ಬೇಲೂರು: ಬೇಲೂರು ತಹಶ್ಲಿಲ್ದಾರ್ ಶ್ರೀಧರ್ ಕಂಕನವಾಡಿ ವಿರುದ್ಧ ಆರೋಪ ಮಾಡಿರುವ ಶಿರಸ್ತೇದಾರ್ ತನ್ವೀರ್ ಅಹ್ಮದ್, ಕಚೇರಿ ಆವರಣದಲ್ಲಿಯೇ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ . ಹಾಸನ ಜಿಲ್ಲೆಯ ಬೆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಡೆದಿದೆ.
ತಹಶಿಲ್ದಾರ್ ಶ್ರೀಧರ್ ಕಂಕನವಾಡಿ, ಬೇಕಂತಲೇ ಕೆಲಸದ ಒತ್ತಡ ಹೇರುತ್ತಿದ್ದಾರೆ. ಮಾನಸಿಕವಾಗಿ ಕಿರುಕುಳ ನೀಡಿ ಹಿಂಸಿಸುತ್ತಿದ್ದಾರೆ ಎಂದು ತನ್ವೀರ್ ಅಹ್ಮದ್ ಆರೋಪಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿರುವ ಶಿರಸ್ತೇದಾರ್ ನನ್ನು ಬೆಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿರಸ್ತೇದಾರ್ ಆರೋಪ ತಳ್ಳಿಹಾಕಿರುವ ತಹಶಿಲ್ದಾರ್ ಶ್ರೀಧರ್, ತನ್ವೀರ್ ತನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕೆಲಸದ ಬಗ್ಗೆ ಯಾವುದೇ ಒತ್ತಾಡಹಾಕಿಲ್ಲ ಎಂದಿದ್ದಾರೆ. ಅಲ್ಲದೇ ಶಿರಸ್ತೇದಾರ್ ತನ್ವೀರ್ ವಿರುದ್ಧವೇ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
































