ನವದೆಹಲಿ: ಬರೋಬ್ಬರಿ 67 ಅಡಿ ಎತ್ತರದ ಬಾಹ್ಯಾಕಾಶ ಶಿಲೆಯಾಗಿರುವ ಕ್ಷುದ್ರಗ್ರಹವು ಗಂಟೆಗೆ 26,500 ಕಿ.ಮೀ ವೇಗದಲ್ಲಿ ಭೂಮಿಯತ್ತ ಸಮೀಪಿಸುತ್ತಿದೆ ಎಂದು ತಿಳಿದು ಬಂದಿದೆ. ನಾಸಾ ವಿಜ್ಞಾನಿಗಳ ಪ್ರಕಾರ ಕ್ಷುದ್ರಗ್ರಹವು 2025 CA2 ಮಂಗಳವಾರ(ಫೆ.18) ಸಂಜೆ 4:33ಕ್ಕೆ ಸರಿ ಸುಮಾರಿಗೆ ಭೂಮಿಯ ಸಮೀಪ ಹಾದು ಹೋಗಲಿದೆ. ಈ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ಅಪಾಯ ಇಲ್ಲ ಎಂದು ನಾಸಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಭೂಮಿಯಿಂದ ಸುಮಾರು 3,170,000 ಮೈಲುಗಳಷ್ಟು ದೂರದಲ್ಲಿ ಅಂದರೆ, ಚಂದ್ರನ ದೂರಕ್ಕಿಂತ ಐದು ಪಟ್ಟು ಹೆಚ್ಚಿನ ದೂರದಲ್ಲಿ ಈ ಕ್ಷುದ್ರಗ್ರಹ ಹಾದುಹೋಗಲಿದೆ ಎಂದು ಮೂಲಗಳು ತಿಳಿಸಿವೆ.
ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL) ಫೆಬ್ರವರಿ 18, 2025 ರಂದು ಭೂಮಿಯ ಮೂಲಕ ಹಾದುಹೋಗಲಿರುವ ಕ್ಷುದ್ರಗ್ರಹ 2025 CA2 ಅನ್ನು ಸೂಕ್ಷ್ಮವಾಗಿ ಗಮನಿಸಿದೆ. ಸರಿಸುಮಾರು 67 ಅಡಿ ಕ್ಷುದ್ರಗ್ರಹವು ಈ ಭೂಮಿಯ ಸಮೀಪವಿದ್ದು, ನಮ್ಮ ಗ್ರಹಕ್ಕೆ ಯಾವುದೇ ಅಪಾಯವನ್ನುಂಟುಮಾಡುವುದಿಲ್ಲ. ಕೆಲವು ವರ್ಷಗಳಿಗೊಮ್ಮೆ ಇಂಥ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ಆ ಕುರಿತು ಹೆಚ್ಚಿನ ಸಂಶೋಧನೆಗಳನ್ನು ನಡೆಸಲಾಗುವುದು ಎಂದು ನಾಸಾ ಹೇಳಿದೆ.
ಭೂಮಿಯ ಸಮೀಪವಿರುವ ಗ್ರಹಗಳು ಭೂಮಿಯ 1.3 ಖಗೋಳ ಘಟಕಗಳ ಒಳಗೆ ಬರುವ ಆಕಾಶಕಾಯಗಳಾಗಿವೆ. ಅವುಗಳನ್ನು ಅಧ್ಯಯನ ಮಾಡುವುದರಿಂದ ಸೌರವ್ಯೂಹದ ರಚನೆ ಮತ್ತುಅದರಿಂದಾಗುವ ಪರಿಣಾಮ, ಅಪಾಯಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಇಂದು ಭೂಮಿಯ ಮೇಲೆ ಹಾದು ಹೋಗಲಿರುವ ಕ್ಷುದ್ರಗ್ರಹವು ಭೂಮಿಯಿಂದ ಸುಮಾರು 3,170,000 ಮೈಲುಗಳಷ್ಟು ದೂರದಲ್ಲಿದೆ. ಚಂದ್ರನ ದೂರಕ್ಕಿಂತ ಐದು ಪಟ್ಟು ಹೆಚ್ಚಿನ ದೂರದಲ್ಲಿ ಈ ಕ್ಷುದ್ರಗ್ರಹವು ಹಾದುಹೋಗಲಿದೆ.
ಅಪೋಫಿಸ್ ನಂತರ ಭೂಮಿಯ ಸಮೀಪಕ್ಕೆ ಮತ್ತೊಂದು ಕ್ಷುದ್ರಗ್ರಹ ಸಮೀಪಕ್ಕೆ ಬರಲಿದೆ. 2024 YR4 ಎಂದು ಈ ಈ ಕ್ಷುದ್ರಗ್ರಹಕ್ಕೆ ಹೆಸರಿಡಲಾಗಿದೆ. ಈ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯಬಹುದು ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆರ್ಯಭಟ ವೀಕ್ಷಣಾ ವಿಜ್ಞಾನ ಸಂಶೋಧನಾ ಸಂಸ್ಥೆಯ (ARIES) ಹಿರಿಯ ಖಗೋಳಶಾಸ್ತ್ರಜ್ಞ ಡಾ. ಶಶಿಭೂಷಣ್ ಪಾಂಡೆ ಅವರು ಅಪಾಯಕಾರಿ 2024 YR4 ಕ್ಷುದ್ರಗ್ರಹದ ಬಗ್ಗೆ ಮಾತನಾಡಿದ್ದಾರೆ. ಈ ಕ್ಷುದ್ರಗ್ರಹ ಅಪೋಫಿಸ್‌ನಷ್ಟು ದೊಡ್ಡದಲ್ಲ ಎಂದು ಮಾಹಿತಿ ನೀಡಿದ್ದಾರೆ.