ಚಿತ್ರದುರ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಭರಮಸಾಗರ ಶಿಶು ಅಭಿವೃದ್ಧಿ ಯೋಜನೆಯ ಭೀಮಸಮದ್ರ ವೃತ್ತದ ಬೆಟ್ಟದನಾಗೇನಹಳ್ಳಿ-ಬಿ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ‘ಸರ್ಕಾರಿ ಮಾಂಟೇಸ್ಸರಿ-ಎಲ್ ಕೆ ಜಿ ಮತ್ತು ಯು ಕೆ ಜಿ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಈ ವಿಶೇಷ ಸಂದರ್ಭದಲ್ಲಿ ಕೆನಡಾದಲ್ಲಿ ವಿಜ್ಞಾನಿಯಾಗಿರುವ, ದಾನಿಗಳಾದ ಡಾ. ಪಿ. ಮಂಜುನಾಥ್ ಅವರ ಸಹೋದರ ಪಿ. ಜಗದೀಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಗ್ರಾಮದ ಎ ಮತ್ತು ಬಿ ಎರಡು ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಾದ ಅಲ್ಮೇರ, ರ್ಯಾಕ್ ಹಾಗೂ ಟೇಬಲ್ಗಳನ್ನು ಕೊಡುಗೆಯಾಗಿ ನೀಡಿದರು. ಅಷ್ಟೇ ಅಲ್ಲದೆ, ಕೇಂದ್ರದ ಮಕ್ಕಳಿಗೆ ಮಿನಿ ಚೇರ್, ಟೇಬಲ್ಗಳು,, ಸಮವಸ್ತ್ರ, ಶೂ-ಸಾಕ್ಸ್, ನೋಟ್ಬುಕ್ ಹಾಗೂ ಸ್ಕೂಲ್ ಬ್ಯಾಗ್ಗಳನ್ನೊಳಗೊಂಡ ಕಲಿಕಾ ಸಾಮಾಗ್ರಿ ವಿತರಿಸಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಿರ್ಮಲಾ ಚಕ್ಕಣ್ಣನವರ್ ಮಾತನಾಡಿ, ಸರ್ಕಾರಿ ಮಾಂಟೇಸ್ಸರಿ ಸೌಲಭ್ಯವನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿಯರಾದ ಜಾಹೆದಾ ಬೇಗಂ, ಬಿ. ಜೈತುನ್, ಪುಷ್ಪ, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ಶಾಲಾ ಮುಖ್ಯ ಶಿಕ್ಷಕರಾದ ನಾಗರಾಜಪ್ಪ, ತಿಮ್ಮಣ್ಣ, ಭೀಮಸಮದ್ತ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಊರಿನ ಗ್ರಾಮಸ್ಥರು, ಮಕ್ಕಳ ಫೋಷಕರು ಇದ್ದರು.

































