ಚಿತ್ರದುರ್ಗ : ನಗರದ ಮೆದೇಹಳ್ಳಿ ರಸ್ತೆಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ (ರಿ.)ವತಿಯಿಂದ 26ನೇ ವರ್ಷದ ದೀಪೋತ್ಸವ ಕಾರ್ಯಕ್ರಮದ ಅಂಗವಾಗಿ ನಗರದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಸ್ವಾಮಿಯ ಆಭರಣಗಳ ಮೆರವಣಿಗೆ ಇಂದು ಸಂಜೆ ನಡೆಸಲಾಯಿತು.
ಈ ಸಂದರ್ಭದಲ್ಲಿ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿಗೆ ಧರಿಸುವ ವಿವಿಧ ರೀತಿಯ ಆಭರಣಗಳು ಹಾಗೂ ದಾನಿಗಳು ನೀಡಿದ ವಜ್ರಾಭರಣವನ್ನು ಸಹಾ ಇರಿಸಿ ಅಯ್ಯಪ್ಪ ಮಾಲಾಧಾರಿಗಳಿಂದ ಅವುಗಳಿಗೆ ಪೂಜೆಯನ್ನು ಮಾಡುವುದರ ಮೂಲಕ ದೇವಾಲಯದಿಂದ ತಲೆಯ ಮೇಲೆ ಇರಿಸಿಕೊಂಡು ಸಂತೇಪೇಟೆ ವೃತ್ತ, ಬಿ.ಡಿ.ರಸ್ತೆ, ವಾಸವಿ ಮಹಲ್ ರಸ್ತೆ, ಸಂತೇಹೊAಡದ ರಸ್ತೆ, ಮೂಲಕ ಮೇದೇಹಳ್ಳಿ ರಸ್ತೆಯಿಂದ ಅಯ್ಯಪ್ಪಸ್ವಾಮಿ ದೇವಾಲಯವನ್ನು ತಲುಪಲಾಯಿತು.
ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಶರಣ್ ಕುಮಾರ್, ಉಪಾಧ್ಯಕ್ಷರಾದ ಬೆಟ್ಟದ ಮಲ್ಲಪ್ಪ, ಮಲ್ಲಿಕಾರ್ಜನ್, ಕಾರ್ಯದರ್ಶಿ ಎಂ.ಪಿ.ವೆAಕಟೇಶ್, ಸಹ ಕಾರ್ಯದರ್ಶಿ ಚಂದ್ರಶೇಖರ್, ನಿರ್ದೆಶಕರಾದ ಮೋಹನ್ ಕುಮಾರ್, ತಿಮ್ಮಣ್ಣ, ಜಗದೀಶ್, ಇಂದ್ರಪ್ಪ ರಮೇಶ್, ಸೂರಯ್ಯ, ಮಿಠಾಯಿ ಮುರುಗೇಶ್, ಮಂಜುನಾಥ್ ಶೆಟ್ಟಿ ಸೇರಿದಂತೆ ಅಯ್ಯಪ್ಪ ಮಾಲಾಧಾರಿಗಳು ಭಾಗವಹಿಸಿ ದಾರಿಯುದ್ದಕ್ಕು ಅಯ್ಯಪ್ಪನ ನಾಮ ಸ್ಮರಣೆಯನ್ನು ಮಾಡುತ್ತಾ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.
ಜ. 14ರ ಸಂಜೆ 5 ಗಂಟೆಗೆ 26ನೇ ವರ್ಷದ ದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭವನ್ನು ಲೋಕಸಭಾ ಸದಸ್ಯರಾದ ಗೋವಿಂದ ಎಂ.ಕಾರಜೋಳ ಉದ್ಘಾಟಿಸಲಿದ್ದಾರೆ. ದೀಪೋತ್ಸವವನ್ನು ಶಾಸಕರಾದ ಕೆ.ಸಿ.ವಿರೇಂದ್ರ ಉದ್ಘಾಟನೆ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಎಸ್.ಆರ್. ಎಸ್.ವಿದ್ಯಾಸಂಸ್ಥೆಯ ಲಿಂಗಾರೆಡ್ಡಿ, ಡಿ.ಸಿ.ಸಿ.ಬ್ಯಾಂಕ್‌ನ ನಿರ್ದೆಶಕರಾದ ಟಿ.ಮಹಂತೇಶ್, ಹೆಚ್.ಎಂ.ದ್ಯಾಮಣ್ಣ, ವರ್ತಕರಾದ ಉದಯ್ ಶೆಟ್ಟಿ, ಡಾ. ಸಿದ್ದಾರ್ಥ್, ಐಶ್ವರ್ಯ ಗ್ರೂಪ್ ಆಫ್ ಹೋಟೆಲ್ಸ್ ಮಾಲಿಕ ರಾದ ಅರುಣ್‌ಕುಮಾರ್,ಮೆದೇಹಳ್ಳಿ ಗ್ರಾಮಪಂಚಾಯಿತಿಯ ಅಧ್ಯಕ್ಷರಾದನಿರಂಜನಮೂರ್ತಿ, ಟೀಚರ್ಸ್ ಕಾಲೋನಿ ಯ ಸುಭಾಷ್‌ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಟಿ. ಬದರೀನಾಥ್, ಶ್ರೀ ಕಂಠೇಶ್ವರ ಏಜೆನ್ಸಿಸ್‌ಯ ಸುರೇಶ್ ಬಾಬು ಭಾಗವಹಿಸಲಿದ್ದು, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಶರಣ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜ 14ರ ಸಂಜೆ5-30ರಿAದ ಹಿನ್ನಲೆ ಗಾಯಕರಾದ ಯಶವಂತ್, ಮಂಗಳೂರು, ನಿತಿನ್ ರಾಜಾರಾಮ್ ಶಾಸ್ತಿç, ಮೈಸೂರು ಹಾಗೂ ಕೃಪಾ ಎಸ್. ಬೆಂಗಳೂರು ಇವರಿಂದ ಸುರಸಾರವ ಭಕ್ತಿ ಕಾರ್ಯಕ್ರಮ ನಡೆಯಲಿದೆ
































