ತಿರುವನಂತಪುರ: ಕೇರಳದ ಪತ್ತನಂತಿಟ್ಟ ಜಿಲ್ಲೆಯ ಮಲ್ಲಾಸ್ಸೆರಿ ಬಳಿ ಇಂದು ಬೆಳಗ್ಗೆ ಮಿನಿ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ತಿರುವನಂತಪುರಂನಿಂದ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮಿನಿ ಬಸ್ ತೆಲಂಗಾಣದಿಂದ ಶಬರಿಮಲೆಗೆ ಅಯ್ಯಪ್ಪ ಭಕ್ತರನ್ನು ಹೊತ್ತೊಯ್ಯುತ್ತಿತ್ತು. ಮುಂಜಾನೆ 4.15ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತರನ್ನು ಮ್ಯಾಥ್ಯೂ ಈಪೆನ್, ಅವರ ಮಗ ನಿಖಿಲ್, ನಿಖಿಲ್ ಅವರ ಪತ್ನಿ ಅನು ಮತ್ತು ಅನು ಅವರ ತಂದೆ ಬಿಜು ಎಂದು ಗುರುತಿಸಲಾಗಿದೆ. ನಿಖಿಲ್ ಮತ್ತು ಅನು ನವೆಂಬರ್ 30 ರಂದು ವಿವಾಹವಾಗಿದ್ದರು, ತಿರುವನಂತಪುರಂ ವಿಮಾನ ನಿಲ್ದಾಣದಿಂದ ಕರೆದುಕೊಂಡು ಹೋಗುವ ವೇಳೆ ಈ ಘಟನೆ ನಡೆದಿದೆ.