ಮಾಲೀಕನ ಸಾವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಶ್ವಾನವೊಂದು ಮಾಲೀಕನ ಶವವನ್ನು ಸಾಗಿಸುತ್ತಿದ್ದ ವಾಹನವನ್ನು ಸುಮಾರು 4 ಕಿಲೋ ಮೀಟರ್ ದೂರದವರೆಗೆ ಹಿಂಬಾಲಿಸಿದ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ಪ್ರೀತಿಯ ಶ್ವಾನವನ್ನು ಮರೆತು 40 ವರ್ಷದ ವ್ಯಕ್ತಿ ಪ್ರಜಾಪತಿ ಎಂಬುವವರು ತಮ್ಮ ಮನೆಯಲ್ಲಿ ಸಾವಿಗೆ ಶರಣಾಗಿದ್ದರು.
ಈ ದುರಂತದ ವಿಚಾರ ಕುಟುಂಬದವರಿಗೆ ತಿಳಿಯುತ್ತಿದ್ದಂತೆ ಶವವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಆ ಪ್ರಜಾಪತಿ ಅವರು ಸಾಕಿದ್ದ ಪ್ರೀತಿಯ ಶ್ವಾನ ಅವರ ಶವವಿದ್ದ ವಾಹನವನ್ನು ಸುಮಾರು 4 ಕಿಲೋ ಮೀಟರ್ ದೂರದವರೆಗೆ ಹಿಂಬಾಲಿಸಿದೆ. ಶ್ವಾನ ಜೊತೆಗೆ ಹೆಜ್ಜೆ ಹಾಕಲುಹೆಣಗಾಡುತ್ತಿರುವುದನ್ನು ಗ್ರಾಮಸ್ಥರು ನೋಡುತ್ತಿದ್ದರು.
ಕೊನೆಗೆ, ಕುಟುಂಬದ ಸದಸ್ಯರು ಆ ಶ್ವಾನವನ್ನು ಟ್ರಾಲಿಯ ಮೇಲೆ ಕೂರಿಸಿತು. ಶವಗಾರದಲ್ಲಿ ಮರಣೋತ್ತರ ಪರೀಕ್ಷೆಯ ಸಮಯದಲ್ಲೀಯೂ ಶ್ವಾನ ಪ್ರಜಾಪತಿಯನ್ನು ಬಿಟ್ಟು ಕದಲಲಿಲ್ಲ, ಹತ್ತಿರದಲ್ಲೇ ಕಾಯುತ್ತಾ ಕುಳಿತಿತ್ತು. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ನಂತರವೇ ಶ್ವಾನ ಶವದೊಂದಿಗೆ ಹಳ್ಳಿಗೆ ಹಿಂತಿರುಗಿದೆ. ಅಲ್ಲದೇ ಆ ನಂತರ ನಡೆದ ಉಳಿದ ವಿಧಿ ವಿಧಾನಗಳ ಸಮಯದಲ್ಲೂ ಶ್ವಾನವು ಮಾಲೀಕನ ದೇಹದ ಬಳಿಯಿಂದ ದೂರ ಹೋಗದೇ ಆತನ ಬಳಿಯೇ ಮೌನವಾಗಿ ಕುಳಿತಿದ. ರಾತ್ರಿಯೆಲ್ಲಾ ಮಾಲೀಕನ ಮೃತದೇಹದ ಬಳಿಯೇ ಇದ್ದ ಶ್ವಾನ ನಂತರ ನಡೆದ ಶವಯಾತ್ರೆಯ ಸಮಯದಲ್ಲೂ ಜೊತೆಗೆ ಹೆಜ್ಜೆ ಇಟ್ಟಿದೆ. ಅತ್ತ ಶವಸಂಸ್ಕಾರದ ಸ್ಥಳದಲ್ಲಿಯೂ ನಾಯಿ ಚಿತೆಯ ಬಳಿಯೇ ಕುಳಿತಿತ್ತು.
ಅದು ಯಾವುದೇ ಆಹಾರವನ್ನು ಸೇವಿಸಲಿಲ್ಲ, ಕುಡಿಯಲಿಲ್ಲ, ಅದನ್ನು ದೂರ ಸರಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದವರು. ಅಲ್ಲಿದ್ದ ಅನುಭವಿ ಪೊಲೀಸ್ ಸಿಬ್ಬಂದಿ ಕೂಡ ಪ್ರಾಣಿ ಪ್ರಜಾಪತಿ ಜೊತೆ ಹೊಂದಿದ್ದ ಬಾಂಧವ್ಯದ ಆಳವನ್ನು ನೋಡಿ ಆಶ್ಚರ್ಯಚಕಿತರಾದರು. ನಂತರ ಠಾಣೆಯ ಉಸ್ತುವಾರಿಯೊಬ್ಬರು ನಾಯಿಯ ನಿಷ್ಠೆಯನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಜಾಪತಿಯವರು ಹೀಗೆ ಸಾವಿಗೆ ಶರಣಾಗುವಂತಹ ದುರಂತಮಯ ನಿರ್ಧಾರ ಕೈಗೊಳ್ಳುವುದಕ್ಕೆ ಕಾರಣವಾಗಿದ್ದು ಏನು ಎಂಬುದು ತಿಳಿದು ಬಂದಿಲ್ಲ. ಆದರೆ ಆತನ ಸಾವಿನ ನಂತರ ಶ್ವಾನ ಆತನನ್ನು ಬಿಟ್ಟು ಕೊಡದೇ ರೋದಿಸುತ್ತಿದ್ದ ರೀತಿ ಎಂತಹವರ ಕಣ್ಣನ್ನು ತೇವಗೊಳಿಸುವಂತೆ ಮಾಡಿದೆ.

































