ಹೊಸದಾಗಿ ಅಪ್ಪ ಅಮ್ಮ ಆಗಲಿರುವರು ತಮ್ಮ ಚೊಚ್ಚಲ ಮಗುವಿನ ಹೆಸರು ಏನು ಇಡುವುದು ಅನ್ನೋದರ ಬಗ್ಗೆ ಹುಡುಕಾಟ ಶುರು ಮಾಡುತ್ತಾರೆ. ಚೊಚ್ಚಲ ಮಗುವಿಗೆ ಒಂದೊಳ್ಳೆಯ ಹೆಸರು ಹುಡುಕಾಡಿ ಇಡುವುದು ಒಂದು ರೀತಿಯ ರೋಮಾಂಚನಕಾರಿಯಾದ ಅನುಭವವಾಗಿರುತ್ತದೆ.
ಎಲ್ಲಾ ಪೋಷಕರು ಸಹ ತಮ್ಮ ಚೊಚ್ಚಲ ಮಗುವಿಗೆ ಒಂದೊಳ್ಳೆಯ ಅರ್ಥವಿರುವಂತಹ ಮತ್ತು ಅಷ್ಟೇ ಸುಂದರವಾದ ಹೆಸರನ್ನು ಹುಡುಕಿ ಇಡಬೇಕು ಅಂತ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ.
ಅದರಲ್ಲೂ ಮೊದಲ ಮಗು ಹೆಣ್ಣು ಮಗು ಆಗಿದ್ದರೆ, ಮಗುವಿನ ಜೀವನಕ್ಕೆ ಒಂದು ಅರ್ಥ ನೀಡುವ ಹೆಸರನ್ನು ಹುಡುಕುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ.
ಚೊಚ್ಚಲ ಹೆಣ್ಣು ಮಗುವಿಗೆ ಇಡಬಹುದಾದ ಒಳ್ಳೆಯ ಹೆಸರುಗಳಿವು..
ಆರಾಧ್ಯ
ಇದು ಸುಂದರ ಮತ್ತು ಅರ್ಥಪೂರ್ಣ ಹೆಸರು ಆಗಿದ್ದು, ಆರಾಧ್ಯ ಅಂತ ಹೇಳಿದರೆ ಅದು ಭಕ್ತಿ ಮತ್ತು ಗೌರವದ ಪ್ರಾತಿನಿಧ್ಯವಾಗಿರುತ್ತದೆ. ಇದು ಯಾವಾಗಲೂ ಮಗುವಿನಲ್ಲಿ ಪರಿಶುದ್ಧತೆ ಮತ್ತು ಶಕ್ತಿಯನ್ನು ಸೂಚಿಸುತ್ತದೆ.
ಬಹುಶಃ ಇದು ಚೊಚ್ಚಲ ಮಗಳಿಗೆ ಜನಪ್ರಿಯವಾಗಿರಲು ಒಂದು ಕಾರಣವಾಗಿದೆ. ಪೋಷಕರು ಸಾಮಾನ್ಯವಾಗಿ ಈ ಮಗುವನ್ನು ದೇವರ ಉಡುಗೊರೆ ಮತ್ತು ಅವರ ಜೀವನದಲ್ಲಿ ಸಕಾರಾತ್ಮಕತೆ ಎಂದು ಸಹ ನೋಡುತ್ತಾರೆ.
ನವ್ಯಾ
ನವ್ಯಾ ಎಂದರೆ ಹೊಸದಾದ ಮತ್ತು ಅಷ್ಟೇ ವಿನೂತನವಾದ ಎಂಬ ಅರ್ಥಗಳನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಈ ಹೆಸರು ತುಂಬಾನೇ ಚಿಕ್ಕದಾಗಿ ಮತ್ತು ಚೊಕ್ಕದಾಗಿಯೂ ಸಹ ಇರುತ್ತದೆ. ಇದು ಕುಟುಂಬದ ಮೊದಲ ಮಗುವಿಗೆ ಇಡಲು ತುಂಬಾನೇ ಸೂಕ್ತವಾಗಿದೆ.
ನವ್ಯಾ ಹೊಸ ಆರಂಭ, ಭರವಸೆ ಮತ್ತು ಬೆಳವಣಿಗೆಯನ್ನು ಸಂಕೇತಿಸುತ್ತದೆ. ಈ ಹೆಸರು ತುಂಬಾ ಆಧುನಿಕವಾಗಿದ್ದರೂ ಅರ್ಥಪೂರ್ಣವಾಗಿದೆ. ಹೊಸ ಜೀವನದ ಹಂತದ ಆರಂಭವನ್ನು ಆಚರಿಸುತ್ತಿರುವ ದಂಪತಿಗಳಿಗೆ ಮಗುವಿಗೆ ನವ್ಯಾ ಅಂತ ಹೆಸರಿಡುವುದು ತುಂಬಾನೇ ಸೂಕ್ತವಾಗಿರುತ್ತದೆ.
