ಬೆಳಗಾವಿ: ಕಾರ್ ರಿವರ್ಸ್ ತೆಗೆಯುವ ವೇಳೆ ಕಾರ್ ನ ಚಕ್ರಕ್ಕೆ ಸಿಲುಕಿ ಎರಡು ವರ್ಷದ ಮಗು ಮೃತಪಟ್ಟ ಘಟನೆ ಬೆಳಗಾವಿಯ ಖಜಗೌಡನಟ್ಟಿ ಗ್ರಾಮದಲ್ಲಿ ನಡೆದಿದೆ.
ಅನುಶ್ರೀ ರಾಮಕೃಷ್ಣ ಖೋತ(2) ಮೃತಪಟ್ಟ ಮಗು. ಪಕ್ಕದ ಮನೆಯ ಬಸವರಾಜ ಖೋತ ಅವರು ತಮ್ಮ ಕಾರ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಘಟನೆ ನಡೆದಿದೆ.
ಮನೆ ಬಳಿ ಆಟವಾಡಿಕೊಂಡಿದ್ದ ಮಗು ಆಕಸ್ಮಿಕವಾಗಿ ಹಿಂದೆ ಬರುತ್ತಿದ್ದ ಕಾರ್ ಚಕ್ರದ ಅಡಿಗೆ ಸಿಲುಕಿ ಮೃತಪಟ್ಟಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.