ಬೆಂಗಳೂರು: ರಾಜ್ಯದಲ್ಲಿ ಹೊಸವರ್ಷ 2025 ನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಲಾಗಿದ್ದು, ಈ ನಡುವೆ ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.
ಹೌದು, 2025 ರ ಡಿಸೆಂಬರ್ 3 ದಿನದಲ್ಲಿ ರಾಜ್ಯಾದ್ಯಂತ ಬರೋಬ್ಬರಿ 745.84 ಕೋಟಿ ರೂ. ಮದ್ಯ ಮಾರಾಟ ಮಾಡಲಾಗಿದೆ. 2024 ರ ಡಿಸೆಂಬರ್ 31 ರಂದು 308 ಕೋಟಿ ರೂ. ಕೋಟಿ ರೂ. ಮದ್ಯ ಮಾರಾಟ ಮಾಡಲಾಗಿತ್ತು. 025 ಡಿಸೆಂಬರ್ ತಿಂಗಳ ಕೊನೆಯ 3 ದಿನಗಳಲ್ಲಿ 745.84 ರೂ ಕೋಟಿ ಮೌಲ್ಯದ ಇಂಡಿಯನ್ ಮೇಡ್ ಮದ್ಯ ಮತ್ತು ಬಿಯರ್ ಮಾರಾಟವಾಗಿದೆ. ಇದರಿಂದ ಅಬಕಾರಿ ಇಲಾಖೆಗೆ 587.51 ಕೋಟಿ ಆದಾಯ ಹರಿದು ಬಂದಿದೆ. 2024 ಕ್ಕೆ ಹೋಲಿಸಿದರೆ ಆದಾಯದಲ್ಲಿ ಶೇಕಡ 39.63ರಷ್ಟು ಹೆಚ್ಚಳವಾಗಿದೆ.

































