ನೀವುಗಳು ಯಾವ ಪಕ್ಷದಲ್ಲಿಯಾದರೂ ಇರಿ ಸಮಾಜಕ್ಕೆ ಧಕ್ಕೆ ಬಂದಾಗ ಮಾತ್ರ ಒಂದಾಗಿ: ಸಚಿವ ಕೆ.ಎಚ್.ಮುನಿಯಪ್ಪ

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ಚುನಾವಣೆ ಸಮಯದಲ್ಲಿ ನೀವುಗಳು ಯಾವ ಪಕ್ಷದಲ್ಲಿಯಾದರೂ ಇರಿ ಆದರೆ ಸಮಾಜಕ್ಕೆ ಧಕ್ಕೆ ಬಂದಾಗ ಮಾತ್ರ ಎಲ್ಲರಿ ಒಗ್ಗಟಾಗಿ ಇರಬೇಕಿದೆ, ನಮ್ಮ ಸಮಾಜಕ್ಕೆ ಮಠದ ಮಾರ್ಗದರ್ಶನ ಅಗತ್ಯವಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದ ಹೊರವಲಯದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಆವರಣದಲ್ಲಿ 20 ಗುಂಟೆ ಜಾಗದಲ್ಲಿ ಸುಮಾರು 4 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುವ ಆದಿಶಕ್ತಿ ಶ್ರೀ ಮಾತಂಗೇಶ್ವರಿ ದೇಗುಲ ನಿರ್ಮಾಣಕ್ಕೆ ಭೂಮಿಪೂಜೆ ನೇರವೇರಿಸಿ ಮಾತನಾಡಿದ ಸಚಿವರು, ಎಲ್ಲರು ಸೇರಿ ದೇವಾಲಯವನ್ನು ನಿರ್ಮಾಣ ಮಾಡ ಬೇಕಿದೆ ಇದರ ನಿರ್ಮಾಣಕ್ಕೆ ಶ್ರೀಗಳು ಯಾರಿಂದಲೂ ಹಣವನ್ನು ಕೇಳಬಾರದು ಇದರ ಪೂರ್ಣ ಪ್ರಮಾಣದ ವೆಚ್ಚವನ್ನು ಭಕ್ತರೇ ನಿರ್ವಹಣೆ ಮಾಡಬೇಕಿದೆ ಈ ಹಿನ್ನಲೆಯಲ್ಲಿ ಭಕ್ತರು ಸ್ವಯಂ ಪ್ರೇರಿತರಾಗಿ ದೇವಾಲಯ ನಿರ್ಮಾಣಕ್ಕೆ ತನು,ಮನಧನವನ್ನು ನೀಡುವುದರ ಮೂಲಕ ಮುಂದಿನ 11 ತಿಂಗಳೊಳಗಾಗಿ ದೇವಾಲ ಯವನ್ನು ನಿರ್ಮಾಣ ಮಾಡಿ ಮಾಘ ಮಾಸದಲ್ಲಿ ಇದರ ಉದ್ಘಾಟನೆ ಮಾಡಬೇಕಿದೆ ಎಂದರು.

