16 ವರ್ಷದ ಬಾಲಕನೊಬ್ಬ ತನ್ನ ಖಾಸಗಿ ಅಂಗದ ಮೂಲಕ ಮೂತ್ರಕೋಶಕ್ಕೆ ಫೋನ್ ಚಾರ್ಜರ್ ಸೇರಿಸಿಕೊಂಡ ಘಟನೆ ವಿಯೆಟ್ನಾಂನ ಹೋ ಚಿ ಮಿನ್ಹ್ ನಗರದಲ್ಲಿ ನಡೆದಿದೆ.
ಡಿಸೆಂಬರ್ 7 ರಂದು ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು. ವಿಚಿತ್ರ ಅನುಭವಕ್ಕಾಗಿ ಆನ್ ಲೈನ್ ನಲ್ಲಿ ವೀಡಿಯೊ ವೀಕ್ಷಿಸಿದ್ದ 16 ವರ್ಷದ ಬಾಲಕ ತನ್ನ ಮೂತ್ರನಾಳಕ್ಕೆ ಫೋನ್ ಚಾರ್ಜರ್ ಸೇರಿಸಿಕೊಂಡ. ಅದು ಸಿಲುಕಿಕೊಂಡಾಗ ಅವನಿಗೆ ನೋವುಂಟಾಯಿತು ಮತ್ತು ಯಾರಿಗೂ ಹೇಳಲಿಲ್ಲ.
ಅವನ ನೋವನ್ನು ನೋಡಿ, ಅವನ ಕುಟುಂಬ ಸದಸ್ಯರು ಗೊಂದಲಕ್ಕೊಳಗಾದರು ಮತ್ತು ಅವನನ್ನು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಪರೀಕ್ಷೆಗಳನ್ನು ನಡೆಸಿದಾಗ. ಮೂತ್ರಕೋಶದಲ್ಲಿ ಚಾರ್ಜರ್ ಅನ್ನು ಕಂಡು ಅವರು ಆಶ್ಚರ್ಯಚಕಿತರಾದರು.
ಆನ್ ಬಿನ್ಹ್ ಆಸ್ಪತ್ರೆಯ ವೈದ್ಯರು ಸುಮಾರು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ತ್ವರಿತವಾಗಿ ಮಾಡಿ ಅದನ್ನು ತೆಗೆದುಹಾಕಿದರು. ಎರಡು ದಿನಗಳ ನಂತರ, ಹುಡುಗನಿಗೆ ಕೌನ್ಸೆಲಿಂಗ್ ನೀಡಿ ಕಳುಹಿಸಲಾಯಿತು.
































