ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹಳೇಯಳನಾಡು ಗ್ರಾಮದ ರಾಜಮ್ಮ ಹಾಗೂ ರಂಗಸ್ವಾಮಿ ದಂಪತಿ ಮಗನಾದ ರಂಗನಾಥ.ಆರ್ ಅವರು ಕನ್ನಡ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪಿಹೆಚ್ಡಿ ಪದವಿ ಭಾಜನವಾಗಿದೆ.
ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಜಯರಾಮಯ್ಯ.ವಿ ಅವರ ಮಾರ್ಗದರ್ಶನದಲ್ಲಿ ‘ಚಿತ್ರದುರ್ಗದ ಪಾಳೆಯಗಾರರ ಶಾಸನಗಳು: ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿದ್ದರು. ಇವರಿಗೆ ವಿಶ್ವವಿದ್ಯಾಲಯ ಘಟಿಕೋತ್ಸವದ ಸಂದರ್ಭದಲ್ಲಿ ಪಿಹೆಚ್ಡಿ ಪದವಿ ಪ್ರಧಾನ ಮಾಡಲಾಗುವುದು.
































