ನವದೆಹಲಿ: ದೇಶದ ಸಂವಿಧಾನವನ್ನು ಅಂಗೀಕರಿಸಿದ ಗಣರಾಜ್ಯೋತ್ಸವ ದಿನದ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ.
77ನೇ ಗಣರಾಜ್ಯೋತ್ಸವವನ್ನು ಶತಕೋಟಿ ಭಾರತಿಯರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಎಲ್ಲಾ ಶಾಲೆಗಳು, ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಗೌರವ ಸಮರ್ಪಿಸಲು ಅಣಿಯಾಗಿದ್ದಾರೆ. ನವದೆಹಲಿಯ ಕರ್ತವ್ಯಪಥ ಕೂಡ ಸಿದ್ಧವಾಗಿದೆ.
77ನೇ ಗಣರಾಜ್ಯೋತ್ಸವ: ಎಷ್ಟೊತ್ತಿಗೆ ಏನೇನು ಕಾರ್ಯಕ್ರಮ?
ಬೆಳಗ್ಗೆ 10:03 – ವಾರ್ ಮೆಮೋರಿಯಲ್‌ನತ್ತ ಪ್ರಧಾನಿ ಮೋದಿ ಪ್ರಯಾಣ
ಬೆಳಗ್ಗೆ 10:05- ನ್ಯಾಷನಲ್ ವಾರ್ ಮೆಮೋರಿಯಲ್‌ನಲ್ಲಿ ಪ್ರಧಾನಿ ನಮನ
ಬೆಳಗ್ಗೆ 10:22 – ಕರ್ತವ್ಯ ಪಥದಲ್ಲಿರುವ ಮುಖ್ಯವೇದಿಕೆಗೆ ಮೋದಿ ಆಗಮನ
ಬೆಳಗ್ಗೆ 10:25 – ವೇದಿಕೆಯತ್ತ ಉಪರಾಷ್ಟ್ರಪತಿ ರಾಧಾಕೃಷ್ಣನ್ ಆಗಮನ
ಬೆಳಗ್ಗೆ 10:25 – ಸ್ವಾಗತ ಸಂಗೀತದ ಮೂಲಕ ಗಣ್ಯರ ಬರಮಾಡಿಕೊಳ್ಳುವಿಕೆ
ಬೆಳಗ್ಗೆ 10:27 – ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯೊಂದಿಗೆ ರಾಷ್ಟ್ರಪತಿಗಳ ಆಗಮನ
ಬೆಳಗ್ಗೆ 10:30 – ರಾಷ್ಟ್ರಧ್ವಜಾರೋಹಣ, ರಾಷ್ಟ್ರಗೀತೆ & 21 ಕುಶಾಲತೋಪುಗಳ ಗೌರವ
ಬೆಳಗ್ಗೆ 10:31 – ಕರ್ತವ್ಯಪಥದಲ್ಲಿ ಭವ್ಯ ಗಣರಾಜ್ಯೋತ್ಸವ ಪರೇಡ್ ಅಧಿಕೃತ ಆರಂಭ
ಮಧ್ಯಾಹ್ನ 12:08 – ಗಣರಾಜ್ಯೋತ್ಸವ ಪರೇಡ್ ಪರೇಡ್ ಮುಕ್ತಾಯ

































