರಿ ಹಾಗೂ ಉತ್ತಮ ಗುಣಮಟ್ಟವುಳ್ಳ ಗುಣಿ ಕೈಮಗ್ಗಕ್ಕೆ ಬೇಕಾದ ರೇಕಾರ್ಡ್ ಪರ್ಮ್ವೈಂಡಿAಗ್ ಮತ್ತು ಇತರೆ ಸಾಮಾಗ್ರಿಗಳನ್ನು ಅಳವಡಿಸಲು ಕಾಂಪೋನೆAಟ್‌ನಡಿ 50 ಗುರಿಯನ್ನು ಪ್ರಸಕ್ತ ಸಾಲಿಗೆ ನಿಗಧಿಪಡಿಸಲಾಗಿದೆ.
ಆಸಕ್ತ ರೇಷ್ಮೆ ಕೈಮಗ್ಗ ನೇಕಾರರು ನಿಗದಿತ ನಮೂನೆಯ ಅರ್ಜಿಯೊಂದಿಗೆ ಸೂಕ್ತ ದಾಖಲಾತಿಗಳನ್ನು ಜ.12 ರೊಳಗೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಬೇಕು, ಹೆಚ್ಚಿನ ಮಾಹಿತಿಗಾಗಿ ಬಿ.ಡಿ.ರಸ್ತೆ, ಭಾಗ್ಯ ಕಾಂಪ್ಲೆಕ್ಸ್ನ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕರ ಕಛೇರಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08194-221426 ಗೆ ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.

































