ಹೊಸವರುಷದ ಆ ರಾತ್ರಿ ಶಿವಮೊಗ್ಗ ನಗರದಲ್ಲಿ ಹೆಚ್ ಸಿದ್ದಯ್ಯ ರೋಡ್ ಸರ್ಕಲ್‌ನಲ್ಲಿ ನಡೆದ ROAD RAGE ಪ್ರಕರಣದಲ್ಲಿ ಕೊಲೆ ಆರೋಪದ ಅಡಿಯಲ್ಲಿ ಕಾರು ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ತೀವ್ರ ಕುತೂಹಲವನ್ನ ಸಹ ಮೂಡಿಸಿತ್ತು ಪೊಲೀಸರ ವಿಳಂಬತೆ ಹಲವು ಅನುಮಾನಗಳಿಗೂ ಕಾರಣವಾಗಿತ್ತು. ಇದೀಗ ಪ್ರಕರಣ ಸಂಬಂದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ BHARATIYA NYAYA SANHITA (BNS), 2023 (U/s-352,351(2),109(1),103(1)) ಅಡಿಯಲ್ಲಿ ಕೇಸ್ ದಾಖಲಾಗಿದೆ.
ಹೆಚ್.ಸಿದ್ದಯ್ಯ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ನಡೆದ ROAD RAGE ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದ. ಆತ ಗೋಪಾಳ ನಿವಾಸಿ ಧನುಷ್ ಎಂದು ಗೊತ್ತಾಗಿತ್ತು. ಇನ್ನೂ ಘಟನೆಯಲ್ಲಿ ಪ್ರಜ್ವಲ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದ. ಆತ ನೀಡಿದ ಹೇಳಿಕೆ ಅನ್ವಯ ಎಫ್‌ಐಆರ್ ದಾಖಲಾಗಿದೆ. ನಗರದ ಬಿಹೆಚ್ ರೋಡ್‌ನಲ್ಲಿರುವ ಶೋರೂಮ್ ಒಂದರ ಬಳಿಯಲ್ಲಿ ವೋಲ್ವೋ ಕಾರೊಂದರ ಮಿರರ್‌ಗೆ ಹೊಸವರುಷ ಸಂಭ್ರಮದಲ್ಲಿ ಓಡಾಡುತ್ತಿದ್ದ ಪ್ರಜ್ವಲ್ ಹಾಗೂ ಧನುಷ್‌ರ ಬೈಕ್‌ನ ಹ್ಯಾಂಡಲ್ ಟಚ್ ಆಗಿದೆ. ಇದೇ ವಿಚಾರಕ್ಕೆ ಕಾರಿನಲ್ಲಿದ್ದ ಆಸಾಮಿ, ಇಬ್ಬರನ್ನು ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದಾನೆ. ಪ್ರತಿಯಾಗಿ ಧನುಷ್ ಕಾರಿನ ಹಿಂಬದಿ ಗಾಜಿಗೆ ಗುದ್ದಿದ್ದ. ಇದೇ ವಿಚಾರಕ್ಕೆ ಫಾಲೋ ಮಾಡಿಕೊಂಡು ಬಂದ ವೋಲ್ವಾ ಕಾರಿನ ಚಾಲಕ ಸಣ್ಣ ರಸ್ತೆಯಾದ ಎಂಕೆಕೆ ರೋಡ್‌ನಲ್ಲಿಯೇ ವಿಪರೀತ ಸ್ಪೀಡಾಗಿ ಕಾರು ಚಲಾಯಿಸಿದ್ದಾನೆ. ಸಿದ್ದಯ್ಯ ಸರ್ಕಲ್ ಬಳಿಯ ಹಂಪ್ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು, ಕಂಟ್ರೋಲ್ ಸಿಗದೇ ಕಾರನ್ನು ಸಹ ಪಲ್ಟಿಯಾಗಿಸಿದ್ದಾನೆ. ಈ ಮೊದಲು ಇಡೀ ಪ್ರಕರಣ ಅಪಘಾತ ಎನ್ನಲಾಗಿತ್ತು. ಆದರೆ ಇದೊಂದು ಉದ್ದೇಶ ಪೂರ್ವಕ ಕೊಲೆ ಎಂದು ಆರೋಪಿಸಲಾಗಿದ್ದು, ಸಾಯಿಸುವ ಉದ್ದೇಶದಿಂದಲೇ ಬೈಕ್‌ನ್ನ ಬೆನ್ನಟ್ಟಿ ಡಿಕ್ಕಿ ಹೊಡೆದಿರುವ ಆರೋಪ ಮಾಡಲಾಗಿದೆ. ಕಾರಿನಲ್ಲಿದ್ದ ಯುವತಿಯರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲವಾದರೂ, ಡ್ರೈವರ್ ನ್ನ ಅರೆಸ್ಟ್ ಮಾಡಲಾಗಿದೆ