ದುಬೈ : ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡ 2.24 ಮಿಲಿಯನ್ ಡಾಲರ್ ಅಂದರೆ 19.45 ಕೋಟಿ ರೂ. ನಗದು ಬಹುಮಾನ ಪಡೆಯಲಿದೆ.
ಚಾಂಪಿಯನ್ ಟ್ರೋಫಿ ನಗದು ಬಹುಮಾನ ಮೊತ್ತವನ್ನು ಇಂದು ಐಸಿಸಿ ಪ್ರಕಟಿಸಿದೆ. ಈ ಬಾರಿ ವಿಜೇತ ತಂಡ 2.24 ದಶಲಕ್ಷ ಡಾಲರ್, ರನ್ನರ್-ಅಪ್ ತಂಡ 1.12 ದಶಲಕ್ಷ ಡಾಲರ್ ಪಡೆಯಲಿದೆ.
ಈ ಬಾರಿ ಟೂರ್ನಿಯ ಒಟ್ಟು ನಗದು ಬಹುಮಾನ ಮೊತ್ತ 6.9 ದಶಲಕ್ಷ ಡಾಲರ್‌ಗೆ ಏರಿಕೆಯಾಗಿದೆ. 2017ಕ್ಕೆ ಹೋಲಿಸಿದರೆ ಒಟ್ಟು ನಗದು ಬಹುಮಾನದ ಮೊತ್ತ 53% ಏರಿದೆ. 2017 ರಲ್ಲಿ ಒಟ್ಟು ಬಹುಮಾನದ ಮೊತ್ತ 4.5 ದಶಲಕ್ಷ ಡಾಲರ್ ಆಗಿದ್ದರೆ ವಿಜೇತ ತಂಡಕ್ಕೆ 2.22 ದಶಲಕ್ಷ ಡಾಲರ್ ದೊರಕಿತ್ತು.
ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ 5,60,000 ಡಾಲರ್ ನೀಡಲಾಗುತ್ತದೆ. ತಂಡಗಳು ಆಡುವ ಪ್ರತಿಯೊಂದು ಪಂದ್ಯವು ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖ್ಯವಾಗಿರುತ್ತದೆ. ಪ್ರತಿ ಪಂದ್ಯ ಗೆದ್ದರೂ 34,000 ಡಾಲರ್ (29.52 ಲಕ್ಷ ರೂ.) ನೀಡಲಾಗುತ್ತದೆ. 5ನೇ ಅಥವಾ 6ನೇ ಸ್ಥಾನ ಪಡೆಯುವ ತಂಡಗಳಿಗೆ ತಲಾ 3,50,000 ಡಾಲರ್ ನೀಡಲಾಗುತ್ತದೆ. 7ನೇ ಮತ್ತು 8ನೇ ಸ್ಥಾನ ಪಡೆಯುವ ತಂಡಗಳಿಗೆ 1,40,000 ಡಾಲರ್ ನೀಡಲಾಗುತ್ತದೆ.