ಚಿತ್ರದುರ್ಗ: ಹಿರಿಯೂರು ತಾಲೂಕಿನ ಬಬ್ಬೂರು ಫಾರಂನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಒಂದು ತಿಂಗಳ ಅವಧಿಯ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಲಾಗಿದೆ.
ತರಬೇತಿಯಲ್ಲಿ ಮುಖ್ಯವಾಗಿ ಬೆಣ್ಣೆ ಬಿಸ್ಕತ್, ರಾಗಿ ಬಿಸ್ಕತ್, ಕೊಬ್ಬರಿ ಬಿಸ್ಕತ್, ಮಸಾಲ ಬಿಸ್ಕತ್, ಸಿರಿಧಾನ್ಯಗಳ ಬಿಸ್ಕತ್ ಸೇರಿದಂತೆ ವಿವಿಧ ಬಗೆಯ ಕುಕೀಸ್‍ಗಳ ತಯಾರಿಕೆಯನ್ನು ಕಲಿಸಲಾಗುತ್ತದೆ. ಇದರೊಂದಿಗೆ ಫ್ರೂಟ್ ಕೇಕ್, ಪ್ಲೇನ್ ಕೇಕ್, ಹನಿ ಕೇಕ್ ಹಾಗೂ ಬ್ರೆಡ್, ಬನ್, ಖಾರ ಬನ್ ಮತ್ತು ದಿಲ್ ಪಸಂದ್ ತಯಾರಿಕೆಯ ಬಗ್ಗೆಯೂ ತಜ್ಞರಿಂದ ಪ್ರಾಯೋಗಿಕ ತರಬೇತಿ ನೀಡಲಾಗುವುದು.
ಮುಂದಿನ ಫೆ.19 ತಾರೀಖಿನಿಂದ ಮಾರ್ಚ್ 19 ತಾರೀಖಿನ ವರೆಗೆ ತರಬೇತಿ ನಡೆಯಲಿದೆ.ತರಬೇತಿಗೆ ಸೇರಬಯಸುವ ಆಸಕ್ತರು ರೂ.3,000 ತರಬೇತಿ ಶುಲ್ಕವನ್ನು ಪಾವತಿಸಿ, ಫೆ.16ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮೊದಲು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಗೃಹ ವಿಜ್ಞಾನಿ ಡಾ. ಸರಸ್ವತಿ ಜೆ.ಎಂ. ಅವರನ್ನು ಖುದ್ದಾಗಿ ಭೇಟಿ ಮಾಡಬಹುದು ಅಥವಾ ಮೊಬೈಲ್ ಸಂಖ್ಯೆ: 9986647124ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

