ಬೆಂಗಳೂರಿನಲ್ಲಿ ಮದಾರ ಮಹಾ ಸಭಾ ಕಚೇರಿಯನ್ನು ತಯಾರು ಮಾಡಲಾಗಿದ್ದು ಇದಕ್ಕಾಗಿ ಕಚೇರಿಯನ್ನು ಸಹಾ ನೋಡಲಾಗಿದೆ ಮುಂದಿನ ದಿನದಲ್ಲಿ ಶ್ರೀಗಳಿಂದ ಉದ್ಘಾಟನೆಯನ್ನು ಮಾಡಿಸಲಾಗುವುದು, ಸಮಾಜದ ಉನ್ನತಿಗಾಗಿ ಎಲ್ಲರು ಸಹಾ ಪಕ್ಷಾತೀತವಾಗಿ ಒಟ್ಟಾಗಿ ಕೆಲಸವನ್ನು ಮಾಡಬೇಕಿದೆ. ಸಮಾಜದಲ್ಲಿ ವಿದ್ಯಾವಂತ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಿದೆ ಇದಕ್ಕೆ ನಮ್ಮ ಮಕ್ಕಳಿಗೆ ತಪ್ಪದೆ ಶಿಕ್ಷಣವನ್ನು ಕೊಡಿಸಬೇಕಿದೆ. ಚುನಾವಣೆ ಸಮಯದಲ್ಲಿ ಮಾತ್ರ ನಾವುಗಳು ಬೇರೆವ ಬೇರೆ ಆದರೆ ಚುನಾವಣೆ ಮುಗಿದ ಮೇಲೆ ನಾವೆಲ್ಲರು ಒಂದೇ ಏನಾದರೂ ಸಮಾಜಕ್ಕೆ ತೊಂದರೆ ಬಂದಾಗ ಎಲ್ಲರು ಒಗ್ಗಟಾಗಿ ನಿಲ್ಲಬೇಕಿದೆ ನಮ್ಮ ಬಲವನ್ನು ಪ್ರದರ್ಶನ ಮಾಡಬೇಕಿದೆ ನಮ್ಮ ಸಮಾಜದ ಪ್ರಗತಿಗೆ ಮಠದ ಮಾರ್ಗದರ್ಶನ ಅಗತ್ಯ ಇದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮೈಸೂರು ಮತ್ತು ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಒಡೆಯರ್ ದೇವರ ಆರಾಧನೆ ನೆಪದಲ್ಲಿ ಹಲವಾರು ಜನರಿಗೆ ರಕ್ಷಣೆಯನ್ನು ನೀಡಲಾಗುತ್ತಿದೆ, ಇದರಲ್ಲಿ ಕಲೆ ಸಂಸ್ಕøತಿ, ಸಾಹಿತ್ಯ, ಸಮಸ್ಯೆಗಳನ್ನು ನಿವಾರಣೆ ಮಾಡಲಾಗುತ್ತದೆ. ಈ ಹಿನ್ನಲೆಯಲ್ಲಿ ದೇವಾಲಯಗಳ ಪುನರುಜ್ಜಿವನ ಆಗಬೇಕಿದೆ. ಮಠದ ಆಶ್ರಯದಲ್ಲಿ ದೇವಾಲಯ ನಿರ್ಮಾಣ ಮಾಡುತ್ತಿರುವುದು ಉತ್ತಮವಾದ ಕಾರ್ಯವಾಗಿದೆ. ಚಿತ್ರದುರ್ಗ ಜಿಲ್ಲೆಗೂ ಆರಮನೆಗೂ ಅವಿನಭಾವ ಸಂಬಂಧ ಇದೆ ಈ ಜಿಲ್ಲೆಯಲ್ಲಿ ನಮ್ಮ ಹಿರಿಯರು ಜನತೆಯ ಕಲ್ಯಾಣಕ್ಕಾಗಿ ಎರಡು ಕಡೆಗಳಲ್ಲಿ ಜಲಾಶಯಗಳನ್ನು ನಿರ್ಮಾಣ ಮಾಡಿದ್ದಾರೆ. ನಾನು ಸಹಾ ಇವುಗಳನ್ನು ಭೇಟಿ ಮಾಡಿದ್ದೇನೆ ಎಂದರು.

