ಚಿತ್ರದುರ್ಗ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತರಲು ಹೊರಟಿರುವ ವಿಬಿ ಜಿ ರಾಮ್ ಜಿ ಸ್ಕೀಂ ರಾಜ್ಯದ ಕೂಲಿ ಕಾರ್ಮಿಕರಿಗೆ ಹಾಗೂ ಗ್ರಾಮ ಪಂಚಾಯತಿಗಳಿಗೆ ಮರಣ ಶಾಸನವಾಗಲಿದೆ ಎಂದು ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸೋನಿಯಾ ಗಾಂಧೀಜಿಯವರ ನೇತೃತ್ವದಲ್ಲಿ ಮನಮೋಹನ್ಸಿಂಗ್ ರವರು ಮನರೇಗಾ ಯೋಜನೆ ಜಾರಿಗೆ ತಂದರು ಆದರೆ ಅದರ ಮೂಲ ಸ್ವರೂಪವನ್ನೇ ಈಗ ಬದಲಾವಣೆ ಮಾಡಲು ಹೊರಟಿದ್ದಾರೆ… ಈ ಹಿಂದೆ ಇದ್ದ ಕಾಯಿದೆಯನ್ನು ರದ್ದುಪಡಿಸಿ ಸ್ಕೀಂ ಮಾಡಲು ಹೊರಟಿದ್ದಾರೆ ಇದು ಖಂಡನೀಯ.ಇದನ್ನು ನಾವು ಖಂಡಿಸುತ್ತೇವೆ.ಈ ಹೊಸ ಸ್ಕೀಂನ್ನು ರಾಜ್ಯ ಸರ್ಕಾರ ಒಪ್ಪುವುದಿಲ್ಲ. ಈ ಹಿಂದೆ ಇದ್ದಂತಹ ಮನರೇಗಾ ಯೋಜನೆಯನ್ನೇ ಮುಂದುವರಿಸುವ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಈ ಹೊಸ ಸ್ಕೀಂ ಜಾರಿಯಾದರೆ ಕೂಲಿ ಕಾರ್ಮಿಕರಿಗೆ ತೊಂದರೆಯಾಗಲಿದೆ ಮಧ್ಯವರ್ತಿಗಳ ಹಾವಳಿ ಜಾಸ್ತಿಯಾಗಲಿದೆ ಎಂದರು.
ದೇಶದಲ್ಲಿ ಶಾಂತಿ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ಜಾರಿಗೆ ತಂದೆ ಬಡವರ ಬದುಕಿಗೆ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಪ್ರಸಿದ್ದಿಯಾದ ಮನರೇಗಾ ಯೋಜನೆಯ ಹೆಸರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಿ ರಾಮ್ ಜಿ ಎಂದು ಬದಲಾವಣೆ ಮಾಡುವ ಮೂಲಕ ಗಾಂಧೀಜಿಯನ್ನು ನಿತ್ಯ ಹತ್ಯೆ ಮಾಡುತ್ತಿದ್ದಾರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಾವಣೆ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ದ ಹೋರಾಟ ಮಾಡಲಾಗುವುದು ಮತ್ತು ಪ್ರತಿ ಗ್ರಾಪಂ ಹಂತದಲ್ಲೂ ಹೋರಾಟ ಹಮ್ಮಿಕೊಳ್ಳಬೇಕು ಎಂದರು.
