ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ 13 ನೇ ಘಟಿಕೋತ್ಸವ ಕಾರ್ಯಕ್ರಮವು ಜನವರಿ 30 ರಂದು ಜ್ಞಾನಸೌಧ ಪ್ರಾಂಗಣದಲ್ಲಿ ನಡೆಯಲಿದ್ದು ಗೌರವನ್ವಿತ ರಾಜ್ಯಪಾಲರಾದ ಶ್ರೀ ಥಾವರ್‍ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸುವರು ಎಂದು ವಿ.ವಿ. ಕುಲಪತಿ ಪ್ರೊ. ಬಿ.ಡಿ ಕುಂಬಾರ ಅವರು ತಿಳಿಸಿದರು.
ಅವರು ಗುರುವಾರ ದಾವಣಗೆರೆ ವಿಶ್ವವಿದ್ಯಾನಿಲಯದ ಎಂಬಿಎ ಸಭಾಂಗಣದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ 13 ನೇ ಘಟಿಕೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ದತೆ ಕುರಿತು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವರು ಹಾಗೂ ದಾವಣಗೆರೆ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿಗಳಾದ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು. ಡಿಆರ್‍ಡಿಒ ಮಾಜಿ ಮಹಾನಿರ್ದೇಶಕರು, ಕೇಂದ್ರ ರಕ್ಷಣಾ ಸಚಿವಾಲಯದ ಕಾರ್ಯದರ್ಶಿಗಳು ಹಾಗೂ ಸಲಹೆಗಾರರೂ ಆಗಿದ್ದ ಪದ್ಮವಿಭೂಷಣ ಡಾ.ವಾಸುದೇವ ಕೆ. ಅತ್ರೆ ಅವರು ಘಟಿಕೋತ್ಸವ ಭಾಷಣ ಮಾಡುವರು.
ಗೌರವ ಡಾಕ್ಟರೇಟ್ ಪ್ರದಾನ : ಈ ಬಾರಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಪ್ರೋ ಸಿ.ಹೆಚ್.ಮುರುಗೇಂದ್ರಪ್ಪ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಎಂ, ರಾಮಪ್ಪ ರವರಿಗೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತಂದು ಸೇವೆಯಿಂದ ನಿವೃತ್ತಿ ಹೊಂದಿರುವ ಎಲ್. ರೇವಣಸಿದ್ದಯ್ಯ ಇವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುವುದು, ಗೌರವ ಡಾಕ್ಟರೇಟ್‍ಗೆ 9 ಅರ್ಜಿಗಳು ಸ್ವೀಕೃತವಾಗಿದ್ದವು ಎಂದರು.
2024-25 ನೇ ಸಾಲಿನ ಪರೀಕ್ಷೆಗಳಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ (ಎಂ.ಕಾಂ) ವಿಭಾಗದ ಪ್ರಥಮ ರ್ಯಾಂಕ್ ವಿದ್ಯಾರ್ಥಿನಿಯಾದ ನಯನ ಎನ್.ಬಿ. ಇವರು 7 ಸ್ವರ್ಣ ಪದಕಗಳನ್ನು ಪಡೆದಿರುತ್ತಾರೆ. ಎಂಬಿಎ ವಿದ್ಯಾರ್ಥಿ ಆರ್.ದೀಪ 4 ಸ್ವರ್ಣಪದಕ, ಗಣಿತಶಾಸ್ತ್ರದಲ್ಲಿ ಕವನ, ರುಚಿತ ಬೈಯೋಕೆಮಿಸ್ಟ್ರಿ , ಪುಟ್ಟರಾಜ್ ಎಂ.ಆರ್. ಭೌತಶಾಸ್ತ್ರ , ಜೆ. ಪುಷ್ಪ ಪ್ರಾಣಿಶಾಸ್ತ್ರ ವಿಭಾಗ, ವಿಜಯಲಕ್ಷ್ಮಿ ಎಂ ಆಂಗ್ಲಭಾಷೆ, ಅನುಷಾ ಕನ್ನಡ ವಿಭಾಗದಲ್ಲಿ ತಲಾ 3 ಸ್ವರ್ಣ ಪದಕಗಳನ್ನು ಪಡೆದಿರುತ್ತಾರೆ. ಪತ್ರಿಕೋದ್ಯಮದಲ್ಲಿ ಚಂದನ್ ವಿ.ಎಂ 2 ಸ್ವರ್ಣ ಪದಕಗಳನ್ನು ಪಡೆದಿರುತ್ತಾರೆ ಎಂದರು.
