ಮುಂಬೈ : ಯುಪಿಎಸ್‌ಸಿ ಪರೀಕ್ಷೆಯು ಭಾರತದ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾದ ಅವಧಿಜಾ ಗುಪ್ತಾ ಅವರ ಯಶೋಗಾಥೆ ಇದು.
ಮೂಲತಃ ಮಹಾರಾಷ್ಟ್ರದವರಾದ ಅವಧಿಜಾ ಗುಪ್ತಾ ಅವರು, ತಂದೆಯ ವರ್ಗಾವಣೆ ಕೆಲಸದ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಶಿಕ್ಷಣ ಪಡೆದರು. ರಾಜಸ್ಥಾನದಲ್ಲಿ 10ನೇ ತರಗತಿ ಮತ್ತು ಕೋಲ್ಕತ್ತಾದಲ್ಲಿ 12ನೇ ತರಗತಿ ಪೂರೈಸಿದ ಅವರು, 2020ರಲ್ಲಿ ಪದವಿ ಮುಗಿಸಿದ ತಕ್ಷಣ ಸಿವಿಲ್ ಸರ್ವಿಸ್ ಸೇರಲು ನಿರ್ಧರಿಸಿದರು.
2020ರಲ್ಲಿ ಯುಪಿಎಸ್‌ಸಿಗೆ ಅವಧಿಜಾ ಅವರು ಸಿದ್ಧತೆ ನಡೆಸಲು ಪ್ರಾರಂಭಿಸಿದರು. ಮೊದಲ ಮೂರು ಪ್ರಯತ್ನಗಳಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರು ವಿಫಲರಾಗುತ್ತಾರೆ. ಸತತವಾಗಿ ಯುಪಿಎಸ್‌ಸಿಯಲ್ಲಿ ಉತ್ತೀರ್ಣರಾಗಲು ವಿಫಲರಾದರೂ ಅವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ.
2024ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದ ಅವಧಿಜಾ ಅವರು ಅಂತಿಮವಾಗಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. 43ನೇ ರ‍್ಯಾಂಕ್ ಪಡೆಯುವ ಮೂಲಕ ಅವರು ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡರು.

