ಯುಪಿಎ ಸರ್ಕಾರ ಜಾರಿಗೆ ತಂದಂತ ಯೋಜನೆ ದೇಶದಲ್ಲಿ ಅತ್ಯುತ್ತಮ ಯೋಜನೆಯಾಗಿದ್ದು ಐಎಂಎಫ್ ಕೂಡ ಈ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.ಬಿಜೆಪಿ ಸರ್ಕಾರ ಈ ಸ್ಕೀಂ ಜಾರಿಗೆ ತರುವುದಕ್ಕೂ ಮುಂಚೆ ರಾಜ್ಯ ಸರ್ಕಾರಗಳ ಜೊತೆಗೆ ಯಾವುದೇ ಚರ್ಚೆಯನ್ನು ಮಾಡದೇ ಏಕಾಏಕಿಯಾಗಿ ಸ್ಕೀಂನ್ನು ಜಾರಿಗೆ ಮಾಡಲು ಮುಂದಾಗಿದೆ.ದೇಶದಲ್ಲಿನ ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳು ಇದನ್ನು ವಿರೋಧಿಸುತ್ತಿವೆ… ಯಾವುದೇ ಕಾರಣಕ್ಕೂ ಈ ಸ್ಕೀಂ ಜಾರಿಯಾಗಬಾರದು.. ಇದರ ಬಗ್ಗೆ ಜನಜಾಗೃತಿ ಮೂಡಿಸಲು ಜನೇವರಿ -26ರಂದು ಪ್ರತಿಭಟನೆ ನಡೆಸಲಾಗುವುದು ಯಾವುದೇ ಕಾರಣಕ್ಕೂ ನಮ್ಮ ರಾಜ್ಯದಲ್ಲಿ ಈ ಸ್ಕೀಂ ಜಾರಿಯಾಗಲು ಬಿಡುವುದಿಲ್ಲ… ಈ ಹಿಂದೆ ಮನರೇಗಾ ಯೋಜನೆಯಡಿ ಶೇ 90% : 10% ಇತ್ತು ಆದರೆ ಈಗ ಕೇಂದ್ರ ಸರ್ಕಾರ ಶೇ 60% : 40% ಮಾಡಿದೆ.. ಪ್ರತಿ ರಾಜ್ಯಗಳಿಗೆ ಶೇ 30% ರಷ್ಟು ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ನಮ್ಮ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಜೊತೆಗೆ ಇದಕ್ಕೂ ಸಹ ಹಣವನ್ನು ಹೊಂದಿಸಬೇಕಾಗುತ್ತದೆ… ಇದರಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳಲಿದೆ.ಈಗ ನಡೆಯುತ್ತಿರುವ ಮನರೇಗಾ ಯೋಜನೆಗೂ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸ್ಕೀಂಗೂ ಅಜಗಜಾಂತರ ವ್ಯತ್ಯಾಸವಿದೆ.ಇಲ್ಲಿ ಮಾನವ ದಿನಗಳಿಗೆ ಖಾತ್ರಿ ಕೊಟ್ಟಿಲ್ಲ ಯಾವಾಗ ಬೇಕಾದರೂ ಸಹ ಕಡಿಮೆ ಮಾಡಬಹುದು. ಪಂಚಾಯಿತಿಗಳಿಗೆ ಕಾಮಗಾರಿಯ ಆಯ್ಕೆ ಹಕ್ಕನ್ನು ನೀಡಿಲ್ಲ.. ಎಲ್ಲವನ್ನು ಸಹ ಕೇಂದ್ರ ಸರ್ಕಾರವೇ ನಿರ್ಧಾರ ಮಾಡಲಿದ್ದು.. ಅದೂ ಸಹ ಎಲ್ಲಾ ಪಂಚಾಯಿತಿಗಳಿಗೆ ಈ ಸ್ಕೀಂಅನ್ವಯವಾಗದೇ ಆಯ್ದ ಪಂಚಾಯಿತಿಗಳಿಗೆ ಮಾತ್ರ ಅನ್ವಯವಾಗುವಂತೆ ಮಾಡಲಾಗುತ್ತಿದೆ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಶಾಸಕರಾದಎನ್.ವೈ. ಗೋಪಾಲಕೃಷ್ಣ ಬಿ.ಜಿ ಗೋವಿಂದಪ್ಪ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿಎಸ್ಮಂಜುನಾಥ್ ದ್ರಾಕ್ಷಿ ರಸಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಬಿ ಯೋಗೇಶ್ ಬಾಬು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಆರ್ ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಂ.ಕೆ.ತಾಜ್ಪೀರ್ ಹಾಗೂ ಕಾರ್ಯಾಧ್ಯಕ್ಷರಾದ ಕೆ.ಎಂ. ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್ಕುಮಾರ್ ಮೈಲಾರಪ್ಪ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್,ಕೆ .ಸರ್ದಾರ್, ಬಿ.ಟಿ.ಜಗದೀಶ್, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾ ನಂದಿನಿ ಗೌಡ ಉಪಸ್ಥಿತರಿದ್ದರು.
































