ದಾವಣಗೆರೆ : ತಾವು ಓದಿದ ಶಾಲೆಯಂಗಳದಲ್ಲಿ ಸಹ ಪಾಠಿಗಳ ಜೊತೆಗೂಡಿ ಶಾಲಾ ದಿನಗಳ ನೆನಪಿನ ಸ್ನೇಹ ಸಂಭ್ರಮ, ವಿದ್ಯೆ ಕಲಿಸಿದ ಗುರುಗಳಿಗೆ ಗುರುವಂದನೆ ಮೂಲಕ ಗೌರವ ನಮನ.
ಈ ಎಲ್ಲವೂ ಹಳೇ ಕುಂದುವಾಡ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ 2004- 2005ನೇ ಸಾಲಿನ ಎಸ್ಎಸ್ಎಲ್ ಸಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮದ ಅದ್ದೂರಿ ಕ್ಷಣಗಳು.
ಹಳೇ ಕುಂದುವಾಡ ಗ್ರಾಮದಲ್ಲಿರುವ ಸರ್ಕಾರಿ ಪ್ರೌಡ ಶಾಲೆಯಲ್ಲಿ ಗುರುವಂದನಾ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಗೆ ಆಗಮಿಸಿದ ಶಿಕ್ಷಕರಿಗೆ ವಿದ್ಯಾರ್ಥಿಗಳು ಹೂವಿನ ಮಳೆ ಸುರಿಸುತ್ತ ವೇದಿಕೆಗೆ ಕರೆತಂದರು. ನಿವೃತ್ತ ಶಿಕ್ಷಕರು ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಕನ್ನಡ ಪ್ರಾಧ್ಯಾಪಕ ಆರ್ ಹೆಚ್ ರಂಗನಾಥ ಕೊಟಗಿಮನಿ, ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿ, ಈ ವೃತ್ತಿಯಲ್ಲಿ ನನಗೆ ಅನೇಕ ಅನುಭವಗಳ ಜೊತೆಗೆ ಜೀವನಕ್ಕೆ ಸಂತಸ ನೀಡಿದ್ದು,ನಾವು ಸಂಪಾದನೆ ಮಾಡಿದ ಆಸ್ತಿ, ಹಣ ನಮ್ಮೊಂದಿಗೆ ಇರೋದಿಲ್ಲ. ಆದರೆ ವಿದ್ಯಾರ್ಥಿಗಳು ಕಲಿತ ವಿದ್ಯೆ ನಮ್ಮ ಜೀವನದ ಕೊನೆಯವರೆಗೂ ಉಳಿಯುತ್ತದೆ ಹೇಳಿದರು.
ಶಾಲೆಗಳಲ್ಲಿ ಪಾಠ, ಪ್ರವಚನಗಳನ್ನು ಕೇಳುವ, ಆಲಿಸುವ ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೊತ್ಸಾಹ ನೀಡಿ ಪ್ರೀತಿಸಿ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸುವ ಶಿಕ್ಷಕ ಯಾವಾಗಲು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಇರುತ್ತಾನೆ ಎಂದರು.
ಶಿಕ್ಷಕರು ಮಾಡಿದ ಪಾಠವನ್ನು ಸರಿಯಾಗಿ ಯಾರು ಕರಗತ ಮಾಡಿಕೊಳ್ಳುವ ವಿದ್ಯಾರ್ಥಿ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದರು.
ನಾವು ಸಂಪಾದನೆ ಮಾಡಿದ ಆಸ್ತಿ, ಹಣ ನಮ್ಮೊಂದಿಗೆ ಇರೋದಿಲ್ಲ. ಆದರೆ ಕಲಿತ ವಿದ್ಯೆ ನಮ್ಮ ಜೀವನದ ಕೊನೆಯವರೆಗೂ ಉಳಿಯುತ್ತದೆ. ಇಂತಹ ವಿದ್ಯೆ ಕಲಿಸಿದ ಗುರುಗಳಿಗೆ ವಿದ್ಯಾರ್ಥಿಗಳು ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸರ್ಕಾರಿ ಶಾಲೆಯು ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೂ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಗುರುಗಳಿಗೆ ಗೌರವ ಸಮರ್ಪಣೆಯನ್ನು ಹಳೆಯ ವಿದ್ಯಾರ್ಥಿಗಳು ಮಾಡಿದರು.
ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ನಿವೃತ್ತ ಶಿಕ್ಷಕರು ತಮ್ಮ ಕರ್ತವ್ಯ ಅವಧಿಯ ದಿನಗಳನ್ನು ನೆನೆದು ಸಂತಸಪಟ್ಟರು.
ಹಳೆಯ ವಿದ್ಯಾರ್ಥಿಗಳು 20 ವರ್ಷಗಳ ತಮ್ಮ ಬಾಲ್ಯದ ಶೈಕ್ಷಣಿಕ ಸಂದರ್ಭವನ್ನು ನೆನಪಿಸಿಕೊಂಡರು.
ಈ ವೇಳೆ ಕಾರ್ಯಕ್ರಮದಲ್ಲಿ ಸುನಂದಮ್ಮ, ಏಕಾಂತಪ್ಪ ಜಿ.ಟಿ. , ಉಮಾದೇವಿ, ಸುವರ್ಣಮ್ಮ, ಮಂಜುಳಾ,ಬೇಬಿ ಸುನಿತಾ, ತಮ್ಮ ಅನಿಸಿಕೆಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಗುಡಾಳ್, ಎಸ್ ಡಿ ಸುಜಾತ, ಚೇತನ್ ,ಅನ್ಸರ್ ಅಹಮದ್,ನಾಗಮಣಿ, ಸುನೀತಾ,ರಹಮತ್ ಉನ್ನಿಸ್, ಮಂಜುನಾಥಯ್ಯ ಸೇರಿದಂತೆ ಮುಂತಾದವರು ಇದ್ದರು.
































