ಶಿರಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್ ನಲ್ಲಿ ಕೆಎಸ್ ಆರ್ ಟಿ ಸಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಾಗೂ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ ಗಳ ನಡುವೆ ಈ ಅಪಘಾತ ಸಂಭವಿಸಿದೆ. ತಿರುವು ರಸ್ತೆಯಲ್ಲಿ ಬೆಂಗಳೂರು ಕಡೆಯಿಂದ ಬರುತ್ತಿದ್ದ ಬಸ್ ರಾಂಗ್ ಸೈಡ್ ನಲ್ಲಿ ಬಂದ ಕಾರಣ ಈ ಅಪಘಾತ ಸಂಭವಿಸಿದೆ . ಎದುರಿನಿಂದ ಬರುವ ಬಸ್ ರಾಂಗ್ ಸೈಡ್ ನಲ್ಲಿ ಬರುವುದನ್ನು ಗಮನಿಸಿದ ಇನ್ನೊಂದು ಬಸ್ ಚಾಲಕ ಬಸ್ಸನ್ನು ಆದಷ್ಟು ರಸ್ತೆಯ ಸೈಡ್ ಗೆ ತೆಗೆದುಕೊಂಡ ಹೋದ ಕಾರಣ ದೊಡ್ಡ ಹಾನಿ ಉಂಟಾಗುವುದು ತಪ್ಪಿದೆ. ಅಪಘಾತದಲ್ಲಿ ಎರಡೂ ಬಸ್ ಗಳ ಮುಂಭಾಗ ಜಕಂ ಗೊಂಡು ಗಾಜುಗಳು ಪುಡಿಯಾಗಿದೆ. ಬಸ್ ನಲ್ಲಿ ಇದ್ದ ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಎರಡು ಬಸ್ ಗಳು ರಸ್ತೆಯ ನಡುವೆ ನಿಂತಿದ್ದ ಕಾರಣ ಕೆಲ ಕಾಲ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ವೈತ್ಯಯಗೊಂಡಿತ್ತು.
