ನವದೆಹಲಿ : ಜಮ್ಮು-ಕಾಶ್ಮೀರದಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಧಾನ ಕಚೇರಿ ಬಳಿಯ ಕಸದ ತೊಟ್ಟಿಯಲ್ಲಿ ಚೀನಾ ನಿರ್ಮಿತ ಅಸಾಲ್ಟ್ ರೈಫಲ್ ಸ್ಕೋಪ್ ಪತ್ತೆಯಾಗಿದೆ.
ಜಮ್ಮುವಿನ ಅಸ್ರಾರಾಬಾದ್ನಲ್ಲಿ 6 ವರ್ಷದ ಮಗುವೊಂದು ಸ್ನೈಪರ್ಗೆ ಬಳಸುವ ರೈಫಲ್ ಸ್ಕೋಪ್ ಹಿಡಿದು ಆಟವಾಡುತ್ತಿದ್ದದ್ದು ಕಂಡುಬಂದಿದೆ. ಬಳಿಕ ಪೊಲೀಸರು ಆ ಮಗುವಿನ ಕುಟುಂಬಸ್ಥರ ವಿಚಾರಣೆ ನಡೆಸಿದಾಗ, ಕಸದ ತೊಟ್ಟಿ ಬಳಿ ಮಗುವಿಗೆ ಸಿಕ್ಕಿದ್ದು ಅಂತ ಅವರು ಹೇಳಿದ್ದಾರೆ. ಈ ಸ್ಕೋಪ್ ಅನ್ನು ದೂರದ ಗುರಿಗಾಗಿ ಸ್ನೈಪರ್ ರೈಫಲ್ಗಳಿಗೆ ಬಳಸುತ್ತಾರೆ.
ಇದು ಚೀನಾದ ಸ್ನೈಪರ್ ರೈಫಲ್ ಸ್ಕೋಪ್ ಅನ್ನೋದು ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಸ್ಕೋಪ್ ಪತ್ತೆಯಾದ ಸ್ಥಳಕ್ಕೆ ಜಮ್ಮು-ಕಾಶ್ಮೀರದ ಹಿರಿಯ ಅಧಿಕಾರಿಗಳೂ ಭೇಟಿ ನೀಡಿದ್ದಾರೆ. ಮಹತ್ವದ ಬೆಳವಣಿಗೆ ಬಳಿಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

