2024-25 ನೇ ಸಾಲಿನಲ್ಲಿ ಒಟ್ಟು 87 ಸ್ವರ್ಣ ಪದಕಗಳನ್ನು ವಿದ್ಯಾರ್ಥಿಗಳು ಪಡೆದಿದ್ದು, ಸ್ನಾತಕ ಪದವಿಯಲ್ಲಿ 11 ಮಹಿಳಾ ಹಾಗೂ 2 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 13 ವಿಧ್ಯಾರ್ಥಿಗಳು 22 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 24 ಮಹಿಳಾ ಹಾಗೂ 8 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 32 ವಿದ್ಯಾರ್ಥಿಗಳು 65 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ, ಒಟ್ಟಾರೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 35 ಮಹಿಳಾ ವಿದ್ಯಾರ್ಥಿನಿಯರು ಹಾಗೂ 10 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 45 ವಿದ್ಯಾರ್ಥಿಗಳು 87 ಚಿನ್ನದ ಪದಕಗಳನ್ನು ಹಂಚಿಕೊಂಡಿರುತ್ತಾರೆ ಎಂದರು.
ಘಟಿಕೋತ್ಸವದಲ್ಲಿ 30 ಮಹಿಳಾ ಹಾಗೂ 40 ಪುರುಷರು ಸೇರಿ ಒಟ್ಟು 70 ಅಭ್ಯರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ(ಪಿಹೆಚ್.ಡಿ) ಪದವಿ ಪ್ರದಾನ ಮಾಡಲಾಗುವುದು, 2024-25 ನೇ ಸಾಲಿನ ಸ್ನಾತಕ ಬಿ.ಎ., ಬಿ.ಎಸ್.ಡಬ್ಲೂ, ಬಿ.ವಿ.ಎ,ಬಿ.ಕಾಂ, ಬಿಬಿಎ, ಬಿ.ಇಡಿ., ಬಿ.ಪಿ.ಇಡಿ.,ಬಿ.ಎಸ್ಸಿ ಹಾಗೂ ಬಿ.ಸಿ.ಎ ಪದವಿಗಳಲ್ಲಿ 6401 ಮಹಿಳಾ ಹಾಗೂ 4283 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 10684 ವಿದ್ಯಾರ್ಥಿಗಳು ಸ್ನಾತಕ ಪದವಿ ಪಡೆಯಲು ಅರ್ಹರಾಗಿರುತ್ತಾರೆ ಎಂದರು.
2024-25 ನೇ ಸಾಲಿನ ಸ್ನಾತಕೋತ್ತರ ಎಂ.ಎ., ಎಂ.ಎಸ್.ಡಬ್ಲೂ,ಎಂ.ವಿ.ಎ,ಎಂ.ಕಾಂ,ಎಂಬಿಎ, ಎಂ.ಇಡಿ. ಎಂ.ಪಿ.ಇಡಿ.,ಎಂ.ಎಸ್ಸಿ ಹಾಗೂ ಎಂ.ಸಿ.ಎ ಪದವಿಗಳಲ್ಲಿ 1191 ಮಹಿಳಾ ಹಾಗೂ 831 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 2022 ವಿಧ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳು ಸೇರಿ ಒಟ್ಟು 12706 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.
ಕುಲಸಚಿವ ಎಸ್.ಬಿ.ಗಂಟಿ, ಪರೀಕ್ಷಾಂಗ ಕುಲಸಚಿವ ಪೆÇ್ರ.ಸಿ.ಕೆ.ರಮೇಶ್, ಹಣಕಾಸು ಅಧಿಕಾರಿ ವಂದನಾ, ಡೀನರಾದ ಪೆÇ್ರ.ಕೆ.ವೆಂಕಟೇಶ, ಪೆÇ್ರ.ಎಂ.ಯು.ಲೋಕೇಶ, ಪೆÇ್ರ.ಗೋವಿಂದಪ್ಪ, ಪೆÇ್ರ.ಶ್ರೀನಿವಾಸ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಕುಮಾರ ಕಣಸೋಗಿ, ದಾವಣಗೆರೆ ಸಿಂಡಿಕೇಟ್ ಮತ್ತು ಅಕಾಡೆಮಿಕ ಕೌನ್ಸಿಲ್ ಸದಸ್ಯರು ಉಪಸ್ಥಿತರಿದ್ದರು.

































