ಬೆಂಗಳೂರು: ಪೊಲೀಸರ ಊಟದಲ್ಲಿ ಜಿರಳೆ, ಹುಳು ಪತ್ತೆಯಾದ ಹಿನ್ನೆಲೆ ಕಳಪೆ ಊಟ ಪೂರೈಸಿದ ಮಾಲೀಕನ ಮೇಲೆ ದೂರು ದಾಖಲಾಗಿದೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಕ್ಯಾಟರಿಂಗ್ ಮಾಲೀಕ ರಾಜೇಶ್ ಎಂಬುವವರ ಮೇಲೆ ಎನ್‌ಸಿಆರ್ ದಾಖಲಾಗಿದೆ.
ಲಾಫಿಂಗ್ ವಾಟರ್ ಪ್ರೊಡಕ್ಷನ್ ಕ್ಯಾಟರಿಂಗ್ ಸರ್ವಿಸ್ ಹೊಂದಿರುವ ರಾಜೇಶ್ ಯಲಹಂಕ ಏರ್ ಶೋ ಬಂದೋಬಸ್ತ್‌ಗೆ ನಿಯೋಜನೆಗೊಂಡ ಪೊಲೀಸರಿಗೆ ಕಳಪೆ ಊಟ ಪೂರೈಕೆ ಮಾಡಿದ್ದು, ಈ ಊಟದಲ್ಲಿ ಹುಳು ಮತ್ತು ಜಿರಳೆ ಪತ್ತೆಯಾಗಿತ್ತು.
ಬಂದೋಬಸ್ತ್‌ಗೆ ನಿಯೋಜನೆಗೊಂಡ ಪೊಲೀಸರಿಗೆ 200ರೂ.ಗೆ ಸಮನಾದ ಗುಣಮಟ್ಟದ ಊಟ ಪೂರೈಕೆಗೆ ಹಣ ನೀಡಲಾಗುತ್ತು, ಆದ್ರೂ ಕೂಡ ಕಳಪೆ ಊಟ ಪೂರೈಕೆ ಮಾಡಲಾಗಿದೆ. ಹೀಗಾಗಿ ರಾಜೇಶ್ ವಿರುದ್ಧ ದೂರು ದಾಖಲಾಗಿದೆ.