ಹಿಂದುಳಿದ ಜನಾಂಗಕ್ಕೆ ಅನ್ಯಾಯವಾದಾಗ ಅಲ್ಲಿ ಮಹಾರಾಜರು ನ್ಯಾಯವನ್ನು ಒದಗಿಸುವ ಕಾರ್ಯವನ್ನು ಮಾಡಿದ್ದಾರೆ. ಶೋಷಿತರಿಗೆ ಮೀಸಲಾತಿಯನ್ನು ನೀಡುವುದರ ಮೂಲಕ ಅವರು ಮುಖ್ಯವಾಹಿನಿಗೆ ಬರಲು ನೆರವಾದರು. ಇದ್ದಲ್ಲದೆ ಮಹರಾಜರು ಸಂವಿಧಾನ ರೂಪು ರೇಷೆಗಳನ್ನು ತಪ್ಪದೆ ಜಾರಿ ಮಾಡಿದ್ದರು. ಹ್ಕಕುಗಳನ್ನು ನೀಡಿದ್ದರು. ಸೌಲಭ್ಯಗಳನ್ನು ಸಹಾ ನೀಡಿದ್ದರು. ಸಂವಿಧಾನದ ಆಚರಣೆಯ ಮೂಲಕ ಭಾರತ ಮಾತೆಯ ಆರಾಧನೆಯನ್ನು ಮಾಡಬೇಕಿದೆ. ಕಾಲಕ್ಕೆ ತಕ್ಕಂತೆ ಎಲ್ಲಾ ಬದಲಾವಣೆ ಆಗುವಂತೆ ಸಂವಿಧಾನ ದಲ್ಲಿಯೂ ಸಹಾ ತಿದ್ದುಪಡಿಗಳನ್ನು ಮಾಡುವುದರ ಮೂಲಕ ಈಗಿನ ಕಾಲಕ್ಕೆ ತಕ್ಕಂತೆ ಕಾನೂನುಗಳನ್ನು ಜಾರಿ ಮಾಡಬೇಕಿದೆ ಎಂದು ತಿಳಿಸಿದರು.

ಕೇಂದ್ರದ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ ಮಾತನಾಡಿ, ಇಂದಿನ ದಿನಮಾನದಲ್ಲಿ ದೇವರನ್ನು ಹೆಚ್ಚಾಗಿ ಪೂಜೆ ಮಾಡುವವರು ಎಂದರೆ ಮೇಲ್ವರ್ಗದವರಲ್ಲ ಶೋಷಿತರು ದೇವರನ್ನು ಹೆಚ್ಚಾಗಿ ಪೂಜೆ ಮಾಡುವುದರ ಮೂಲಕ ನಮ್ಮ ಇಷ್ಠಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸುತ್ತಿದ್ದಾರೆ. ಮಾದಿಗರಿ ಮಾತಂಗಿ ಕುಲ ದೇವತೆಯಾದರೂ ಸಹಾ ಎಲ್ಲಿಯೂ ಸಹಾ ದೇವಾಲಯ ಇಲ್ಲವಾಗಿದೆ. ಇಂದು ಹಲವಾರು ಜನ ತೋರಿಕೆಗೆ ಸಂವಿಧಾನ ಪುಸ್ತಕವನ್ನು ಪ್ರದರ್ಶನ ಮಾಡುತ್ತಿದ್ದಾರೆ ಆದರೆ ಅದರಲ್ಲಿ ಏನು ಇದೆ ಎಂದು ಸಹಾ ಅವರಿಗೆ ಗೊತ್ತಿಲ್ಲ ಆದರೂ ಸಹಾ ಸಂವಿಧಾನದ ಬಗ್ಗೆ ದೊಡ್ಡದಾದ ಮಾತುಗಳನ್ನು ಆಡುತ್ತಾ ನಮ್ಮಂತಹ ಶೋಷಿತರನ್ನು ಮೋಸು ಮಾಡುತ್ತಿದ್ದಾರೆ. ದೇವಾಲಯದ ನಿರ್ಮಾಣ ಜೊತೆಗೆ ನಮ್ಮವರು ಜ್ಞಾನರ್ಜನೆಯನ್ನು ಮಾಡಬೇಕಿದೆ, ಆಗ ಮಾತ್ರ ನಮ್ಮ ಸಮಾಜ ಪ್ರಗತಿ ಹೊಂದಲು ಸಾಧ್ಯವಿದೆ ಎಂದರು.

