ದೆಹಲಿ: ದೆಹಲಿ ರೈಲು ನಿಲ್ದಾಣದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಜನರು ಸಾವನ್ನಪ್ಪಿದ್ದಾರೆ.ಗೊಂದಲಮಯ ಘೋಷಣೆಯಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಪ್ಲಾಟ್ಫಾರ್ಮ್ 12 ರಿಂದ ಪ್ಲಾಟ್ಫಾರ್ಮ್ 16ಕ್ಕೆ ರೈಲು ಚಲಿಸಲಿದೆ ಎಂದು ಹಠಾತ್ ಘೋಷಣೆ ಮಾಡಿದ ಬೆನ್ನಲ್ಲೇ ಈ ಅಪಘಾತ ಸಂಭವಿಸಿದೆ.
ರೈಲು ಬರಲು ವಿಳಂಬವಾಗಿದ್ದಲ್ಲದೆ ಪ್ಲಾಟ್ಫಾರ್ಮ್ ಬದಲಾಯಿಸಿ ಘೋಷಿಸಿದ್ದು ದುರಂತಕ್ಕೆ ಕಾರಣ ಎನ್ನಲಾಗಿದೆ. ರೈಲ್ವೆ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅಮಾಯಕರ ಜೀವಗಳು ಬಲಿಯಾಗಿವೆ.