ತಾರಾ
ತಾರಾ ಎಂದರೆ ನಕ್ಷತ್ರ ಎಂಬ ಅರ್ಥವನ್ನು ನೀಡುವುದಲ್ಲದೆ, ಇದರ ಇನ್ನಿತರೆ ಅರ್ಥಗಳು ಹೊಳಪು, ನಿರ್ದೇಶನ ಮತ್ತು ಸ್ಫೂರ್ತಿಯನ್ನು ಸಹ ಪ್ರತಿನಿಧಿಸುತ್ತದೆ.
ಚೊಚ್ಚಲ ಮಗಳಿಗೆ ತಾರಾ ಎಂಬ ಹೆಸರನ್ನು ಇಡುವುದು ಕುಟುಂಬದಲ್ಲಿ ಪ್ರಕಾಶಮಾನವಾದ ಬೆಳಕು ಎಂಬ ಅಂಶದ ದೃಷ್ಟಿಯಿಂದ ಮಹತ್ವದ್ದಾಗಿದೆ. ಈ ಹೆಸರು ಸಾಂಪ್ರದಾಯಿಕ, ಹೇಳಲು ಸರಳ ಮತ್ತು ಸಾರ್ವತ್ರಿಕವಾಗಿಯೂ ಸಹ ತುಂಬಾನೇ ಮೆಚ್ಚುಗೆ ಪಡೆದಿದೆ.
ಆನ್ಯಾ
ಆನ್ಯಾ ಎಂಬುದರ ಅರ್ಥ ಕೃಪೆ ಮತ್ತು ದಯೆ ಅಂತಾಗುತ್ತದೆ, ಇದು ಸೂಕ್ಷ್ಮ ಮತ್ತು ಹೊಸ ಯುಗದ ಹೆಸರಾಗಿದೆ. ಇದು ಅನುಗ್ರಹ ಮತ್ತು ಸಕಾರಾತ್ಮಕತೆಯನ್ನು ಸಹ ಪ್ರದರ್ಶಿಸುತ್ತದೆ.
ಮೊದಲ ಮಗು ಹೆಣ್ಣು ಮಗುವಾದ್ದರಿಂದ ಅದಕ್ಕೆ ಆನ್ಯಾ ಎಂಬ ಹೆಸರಿಡುವುದು ಕುಟುಂಬದಲ್ಲಿ ಸುಗಮ ಆರಂಭ ಮತ್ತು ಶುಭ ಉಪಸ್ಥಿತಿಯನ್ನು ಸಂಕೇತಿಸುತ್ತದೆ. ಈ ಹೆಸರಿನ ಉಚ್ಚಾರಣೆ ಸಹ ಅಷ್ಟೇ ಸರಳವಾಗಿದೆ.
ಕಿಯಾರಾ
ಕಿಯಾರಾ ಎಂಬ ಪದದ ಅರ್ಥ ಪ್ರಕಾಶಮಾನವಾದ ಮತ್ತು ಸ್ಪಷ್ಟವಾದ ಅಂತ ಹೇಳಬಹುದು. ಈ ಹೆಸರು ಭರವಸೆ, ಶಕ್ತಿ ಮತ್ತು ಉಜ್ವಲ ಭವಿಷ್ಯವನ್ನು ಪ್ರತಿನಿಧಿಸುತ್ತದೆ.
ಇದು ಮಕ್ಕಳಿಗೆ ಟ್ರೆಂಡಿ ಹೆಸರು ಅಷ್ಟೇ ಅಲ್ಲದೆ, ಒಂದೊಳ್ಳೆಯ ಅರ್ಥವನ್ನು ಸಹ ನೀಡುವಂತಹ ಹೆಸರನ್ನು ಬಯಸುವ ಪೋಷಕರಿಗೆ ಒಂದೊಳ್ಳೆಯ ಆಯ್ಕೆಯಾಗಿದೆ. ಕಿಯಾರಾ ಎಂಬ ಹೆಸರು ಚೊಚ್ಚಲ ಮಗುವಿನ ಹೆಸರಾಗಿ ಭರವಸೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ.
































