ಉತ್ತರ ಪ್ರದೇಶ: ಇಲ್ಲಿನ ಅಮ್ರೋಹ ಜಿಲ್ಲೆಯಲ್ಲಿ 30 ವರ್ಷದ ಮುಸ್ಲಿಂ ಮಹಿಳೆಯೊಬ್ಬಳು 12ನೇ ತರಗತಿ ವಿದ್ಯಾರ್ಥಿಯೊಂದಿಗೆ ಮದುವೆಯಾಗಿದ್ದಾಳೆ.
ಸ್ಥಳೀಯ ದೇವಾಲಯದಲ್ಲಿ ಮೂವರು ಮಕ್ಕಳ ತಾಯಿ ಶಬನಂ ಮತ್ತು 12ನೇ ತರಗತಿಯ ವಿದ್ಯಾರ್ಥಿ 18ವರ್ಷದ ಯುವಕ ಶಿವ ಎಂಬಾತನನ್ನು ಮದುವೆಯಾಗಿದ್ದಾಳೆ. ಈ ಮದುವೆಗೆ ಶಿವನ ಪೋಷಕರು ಮತ್ತು ಗ್ರಾಮದ ಹಿರಿಯರು ಒಪ್ಪಿಗೆ ಸೂಚಿಸಿದ್ದಾರೆ. ಈ ಮದುವೆಗೂ ಮುನ್ನ ಮುಸ್ಲಿಂ ಧರ್ಮಕ್ಕೆ ಸೇರಿದ್ದ ಶಬನಂರನ್ನು ಸ್ಥಳೀಯ ಅರ್ಚಕರು ಹಿಂದೂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ. ಬಳಿಕ ಆಕೆಗೆ ಶಿವಾನಿ ಎಂದು ಮರು ನಾಮಕರಣ ಮಾಡಿ ಬಳಿಕ ಮದುವೆ ಮಾಡಿಸಿದ್ದಾರೆ. ಶಬ್ನಮ್ ಪೋಷಕರು ಈಗ ಜೀವಂತವಾಗಿಲ್ಲ. ಆಕೆ ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದಳು.ಈಗ ಇಬ್ಬರಿಂದಲೂ ವಿಚ್ಚೇದನ ಪಡೆದಿದ್ದಾಳೆ. ಸದ್ಯ ಪೊಲೀಸರು ಈ ವಿವಾಹವನ್ನು ಪರಿಶೀಲಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಕಾನೂನು ದೂರುಗಳು ದಾಖಲಾಗಿಲ್ಲ ಎಂದು ಹೇಳಿದರು. ಇತ್ತೀಚೆಗೆ, ಶಬನಂ 12ನೇ ತರಗತಿಯ 18 ವರ್ಷದ ಯುವಕ ಶಿವನೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಳು. ಬಳಿಕ ಈ ವಿಚಾರ ಎಲ್ಲರಿಗೂ ತಿಳಿಯುತ್ತಲೇ ಆಕೆ ಕಳೆದ ವಾರ ಶುಕ್ರವಾರ ತನ್ನ 2ನೇ ಗಂಡ ತೌಫಿಕ್‌ನಿಂದ ವಿಚ್ಛೇದನ ಪಡೆದಿದ್ದಾಳೆ. ಬಳಿಕ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಶಿವಾನಿ ಎಂಬ ಹೆಸರನ್ನು ಮರುನಾಮಪಕರಣ ಮಾಡಿಕೊಂಡು ಪ್ರಿಯಕರ ಶಿವನನ್ನು ಮದುವೆಯಾಗಿದ್ದಾಳೆ.
ಇನ್ನು ವರ ಶಿವನ ತಂದೆ, ಸೈದನ್ವಾಲಿ ನಿವಾಸಿ ದತಾರಾಮ್ ಸಿಂಗ್ ಈ ಬಗ್ಗೆ ಮಾತನಾಡಿದ್ದು, ತಮ್ಮ ಪುತ್ರನ ನಿರ್ಧಾರವನ್ನು ಬೆಂಬಲಿಸುತ್ತೇನೆ. ದಂಪತಿ ಸಂತೋಷವಾಗಿದ್ದರೆ ನಮ್ಮ ಕುಟುಂಬ ಸಂತೋಷವಾಗಿರುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ ಇಬ್ಬರೂ ಶಾಂತಿಯುತವಾಗಿ ಒಟ್ಟಿಗೆ ಬದುಕುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದರು.
ಅಂದಹಾಗೆ ಉತ್ತರ ಪ್ರದೇಶವು ಮತಾಂತರ ವಿರೋಧಿ ಕಾನೂನು ಜಾರಿಯಲ್ಲಿರುವ ರಾಜ್ಯವಾಗಿದ್ದು, ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಮತಾಂತರ ನಿಷೇಧ ಕಾಯ್ದೆ, 2021 ಬಲವಂತ, ವಂಚನೆ ಅಥವಾ ಯಾವುದೇ ಇತರ ವಂಚನೆಯ ಮೂಲಕ ಧಾರ್ಮಿಕ ಮತಾಂತರವನ್ನು ನಿಷೇಧಿಸುತ್ತದೆ.