ನವದೆಹಲಿ : ಅಕ್ರಮವಾಗಿ ವಾಕಿ-ಟಾಕಿ ಮಾರಾಟ ಮಾಡುತ್ತಿರುವ 13 ಇ-ಕಾಮರ್ಸ್ ವೆಬ್ಸೈಟ್ಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ತಲಾ 10 ಲಕ್ಷ ರೂ. ಹಾಗೂ ತಲಾ 1 ಲಕ್ಷ ರೂ. ದಂಡ ವಿಧಿಸಿದೆ.
ಗ್ರಾಹಕ ರಕ್ಷಣಾ ಕಾಯ್ದೆ 2019 ಮತ್ತು ದೂರಸಂಪರ್ಕ ಕಾನೂನುಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ವಾಕಿ-ಟಾಕಿಗಳನ್ನು ಮಾರಾಟ ಮಾಡಿದ್ದಕ್ಕಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಂಡಿದೆ.
ಈ ಮೂಲಕ ಎಂಟು ಘಟಕಗಳ ವಿರುದ್ಧ ಆದೇಶ ಹೊರಡಿಸಿದ್ದು, ಒಟ್ಟು 44 ಲಕ್ಷ ರೂ. ದಂಡ ವಿಧಿಸಿದೆ. 16,970ಕ್ಕೂ ಹೆಚ್ಚು ನೋಂದಣಿಯಾಗದ ಉತ್ಪನ್ನಗಳ ಪಟ್ಟಿಯನ್ನು ಗುರುತಿಸಿ, ಚಿಮಿಯಾ, ಜಿಯೋಮಾರ್ಟ್, ಟಾಕ್ ಪ್ರೊ, ಮೀಶೋ, ಮಾಸ್ಕ್ಮ್ಯಾನ್ ಟಾಯ್ಸ್, ಟ್ರೇಡ್ಇಂಡಿಯಾ, ಆಂಟ್ರಿಕ್ಷ್ ಟೆಕ್ನಾಲಜೀಸ್, ವರ್ದಾನ್ಮಾರ್ಟ್, ಇಂಡಿಯಾಮಾರ್ಟ್, ಮೆಟಾ ಪ್ಲಾಟ್ಫಾರ್ಮ್ಸ್ ಇಂಕ್ (ಫೇಸ್ಬುಕ್ ಮಾರುಕಟ್ಟೆ), ಫ್ಲಿಪ್ಕಾರ್ಟ್, ಕೃಷ್ಣ ಮಾರ್ಟ್ ಮತ್ತು ಅಮೆಜಾನ್ ಸೇರಿ ಒಟ್ಟು 13 ಇ-ಕಾಮರ್ಸ್ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ವಾಕಿ ಟಾಕಿಗಳನ್ನು ಪರವಾನಗಿ ಪಡೆದು ಉಪಯೋಗಿಸಬೇಕು.































