ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಕರೀಕೆರೆ ಗ್ರಾಮದ ಜಿ.ಹೊನ್ನೂರಪ್ಪ ಮತ್ತು ನಂಜಮ್ಮ ಅವರ ಹಿರಿಯ ಮಗನಾದ ಮತ್ತು ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಹೆಚ್ ವೆಂಕಟೇಶ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯ ಪಿಹೆಚ್‍ಡಿ ಪದವಿ ನೀಡಿದೆ.
ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಜಿ.ಸರ್ವಮಂಗಳ ಅವರ ಮಾರ್ಗದರ್ಶನದಲ್ಲಿ “ಚಿತ್ರದುರ್ಗ ಜಿಲ್ಲೆಯ ಶೈವ ಮತ್ತು ವೈಷ್ಣವ ಶಿಲ್ಪಗಳ ಅಧ್ಯಯನ” ಎಂಬ ವಿಷಯವನ್ನು ಕುರಿತು ಮಂಡಿಸಿದ ಸಂಶೋಧನ ಮಹಾಪ್ರಬಂದಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಯನ್ನು ನೀಡಿದೆ.
ಈ ಶೈಕ್ಷಣಿಕ ಸಾಧನೆಗೆ ಗುರುಗಳಾದ ಪ್ರೊ ಸರ್ವಮಂಗಳ ಜಿ, ಪ್ರೊ ರಾಜಾರಾಮ ಹೆಗ್ಗಡೆ ಮತ್ತು ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಮಹೇಶ ಮತ್ತು ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ, ಕುಟುಂಬವರ್ಗದವರು ಅಭಿನಂದಿಸಿದ್ದಾರೆ.
