ಕ್ಯಾಲೆಂಡರ್ ಬಿಡುಗಡೆ ಮಾಡಿದ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ ರಾಜ್ಯದಲ್ಲಿ ಸಂಚಾರವನ್ನು ಮಾಡುವುದರ ಮೂಲಕ ಸಮಾಜವನ್ನು ಸಂಘಟಿಸಿದ್ದಾರೆ. ಹಿಂದಿನ ಕಾಲಕ್ಕೆ ಈಗಿನ ಕಾಲಕ್ಕೂ ಬಹಳ ವ್ಯತ್ಯಾಸ ಇದೆ. ಶಿಕ್ಷಣವನ್ನು ಪಡೆಯುವುದರ ಮೂಲಕ ರಾಜಕೀಯ, ಸರ್ಕಾರಿ ಸೌಲಭ್ಯ ಹಾಗೂ ಉದ್ಯೋಗವನ್ನು ಪಡೆಯುವಲ್ಲಿ ಮುಂದಾಗಿದ್ದಾರೆ. ಸಾಧರು, ಮಾದರು ಅಣ್ಣ-ತಮ್ಮಂದಿರು ಇದ್ದಂತೆ ಇಬ್ಬರುಲ್ಲೂ ಸಹಾ ಇಂತಹ ಒಡನಾಟ, ಬಾಂಧ್ಯವ್ಯವನ್ನು ಹೊಂದಿದ್ದಾರೆ. ಮಾದರು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಕೊಟ್ಟ ಮಾತನ್ನು ಉಳಿಸಿಕೊಡುತ್ತಾರೆ ಎಂಬ ನಂಬಿಕೆ ಇದೆ. ಎಂದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಶ್ರೀಗಳು ರಾಜ್ಯದಲ್ಲಿ ಸಮಾಜವನ್ನು ಸಂಘಟನೆ ಮಾಡಲು ವಿಶ್ರಾಂತಿ ಇಲ್ಲದೆ ತಿರುಗುತ್ತಾರೆ. ಸಮಾಜದ ಪ್ರಗತಿಗೆ ಎಲ್ಲರು ಸಹಾ ಒಗ್ಗಟಾಗಿ ಇರಬೇಕಿದೆ, ಚುನಾವಣೆಯ ಸಮಯದಲ್ಲಿ ಮಾತ್ರ ಪಕ್ಷ ನಂತರ ನಾವೆಲ್ಲಾ ಒಂದೇ ಇದೇ ರೀತಿ ಸಮಾಜಕ್ಕೆ ಕಷ್ಟ ಬಂದಾಗ ಎಲ್ಲರು ಒಗ್ಗಟಾಗಿ ನಿಲ್ಲುವುದರ ಮೂಲಕ ಸಮಾಜವನ್ನು ಕಾಪಾಡಬೇಕಿದೆ ಎಂದರು.

ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ ಮಾತನಾಡಿ, ಸಮಾನತೆಗೆ, ಶೋಷಿತರಿಗೆ ಮಹಿಳೆಯರಿಗೆ ಸಮಾನತೆಯನ್ನು ನೀಡಿದವರು ಮೈಸೂರು ಮಹಾರಾಜರು, ಈ ಸಮಯದಲ್ಲಿ ನನಗೆ ಅಕ್ಷರವನ್ನು ಕಲಿಸಿದವರು ಗುರುವಂದನೆಯನ್ನು ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ನಮ್ಮ ಸಮುದಾಯಕ್ಕೆ ಎಲ್ಲಾ ಸಮುದಾಯದ ಗುರುಗಳು ಸಹಾ ಉತ್ತಮವಾದ ಸಹಕಾರವನ್ನು ನೀಡುವುದರ ಮೂಲಕ ನಮ್ಮ ಸಮುದಾಯ ಬೆಳವಣಿಗೆಯಲ್ಲಿ ಸಹಕಾರವನ್ನು ನೀಡಿದ್ದಾರೆ. ಚುನಾವಣೆಯಲ್ಲಿ ಮಾತ್ರ ನಿಮ್ಮ ಪಕ್ಷಗಳನ್ನು ಅನುಸರಿಸಿ ತದ ನಂತರ ಸಮಾಜ ಎಂದು ಬಂದಾಗ ಎಲ್ಲರು ಸೇರಿ ಒಟ್ಟಾಗಿ ಇರಬೇಕಿದೆ. ರಾಜಕೀಯವಾಗಿ ನಮ್ಮ ಸಮುದಾಯ ಬೆಳೆಯಬೇಕಿದೆ, ಮಠಗಳು ಸಮುದಾಯದ ರಾಜಕಾರಣಿಗಳನ್ನು ತಯಾರು ಮಾಡುವ ಕಾರ್ಖಾನೆಗಳಾಗಿವೆ. ಈ ಹಿಂದೆ ನಮ್ಮ ಮಠಕ್ಕೆ ಕರೆದಾಗ ತಿರಸ್ಕಾರ ದಿಂದ ಇದ್ದವರು ಈಗ ಅಭೀಮಾನದಿಂದ ಬರುತ್ತಿದ್ದಾರೆ, ಈ ಮಟ್ಟಕ್ಕೆ ನಮ್ಮ ಮಠ ಬೆಳೆಯುತ್ತಿದೆ. ಈಗ ನಿರ್ಮಾಣಕ್ಕೆ ಮುಂದಾಗಿರುವ ಮಾತಂಗಿ ದೇವಾಲಯವನ್ನು ಶೀಘ್ರದಲ್ಲಿಯೇ ಮುನಿಯಪ್ಪರವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಗುವುದು ಅಯೋಧ್ಯೆ ಶ್ರೀರಾಮ ವಿಗ್ರಹ ಕೆತ್ತನೆ ಮಾಡಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಮಾತಂಗೇಶ್ವರಿ ದೇವಿಯ ವಿಗ್ರಹ ಕೆತ್ತನೆ ಮಾಡಲಿದ್ದಾರೆ ಎಂದರು.

ಕನಕ ಪೀಠದ ಪೀಠಾಧ್ಯಕ್ಷರಾದ ನಿರಂಜನಾಂದಪುರಿ ಸ್ವಾಮೀಜಿ ಮಾತನಾಡಿ ದಲಿತರ ಕಾಲೋನಿಯಲ್ಲಿ ಗಲ್ಲೇ ದೇವರ ಗುಡಿಗಳಿಂದ ನೀರನ್ನು ತೆಗೆದುಕೊಂಡು ಬಂದು ಸಾಂಪ್ರದಾಯಿಕ ಧಾರ್ಮಿಕ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತಿತ್ತು, ಇಂದಿಗೂ ಸಹ ನಾವು ಕಾಣುತ್ತಿದ್ದೇವೆ  ಮಾದರ ಚೆನ್ನಯ್ಯ ಶ್ರೀಗಳು ನಿರಂತರವಾಗಿ ಎಲ್ಲಾ ಸಮುದಾಯದ ಸ್ವಾಮೀಜಿಗಳ ಜೊತೆಗೆ ಪ್ರೀತಿ ಸಹ ಬಾಳ್ವೆಯಿಂದ ಇದ್ದಾರೆ. ಜನರಲ್ಲಿ ಜಾತಿಯ ತಾರತಮ್ಯ ಇರಬಹುದು, ಆದರೆ ಸ್ವಾಮೀಜಿಗಳ ಆದವರಲ್ಲಿ ಯಾವುದರ ರೀತಿ ಭೇದಭಾವವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಸಹಬಾಳ್ವೆಯಿಂದ ಇದ್ದೇವೆ ಎಂದು ತಿಳಿಸಿದರು.

ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಹಂಪಿ ಹೇಮಕೂಟದ ಶ್ರೀ ಪೂರ್ಣಾನಂದ ಭಾರತಿ ಸ್ವಾಮೀಜಿ, ಹಿರಿಯೂರು ಆದಿಜಾಂಬವ ಮಠದ ಶ್ರೀ ಷಡಾಕ್ಷರಮುನಿ ಸ್ವಾಮೀಜಿ, ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಶ್ರೀಗಳು, ಸಾನಿಧ್ಯ ವಹಿಸಿದ್ದರು ಇದೇ ವೇಳೆ ಮಾದಾರ ಚನ್ನಯ್ಯ ಗುರುಪೀಠದಿಂದ ಹೊರಬರಲಿರುವ ಹೊಸ ಮಾಸ ಪತ್ರಿಕೆ ಶರಣರ ಚೆನ್ನುಡಿಯನ್ನು ಲೋಕಾರ್ಪಣೆ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಶಾಸಕರಾದ ಟಿ.ರಘುಮೂರ್ತಿ, ದುರ್ಯೋಧನ ಐಹೊಳೆ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾಜಿ ಶಾಸಕರಾದ ಎಂ.ಶಿವಣ್ಣ, ತಿಮ್ಮರಾಯಪ್ಪ, ಆದಿ ಜಾಂಭವ ಅಭೀವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಧ ರಘು ಕೆಳಗೋಟೆ, ಶಿವಶರಣ ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ್ ಹೂಡಿ ಲೋಕಸೇವಾ ಆಯೋಗದ ಸದಸ್ಯರಾದ ಡಾ,ಶಾಂತ ಹೊಸಮನಿ, ಮಾಜಿ ಶಾಸಕರಾಧ ಎಸ್.ಕೆ. ಬಸವರಾಜನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜೆಜೆ.ಹಟ್ಟಿ ತಿಪ್ಪೇಸ್ವಾಮಿ, ಲಿಡ್ಕರ್ ಮಾಜಿ ಅಧ್ಯಕ್ಷ ಈ ಶಂಕರ್ರ, ನಗರಸಭೆಯ ಮಾಜಿ ಅಧ್ಯಕ್ಷ ಗೊಪ್ಪೆ ಮಂಜುನಾಥ್, ಮೋಹನ್, ಅನಿತ್ ಕುಮಾರ್, ನರಸಿಂಹರಾಜು, ಉಮೇಶ್ ಕಾರಜೋಳ, ಕೆ.ಟಿ.ಕುಮಾರಸ್ವಾಮಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ.ಜಗದೀಶ್, ಸೇರಿದಂತೆ ಇತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ಬಸವಮೂರ್ತಿ ಮಾದಾಚನ್ನಯ್ಯ ಶ್ರೀಗಳ ಪೂರ್ವಾಶ್ರಮದ ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕರಾದ, ನಿವೃತ್ತ ಶಿಕ್ಷಕರಾದ ಟಿ.ಬಸವರಾಜಪ್ಪ, ಮಸ್ರತ್ನಾಜ್ ಬೇಗಂ, ಡಿ.ಟಿ.ವೆಂಕಟೇಶ್ರೆಡ್ಡಿ, ಎಚ್.ಎಸ್.ಲಲಿತಮ್ಮ, ಬಸವರಾಜಪ್ಪ, ಎ.ಆರ್.ಶಿವಮೂರ್ತಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಭೂಮಿ ಗೀತಾ ತಂಡದಿಂದ ಪ್ರಾರ್ಥಿಸಿದರೆ ಜಿ.ಪಂ. ಮಾಜಿ ಸದಸ್ಯ ಪ್ರಕಾಶ ಮೂರ್ತಿ ಸ್ವಾಗತರಿಸಿದರು. ಶ್ರೀ ಶಿವಶರಣ ಮಾದರಚನ್ನಯ್ಯ ಸೇವಾ ಸಮಿತಿ ರಾಜ್ಯ ಉಪಾಧ್ಯಕ್ಷ ರವಿ ಮಲ್ಲಾಪುರ ಪ್ರಸ್ತಾವಿಕಮಾಗಿ ಮಾತನಾಡಿದರು.

 

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon