ಚಿತ್ರದುರ್ಗ: ಚಿತ್ರದುರ್ಗದಲ್ಲಿ ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾ*ಚಾರ ನಡೆಸಿ ಕೊ*ಲೆ ಮಾಡಿರುವ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕೋವೇರಹಟ್ಟಿ ಮೂಲದ 19 ವರ್ಷದ ವರ್ಷಿತಾ ಬ*ರ್ಬರ ಹ*ತ್ಯೆ ಮಾಡಲಾಗಿದೆ. ವರ್ಷಿತಾ ಪದವಿ ವಿದ್ಯಾರ್ಥಿನಿಯಾಗಿದ್ದು, ವರ್ಷಿತಾ ಮೇಲೆ ಅತ್ಯಾ*ಚಾರ ಎಸಗಿ ಕೊ*ಲೆ ಮಾಡಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.
ವರ್ಷಿತಾ ಜತೆ ಸಂಪರ್ಕದಲ್ಲಿದ್ದ ಮೂರನೇ ಹಂತದ ಕ್ಯಾನ್ಸರ್ ರೋಗಿ ಚೇತನ್ ಈ ಕೃತ್ಯ ಎಸಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ವರ್ಷಿತಾ ಬೇರೊಬ್ಬನ ಜತೆ ಸ್ನೇಹ ಬೆಳೆಸಿದ್ದೇ ಕೊಲೆಗೆ ಕಾರಣ ಎನ್ನಲಾಗಿದೆ. ಚಿತ್ರದುರ್ಗ ನಗರದ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ವರ್ಷಿತಾ ಕೊ*ಲೆಯಾಗಿದ್ದು, ನಿನ್ನೆ ವರ್ಷಿತಾ ಶವ ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶವ ಪತ್ತೆಯಾಗಿತ್ತು.